For Quick Alerts
  ALLOW NOTIFICATIONS  
  For Daily Alerts

  ಜೈಲಿನಲ್ಲಿ ಎರಡು ರಾತ್ರಿ ಕಳೆದ ಬಳಿಕ ಮನೆಗೆ ಮರಳಿದ ಸಲ್ಮಾನ್ ಖಾನ್

  By Harshitha
  |

  ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೋಧ್ ಪುರ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಮೇಲೆ 'ಖೈದಿ ನಂ.106' ಆಗಿ ಕಾರಾಗೃಹದ ವಾರ್ಡ್ ನಂಬರ್ 2 ರಲ್ಲಿ ಸಲ್ಮಾನ್ ಖಾನ್ ಎರಡು ರಾತ್ರಿ ಕಳೆದರು.

  ಜೋಧ್ ಪುರ ಸೆಂಟ್ರಲ್ ಜೈಲಿನಲ್ಲಿ ತಿಂಡಿ-ಊಟ ಸೇವಿಸದೆ ಆತಂಕದಲ್ಲಿ ಕಾಲ ಕಳೆದ ಸಲ್ಮಾನ್ ಖಾನ್ ಗೆ ಜಾಮೀನು ಮಂಜೂರಾಗಿದೆ. 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಸಲ್ಮಾನ್ ಖಾನ್ ಗೆ ಜಾಮೀನು ನೀಡಲಾಗಿದೆ.

  ಸಲ್ಮಾನ್ ಖಾನ್ ಗೆ ಜಾಮೀನು ಮಂಜೂರು ಮಾಡಿದ ಬಗ್ಗೆ ಬಿಷ್ಣೋಯಿ ಸಮುದಾಯ ಅಸಮಾಧಾನ ವ್ಯಕ್ತಪಡಿಸಿತು. ಆದ್ರೆ, ತಮ್ಮ ನೆಚ್ಚಿನ ನಟನಿಗೆ ಜಾಮೀನು ಸಿಗುತ್ತಿದ್ದಂತೆಯೇ ಸಲ್ಲು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದರು.

  ಜೈಲಿನಲ್ಲಿ ಖೈದಿ ನಂ.106 ಸಲ್ಮಾನ್ ನಿದ್ದೆ ಮಾಡ್ತಿಲ್ಲ, ಹೊಟ್ಟೆಗೇನೂ ತಿಂತಿಲ್ಲ!ಜೈಲಿನಲ್ಲಿ ಖೈದಿ ನಂ.106 ಸಲ್ಮಾನ್ ನಿದ್ದೆ ಮಾಡ್ತಿಲ್ಲ, ಹೊಟ್ಟೆಗೇನೂ ತಿಂತಿಲ್ಲ!

  ನ್ಯಾಯಾಲಯದ ಆದೇಶದ ಪ್ರತಿ ಜೋಧ್ ಪುರ ಸೆಂಟ್ರಲ್ ಜೈಲು ತಲುಪಿದ ಬಳಿಕ ಸಲ್ಮಾನ್ ರನ್ನ ಬಿಡುಗಡೆ ಮಾಡಲಾಯಿತು. ರಾತ್ರಿ 8.15 ಸುಮಾರಿಗೆ ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿರುವ ತಮ್ಮ ನಿವಾಸ ತಲುಪಿದರು ಸಲ್ಮಾನ್ ಖಾನ್. ಮರಳಿ ಮನೆ ತಲುಪಿದ ಸಲ್ಮಾನ್ ಖಾನ್ ರನ್ನ ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.

  English summary
  Jodhpur court had convicted Bollywood Actor Salman Khan in 1998 Blackbuck poaching case. After spending 2 nights in Jail, Salman Khan was granted bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X