For Quick Alerts
  ALLOW NOTIFICATIONS  
  For Daily Alerts

  ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಅಭಿನಯದ ದಬಾಂಗ್ 3 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೇ ಡಿಸೆಂಬರ್ 20 ರಂದು ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತೆರೆಕಾಣುತ್ತಿದೆ.

  ಇದೀಗ, ದಬಾಂಗ್ 3 ಸಿನಿಮಾ ರಿಲೀಸ್ ಗೂ ಮೊದಲೇ ಸಲ್ಲು ಭಾಯ್ ಬಿಟೌನ್ ಗೆ ಸರ್ಪ್ರೈಸ್ ನೀಡಿದ್ದಾರೆ. ದಬಾಂಗ್ ಚಿತ್ರದ ಸರಣಿ ಮತ್ತೆ ಮುಂದುವರಿಯುತ್ತೆ ಎಂಬ ಸುಳಿವು ನೀಡಿದ್ದಾರೆ ಬ್ಯಾಡ್ ಬಾಯ್ ಸಲ್ಲು.

  'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!

  ಹೌದು, ದಬಾಂಗ್ 4 ಸಿನಿಮಾ ಮಾಡುವ ತಯಾರಿ ನಡೆಸಿರುವ ಬಗ್ಗೆ ಖುದ್ದು ಸಲ್ಮಾನ್ ಖಾನ್ ಮಾತನಾಡಿದ್ದಾರೆ. ''ನಾವು ಈಗಾಗಲೇ ದಬಾಂಗ್ 4 ಸ್ಕ್ರಿಪ್ಟ್ ರೆಡಿ ಮಾಡಿದ್ದೀವಿ'' ಎಂದು ಹೇಳುವ ಮೂಲಕ ಅಚ್ಚರಿ ನೀಡಿದ್ದಾರೆ. ಮಾತು ಮುಂದುವರಿಸಿದ ಸಲ್ಲು ''ಒಮ್ಮೊಮ್ಮೆ ಒಂದು ಸಿನಿಮಾ, ಇನ್ನೊಂದು ಚಿತ್ರಕ್ಕೆ ನಾಂದಿಯಾಗುತ್ತೆ'' ಎಂದು ಹೇಳಿ ಕುತೂಹಲ ಮೂಡಿಸಿದರು.

  ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ

  ಸಲ್ಮಾನ್ ಖಾನ್ ಮಾತು ಕೇಳಿದ್ರೆ ದಬಾಂಗ್ 4 ಮಾಡುವುದು ಖಚಿತ ಎಂಬ ಅನುಮಾನ ಕಾಡುತ್ತಿದೆ. ಆದರೆ, ಎಷ್ಟು ಗಂಭೀರವಾಗಿ ಹೇಳಿದ್ರು ಅಥವಾ ಕಾಮಿಡಿಯಾಗಿ ಹೇಳಿದ್ರಾ ಎನ್ನುವುದು ಅರ್ಥವಾಗದ ಮಾತಾಗಿದೆ.

  ಅಂದ್ಹಾಗೆ, ದಬಾಂಗ್ 3 ಚಿತ್ರವನ್ನು ಪ್ರಭುದೇವ ನಿರ್ದೇಶನ ಮಾಡಿದ್ದು, ಸುದೀಪ್, ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಅರ್ಬಾಜ್ ಖಾನ್ ಜಂಟಿಯಾಗಿ ನಿರ್ಮಿಸಿದ್ದಾರೆ.

  English summary
  Before Dabangg 3, Salman khan gave surprise news to Bollywood. he was already written script for dabangg 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X