ಗಳಿಕೆಯಲ್ಲಿ ಮುಗ್ಗರಿಸಿದ ದಬಾಂಗ್: ಸಲ್ಮಾನ್ ಖಾನ್ ಹೇಳಿದ್ದೇನು?

ಮೊದಲ ಮೂರು ದಿನದಲ್ಲಿ ಉತ್ತಮ ಗಳಿಕೆ ಕಂಡಿದ್ದ ದಬಾಂಗ್ ಸಿನಿಮಾ ನಂತರ ದಿನಗಳಲ್ಲಿ ಹಿನ್ನಡೆ ಅನುಭವಿಸಿದೆ. ಶುಕ್ರವಾರ ತೆರೆಕಂಡಿದ್ದ ದಬಾಂಗ್ 3 ಸಿನಿಮಾ ಮೊದಲ ವಾರಾಂತ್ಯಕ್ಕೆ 81 ಕೋಟಿ ಗಳಿಕೆ ಕಂಡಿತ್ತು. ಬಳಿಕ ಸೋಮವಾರ ಕೇವಲ 10 ಕೋಟಿ ಕಲೆಕ್ಷನ್ ಮಾಡಿತ್ತು.

ಐದನೇ ದಿನವೂ ಕಡಿಮೆ ಗಳಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಹಾಗ್ನೋಡಿದ್ರೆ, ಸಲ್ಮಾನ್ ಖಾನ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದೆ. ಸಾಮಾನ್ಯವಾಗಿ ಮೂರ್ನಾಲ್ಕು ದಿನದಲ್ಲಿ ನೂರು ಕೋಟಿ ಕ್ಲಬ್ ಸೇರುತ್ತಿದ್ದ ಸಲ್ಲು ಚಿತ್ರ ಈ ಸಲ ನಿಧಾನಗತಿಯಲ್ಲಿದೆ. ದೇಶದಲ್ಲಿ ಪೌರತ್ವ ಕಾಯಿದೆ ವಿರೋಧಿಸಿದ ನಡೆಯುತ್ತಿರುವ ಪ್ರತಿಭಟನೆಯ ಪರಿಣಾಮ ಕಲೆಕ್ಷನ್ ಕಮ್ಮಿಯಾಗಿದೆ ಎನ್ನುವುದು ಸಿನಿಪಂಡಿತರ ಅಭಿಪ್ರಾಯ.

ಈ ಬಗ್ಗೆ ಚುಲ್ ಬುಲ್ ಪಾಂಡೆ ಖ್ಯಾತಿಯ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ''ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದು ಗಮನಾರ್ಹ. ಈ ಎಲ್ಲ ಕ್ರೆಡಿಟ್ ಅಭಿಮಾನಿಗಳಿಗೆ ಸಲ್ಲಬೇಕು. ಎಲ್ಲ ಅಭಿಮಾನಿಗಳಿಗೆ ನನಗಾಗಿ ಸಿನಿಮಾ ನೋಡಲು ಹೋಗಿದ್ದಾರೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 Salman Khan React On Dabangg 3 Collection

''ಉತ್ತರ ರಾಜ್ಯಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಸಿನಿಮಾ ಕಲೆಕ್ಷನ್ ನಲ್ಲಿ ವ್ಯತ್ಯಾಸವಾಗಿದೆ. ಆದರೆ, ಅವರೆಲ್ಲರೂ ಸಿನಿಮಾ ನೋಡ್ತಾರೆ. ಮೊದಲು ಅವರ ಸುರಕ್ಷತೆ ಮುಖ್ಯ. ನಂತರ ದಬಾಂಗ್ ನೋಡಲು ಬರ್ತಾರೆ. ಉಳಿದಂತೆ ಬೇರೆ ರಾಜ್ಯಗಳಲ್ಲಿ ಚೆನ್ನಾಗಿ ಆಗ್ತಿದೆ'' ಎಂದಿದ್ದಾರೆ.

ಇನ್ನು ದಬಾಂಗ್ ಸರಣಿಯ ಬಗ್ಗೆ ಮಾತನಾಡಿದ ಸಲ್ಲು ''ದಬಾಂಗ್ ಒಂದು, ಎರಡು ಈಗ ಮೂರನೇಯದು ಬಂದಿದೆ. ಇದು ಕೂಡ ಉತ್ತಮ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಹೆಚ್ಚು ಹೇಳಲಾಗಿದೆ. ಸುದೀಪ್ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಗಂಡ-ಹೆಂಡತಿ ಬಂಧ ಗಮನ ಸೆಳೆದಿದೆ. ರಾಬೀನ್ ಹುಡ್ ಹೇಗೆ ಚುಲ್ ಬುಲ್ ಪಾಂಡೆ ಆದರು ಎಂದು ತೋರಿಸಲಾಗಿದೆ. ಇನ್ನು ಹೆಚ್ಚಿನದ್ದು ತೋರಿಸಲು ಆಗಲ್ಲ'' ಎಂದು ಖುಷಿ ಹಂಚಿಕೊಂಡಿದ್ದಾರೆ.

ಪ್ರಭುದೇವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅರ್ಬಾಜ್ ಖಾನ್ ಮತ್ತು ಸಲ್ಮಾನ್ ಖಾನ್ ಜಂಟಿಯಾಗಿ ನಿರ್ಮಿಸಿದ್ದಾರೆ. ಸಲ್ಮಾನ್, ಸುದೀಪ್, ಸೈಯಿ ಮಂಜ್ರೆಕರ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Bollywood Superstar salman khan has react about Dabangg 3 collection. he is happy on his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X