ಸಲ್ಮಾನ್ 'ರೇಸ್' ಮೊದಲ ದಿನವೇ ರೆಕಾರ್ಡ್ ಕಲೆಕ್ಷನ್.!

By Bharath Kumar

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ರೇಸ್ 3' ಚಿತ್ರ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿದೆ. ಭಾರಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರದ ಮೊದಲ ದಿನ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿತ್ತು.

ಇದೀಗ, ರೇಸ್-3 ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗವಾಗಿದ್ದು, ಈ ವರ್ಷದ ಎಲ್ಲ ಚಿತ್ರಗಳನ್ನ ಹಿಂದಿಕ್ಕಿದೆ ಎಂದು ವಿಮರ್ಶಕ ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಈ ವರ್ಷ ಇಲ್ಲಿಯವರೆಗೂ ತೆರೆಕಂಡಿರುವ ಚಿತ್ರಗಳ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳ ಪೈಕಿಯೂ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಇದು ಮೊದಲ ದಿನದ ಲೆಕ್ಕಾಚಾರವಾದ್ರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳು ಉಡೀಸ್ ಆಗಲಿದೆ. ಸಲ್ಲು ಚಿತ್ರಗಳ ಕಲೆಕ್ಷನ್ ಪಟ್ಟಿ ಮುಂದೆ ಓದಿ....

ರೇಸ್ ಮೊದಲ ದಿನ ಕಲೆಕ್ಷನ್.?

ರೇಸ್ ಮೊದಲ ದಿನ ಕಲೆಕ್ಷನ್.?

ರೆಮೋ ಡಿಸೋಜಾ ನಿರ್ದೇಶನ ಹಾಗೂ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡೀಸ್, ಅನಿಲ್ ಕಪೂರ್ ಸೇರಿದಂತೆ ಹಲವರು ಅಭಿನಯಿಸಿದ್ದ 'ಗ್ಯಾಂಗ್ ಸ್ಟರ್' ಸಿನಿಮಾ ಮೊದಲ ದಿನ 29 ಕೋಟಿ ಗಳಿಸಿದೆ.

ಈ ವರ್ಷ ಅತಿ ಹೆಚ್ಚು ಗಳಿಸಿದ್ದ ಚಿತ್ರಗಳು

ಈ ವರ್ಷ ಅತಿ ಹೆಚ್ಚು ಗಳಿಸಿದ್ದ ಚಿತ್ರಗಳು

ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಟೈಗರ್ ಶ್ರಾಫ್ ಅಭಿನಯದ 'ಭಾಗಿ-2' 25 ಕೋಟಿ, ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' 19 ಕೋಟಿ, 'ವೀರ್ ದೆ ವೆಡ್ಡಿಂಗ್' 10 ಕೋಟಿ, 'ಪ್ಯಾಡ್ ಮ್ಯಾನ್' 10 ಕೋಟಿ ಗಳಿಸುವ ಮೂಲಕ ಮೊದಲ ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆದಿತ್ತು. ಇದೀಗ, 'ರೇಸ್-3' ಚಿತ್ರ ಈ ಎಲ್ಲವನ್ನ ಹಿಂದಿಕ್ಕಿ ಟಾಪ್ ಗೆ ಹೋಗಿದೆ.

ನೂರು ಕೋಟಿ ಕ್ಲಬ್ ಗೇ 'ರೇಸ್'

ನೂರು ಕೋಟಿ ಕ್ಲಬ್ ಗೇ 'ರೇಸ್'

'ರೇಸ್-3' ಚಿತ್ರದ ಓಟ ನೋಡಿದ್ರೆ ಮೊದಲ ಮೂರು ದಿನಗಳಲ್ಲಿಯೇ ನೂರು ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಈ ಹಿಂದೆ ಸಲ್ಮಾನ್ ಅಭಿನಯಿಸಿದ್ದ ಭಜರಂಗಿ ಭಾಯ್ ಜಾನ್ (102 ಕೋಟಿ), ಟೈಗರ್ ಜಿಂದಾ ಹೈ (114 ಕೋಟಿ), ಸುಲ್ತಾನ್ (105 ಕೋಟಿ) ಚಿತ್ರಗಳು ಮೂರೇ ದಿನದಲ್ಲಿ ನೂರು ಕೋಟಿ ಗಳಿಕೆ ಕಂಡಿತ್ತು.

ಸಲ್ಲು ಚಿತ್ರಗಳ ಮೊದಲ ದಿನದ ದಾಖಲೆ

ಸಲ್ಲು ಚಿತ್ರಗಳ ಮೊದಲ ದಿನದ ದಾಖಲೆ

ಇನ್ನು ಸಲ್ಮಾನ್ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ನೋಡುವುದಾದರೇ

2010 - ದಬಾಂಗ್ (14.5 ಕೋಟಿ)

2011 - ಬಾಡಿಗಾರ್ಡ್ (21.6 ಕೋಟಿ)

2012 - ಏಕ್ತಾ ಟೈಗರ್ (32.9 ಕೋಟಿ)

2014 - ಕಿಕ್ (26.4 ಕೋಟಿ)

2015 - ಭಜರಂಗಿ ಭಾಯ್ ಜಾನ್ (27.2 ಕೋಟಿ)

2016 - ಸುಲ್ತಾನ್ (36.5 ಕೋಟಿ )

2017 -ಟ್ಯೂಬ್ ಲೈಟ್ (21.1 ಕೋಟಿ)

2018 - ರೇಸ್-3 (29.1 ಕೋಟಿ)

More from Filmibeat

English summary
salman khan's Race 3 has recorded a whopping sum of Rs. 29 crores on opening day and in turn, placed itself on the top of 2018's list of Biggest Openers reported trade analyst Taran Adarsh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X