ಸಿನಿಮಾ ಸೋತರೂ, 'ರಿಯಲ್ ಹೀರೋ' ಎನಿಸಿದ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡಿದ್ದ 'ರಾಧೇ' ಸಿನಿಮಾ ಸೋಲು ಕಂಡಿತ್ತು. ಭಾರಿ ನಿರೀಕ್ಷೆಯಿಂದ ರಿಲೀಸ್ ಆಗಿದ್ದ ಚಿತ್ರ ನೆಲೆಕಚ್ಚಿತ್ತು. ಆದ್ರೀಗ, ಸಲ್ಲು ಹೆಸರು ಚರ್ಚೆಯಾಗುತ್ತಿರುವುದು ಸಿನಿಮಾ ವಿಚಾರಕ್ಕಲ್ಲ. ತನ್ನ ಮಾನವೀತೆ ಗುಣದಿಂದ ಜನರ ಕಷ್ಟಕ್ಕೆ ಸ್ಪಂದಿಸಿರುವುದಕ್ಕೆ.

ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಮತ್ತು ಅವರ ಮಗ ಜೀಶಾನ್ ಸಿದ್ದಿಕಿ ಅವರ ಜೊತೆ ಕೈ ಜೋಡಿಸಿದ ಸಲ್ಮಾನ್ ಖಾನ್ ಕೊರೊನಾ ರೋಗಿಗಳಿಗಾಗಿ 500 ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಿದ್ದಾರೆ.

ಈ ಕುರಿತು ಸ್ವತಃ ಸಲ್ಮಾನ್ ಖಾನ್ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದು, ''ಮೊದಲ ಹಂತದಲ್ಲಿ 500 ಆಕ್ಸಿಜನ್ ಸಾಂದ್ರಕಗಳು ಮುಂಬೈ ಬಂದು ತಲುಪಿದೆ. ಯಾರಿಗೆ ಆಕ್ಸಿಜನ್ ಅಗತ್ಯವಿದೆಯೋ ಅಂತವರು ನಮ್ಮನ್ನು ಸಂಪರ್ಕಿಸಿ. ನಾವು ಇದನ್ನು ಉಚಿತವಾಗಿ ನೀಡುತ್ತೇವೆ. ಉಪಯೋಗಿಸಿ ಮುಗಿದ ಮೇಲೆ ಹಿಂತಿರುಗಿಸಿ'' ಎಂದು ಹೇಳಿ ಫೋನ್ ನಂಬರ್ ಹಂಚಿಕೊಂಡಿದ್ದಾರೆ.

 Salman Khan Procures 500 Oxygen Concentrators For COVID Patients

ಸಲ್ಮಾನ್ ಖಾನ್ ಅವರ ಈ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಏನೇ ಹೇಳಿದ್ರು, ನೀವು ಸೂಪರ್ ಹೀರೋ. ಸಿನಿಮಾ ಸೋತರು, ನೀವು ರಿಯಲ್ ಹೀರೋ ಎಂದು ಚಪ್ಪಾಳೆ ಹೊಡೆಯುತ್ತಿದ್ದಾರೆ.

ಅಂದ್ಹಾಗೆ, ಈ ಹಿಂದೆ ಮುಂಬೈನ ಖಾಸಗಿ ರೆಸ್ಟೋರೆಂಟ್‌ವೊಂದರ ಜೊತೆ ಕೈ ಜೋಡಿಸಿದ್ದ ಸಲ್ಮಾನ್ ಖಾನ್ 5000 ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಚಿತ್ರರಂಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ಕುಟುಂಬಗಳಿಗೆ ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇನ್ನುಳಿದಂತೆ ಸಲ್ಮಾನ್ ಖಾನ್, ದಿಶಾ ಪಟಾನಿ ಅಭಿನಯಿಸಿದ್ದ ರಾಧೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಪ್ರಭುದೇವ ನಿರ್ದೇಶಿಸಿದ್ದ ಈ ಚಿತ್ರ ಫ್ಲಾಪ್ ಎನಿಸಿಕೊಂಡಿದೆ. ಆದರೂ, ಹೊರದೇಶಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಒಳ್ಳೆಯ ಕಲೆಕ್ಷನ್ ಮಾಡಿದೆ.

More from Filmibeat

English summary
Bollywood Superstar Salman Khan Procures 500 Oxygen Concentrators For COVID Patients.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X