ಕೊರೊನಾ ಸಂಕಷ್ಟ; ನೆರವಿಗೆ ಧಾವಿಸಿದ ಸಲ್ಮಾನ್ ಖಾನ್

ದೇಶದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಸೃಷ್ಟಿಸಿದೆ. ಕೊರೊನಾ ಸೇಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿತರು ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯ ಸೋಂಕಿತರು ಕೊರೊನಾದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಷ್ಟದ ಸಮಯದಲ್ಲಿ ಸಾಕಷ್ಟು ಮಂದಿ ಮುಂದೆ ಬಂದು ಸಹಾಯ ಮಾಡಿದ್ದರು.

ಮತ್ತೆ ಬಂದಿರುವ ಸಂಕಷ್ಟ ಕಾಲವನ್ನು ಎದುರಿಸಲು ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ನೆರವಾಗಿದ್ದಾರೆ. ಕಳೆದ ವರ್ಷ ಕಷ್ಟದಲ್ಲಿದ್ದ, ಒಂದ್ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸಲ್ಮಾನ್ ಮಾನವೀಯ ಕೆಲಸ ಮಾಡಿದ್ದರು. ಈ ವರ್ಷ ಸಲ್ಮಾನ್ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.

ಟ್ರಕ್ ಮೂಲಕ ಆಹಾರ ವಿತರಣೆ

ಟ್ರಕ್ ಮೂಲಕ ಆಹಾರ ವಿತರಣೆ

ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ಕಾರ್ಮಿಕರ ಹಸಿವನ್ನು ನೀಗಿಸುತ್ತಿದ್ದಾರೆ. ಮುಂಬೈನಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಪೊಲೀಸರು, ಬಿಎಂಸಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ನೆರವಿಗೆ ಸಲ್ಮಾನ್ ಖಾನ್ ನಿಂತಿದ್ದಾರೆ. ಖುದ್ದು ಸಲ್ಮಾನ್ ಖಾನ್ ಅವರೇ ಆಹಾರ ಟ್ರಕ್‌ಗಳನ್ನು ಕಳುಹಿಸುತ್ತಿದ್ದಾರೆ.

ಸಹಾಯವಾಣಿ ಪ್ರಾರಂಭ

ಸಹಾಯವಾಣಿ ಪ್ರಾರಂಭ

ಆಹಾರ ಕಿಟ್ ಹೊತ್ತ ಕ್ರಟ್‌ಗಳು ಅಗತ್ಯವಿರುವವರಿಗೆ ವಿತರಿಸುತ್ತಿದ್ದಾರೆ. ಕಿಟ್‌ನಲ್ಲಿ ಚಹಾ, ಶುದ್ಧ ನೀರು, ಬಿಸ್ಕತ್ ಪ್ಯಾಕ್, ಉಪ್ಪಿಟ್ಟು, ಪಾವ್ ಭಾಜಿ, ವಡಾ ಪಾವ್ ಇರಿಸಿ ವಿತರಿಸುತ್ತಿದ್ದಾರೆ. ಜೊತೆಗೆ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಅವಶ್ಯಕತೆ ಇರುವವರು ಕರೆ ಮಾಡಬಹುದು. ಅಲ್ಲಿಗೆ ಹೋಗಿ ಆಹಾರ ವಿತರಣೆ ಮಾಡಲು ಸಲ್ಮಾನ್ ಖಾನ್ ಟೀಂ ಸಿದ್ಧವಾಗಿದೆ. ಸಲ್ಮಾನ್ ಖಾನ್ ಅವರ ಸೇವೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂಬೈನ ಎಲ್ಲಾ ಕಡೆ ಸೇವೆಗೆ ಸಿದ್ಧವಗಿರುವ ಟ್ರಕ್

ಮುಂಬೈನ ಎಲ್ಲಾ ಕಡೆ ಸೇವೆಗೆ ಸಿದ್ಧವಗಿರುವ ಟ್ರಕ್

ಕಳೆದ ಎರಡು ದಿನಗಳಿಂದ ಸಲ್ಮಾನ್ ಖಾನ್ ತಂಡ ಈ ಸೇವೆಯನ್ನು ಮಾಡುತ್ತಿದೆ, ಮುಂಬೈನ ವರ್ಲಿ ಮತ್ತು ಜುಹು ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಮುಂಬೈಯ ಇತರ ಪ್ರದೇಶಗಳಿಗೂ ವಿಸ್ತರಿಸಲಿದ್ದಾರೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದಾರೆ. ಇನ್ನು ಅನೇಕ ಸ್ಟಾರ್ ಕಲಾವಿದರು ಮುಂದೆ ನೆರವಿಗೆ ಧಾವಿಸಬೇಕೆಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

Recommended Video

ಫಸ್ಟ್ ಟೈಂ ನಾಯಕಿ ತುಟಿಗೆ ಕಿಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸಲ್ಮಾನ್‌ಖಾನ್
ರಾಧೆ ಟ್ರೇಲರ್ ಬಿಡುಗಡೆ

ರಾಧೆ ಟ್ರೇಲರ್ ಬಿಡುಗಡೆ

ಅಂದಹಾಗೆ ಸಲ್ಮಾನ್ ಖಾನ್ ಸದ್ಯ ಬಹುನಿರೀಕ್ಷೆಯ ರಾಧೆ ಸಿನಿಮಾದ ಬಿಡುಗಡೆಗೆ ಸಿದ್ಧವಾಗಿದ್ದಾರೆ. ಹೆಚ್ಚುತ್ತಿರುವ ಕೊರೊನಾದಿಂದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಿದ್ದ ರಾಧೆ ಈಗ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Bollywood Actor Salman Khan provides food trucks for Covid-19 frontline workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X