ರಾನು ಮೊಂಡಲ್ಗೆ ಸಲ್ಮಾನ್ ಫ್ಲ್ಯಾಟ್ ಕೊಟ್ರಾ? ಸಲ್ಲು ಸ್ಪಷ್ಟನೆ
ರೈಲ್ವೆ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಅವರಂತೆ ಹಾಡು ಹೇಳಿ ರಾತ್ರೋರಾತ್ರಿ ಸೆಲೆಬ್ರಿಟಿ ಆದ ರಾನು ಮೊಂಡಲ್ ಈಗ ಬಿಟೌನ್ ಇಂಡಸ್ಟ್ರಿಯಲ್ಲಿ ಸ್ಟಾರ್ ಗಾಯಕಿ. ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಚಿತ್ರಗಳಲ್ಲಿ ಹಾಡಲು ಅವಕಾಶ ಕೊಟ್ಟು ರಾನು ಅವರಿಗೆ ಹೊಸ ಜೀವನ ಕಲ್ಪಿಸಿದ್ದಾರೆ.
ಈ ಮಧ್ಯೆ ಸಲ್ಮಾನ್ ಖಾನ್ ಅವರು ರಾನು ಮೊಂಡಲ್ ಗೆ ಸುಮಾರು 50 ಲಕ್ಷದ ಬೆಲೆ ಬಾಳುವ ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ್ದರು ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು.
ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದ ಕಾರಣ, ನಂಬಿಕೆ ಅರ್ಹವಾಗಿರಲಿಲ್ಲ. ಈಗ ಈ ವಿಷಯದ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ 13ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಲು ಈ ಸುದ್ದಿ ಎಂದು ಹೇಳಿದ್ದಾರೆ.

''ಅದು ಸುಳ್ಳು ಸುದ್ದಿ. ಈ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ನಾನು ಆ ರೀತಿ ಯಾವ ಕೆಲಸವೂ ಮಾಡಿಲ್ಲ. ಇದರಲ್ಲಿ ನನಗೆ ಯಾವುದೇ ಕ್ರೆಡಿಟ್ ಇಲ್ಲ'' ಎಂದು ತಿಳಿಸಿದರು.
ಈ ಮೊದಲು ರಾನು ಮೊಂಡಲ್ ಅವರು ಕೂಡ ವೆಬ್ ಸೈಟ್ ವೊಂದಕ್ಕೆ ಪ್ರತಿಕ್ರಿಯೆ ನೀಡಿ ''ನಾನು ಯಾರ ಬಳಿಯೂ ಸಹಾಯಕ್ಕಾಗಿ ಹೋಗಿಲ್ಲ ಮತ್ತು ಸಹಾಯ ಮಾಡಿ ಎಂದು ಯಾರನ್ನು ಕೇಳಿಲ್ಲ. ಸಲ್ಮಾನ್ ಅವರ ಬಳಿಯೂ ನಾನು ಸಹಾಯ ಬೇಡಿಲ್ಲ. ನನಗೆ ಕಾರು ಗಿಪ್ಟ್ ಮಾಡಿದ್ದಾರೆ ಎಂಬ ಸುದ್ದಿಯೂ ನನ್ನ ಕಿವಿಗೆ ಬಿತ್ತು. ಆದರೆ ಅದನ್ನ ನಾನು ನಂಬಲಿಲ್ಲ. ಸ್ವತಃ ಸಲ್ಮಾನ್ ಖಾನ್ ಅವರು ನೇರವಾಗಿ ಹೇಳಿದ್ರೆ ಮಾತ್ರ ಅದು ಸತ್ಯಕ್ಕೆ ಒಪ್ಪುವ ಮಾತು'' ಎಂದಿದ್ದರು.


Click it and Unblock the Notifications











