For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಲ್ಲೂ ಸಲ್ಮಾನ್ ಗೆ ಕಾಡಿತು ಕಿರಿಕಿರಿ ಉಂಟು ಮಾಡುವ 'ಆ ಪ್ರಶ್ನೆ'!

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾ ಡಿಸೆಂಬರ್ 20 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಹಿಂದಿ, ಕನ್ನಡ, ತೆಲುಗು, ತಮಿಳಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಮೊದಲ ಸಲ ಸಲ್ಮಾನ್ ಖಾನ್ ಸಿನಿಮಾ ಕನ್ನಡದಲ್ಲಿ ತೆರೆಕಾಣುತ್ತಿದೆ.

  ಈ ಚಿತ್ರದ ಪ್ರಚಾರಕ್ಕಾಗಿ ನಿನ್ನೆ (ಡಿಸೆಂಬರ್ 17) ಸಲ್ಮಾನ್ ಖಾನ್ ಬೆಂಗಳೂರಿಗೆ ಆಗಮಿಸಿದ್ದರು. ಸಿಲಿಕಾನ್ ಸಿಟಿಯಲ್ಲಿರುವ ETA ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸಲ್ಮಾನ್ ಖಾನ್, ಸುದೀಪ್ ಮತ್ತು ನಿರ್ದೇಶಕ ಪ್ರಭುದೇವ ಭಾಗಿಯಾಗಿದ್ದರು.

  ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್

  ಈ ವೇಳೆ ದಬಾಂಗ್ 3 ಕುರಿತು ಪ್ರಶ್ನಾವಳಿ ನಡೆಸಲಾಯಿತು. ಪತ್ರಕರ್ತರು ಸಿನಿಮಾದ ವಿಶೇಷತೆ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈ ಮಧ್ಯೆ ಸಲ್ಮಾನ್ ಖಾನ್ ಇಷ್ಟವಾಗದ ಪ್ರಶ್ನೆಯೊಂದನ್ನ ಕೇಳಿ ಚರ್ಚೆಗೆ ಕಾರಣವಾದರು.? ಯಾವುದು ಆ ಪ್ರಶ್ನೆ?

  ಜನಸಾಮಾನ್ಯರಿಗೂ ಬೇಡವಾದ ಪ್ರಶ್ನೆ ಅದು

  ಜನಸಾಮಾನ್ಯರಿಗೂ ಬೇಡವಾದ ಪ್ರಶ್ನೆ ಅದು

  53 ವರ್ಷದ ಸಲ್ಮಾನ್ ಖಾನ್ ಇದುವರೆಗೂ ಮದುವೆ ಆಗಿಲ್ಲ. ಸಲ್ಲು ಯಾಕೆ ಮದುವೆ ಆಗಿಲ್ಲ ಎನ್ನುವುದೇ ಬಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಉತ್ತರನೇ ಸಿಕ್ಕಲ್ಲ ಎಂದು ಎಲ್ಲರೂ ಸುಮ್ಮನಾಗಿಬಿಟ್ಟಿದ್ದಾರೆ. ಇದೆಲ್ಲವೂ ಗೊತ್ತಿದ್ದರೂ ಪದೇ ಪದೇ ಸಲ್ಲು ಮದುವೆ ಬಗ್ಗೆ ಚರ್ಚೆಯಾಗುತ್ತಿರುವುದು ಸ್ವತಃ ಸಲ್ಲುಗೆ ಮಾತ್ರವಲ್ಲ, ಸಾಮಾನ್ಯರಿಗೂ ಇದು ಬೇಡವಾಗಿದೆ.

  'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!

  ಏನಂದ್ರು ಸಲ್ಮಾನ್ ಖಾನ್?

  ಏನಂದ್ರು ಸಲ್ಮಾನ್ ಖಾನ್?

  ದಬಾಂಗ್ 3 ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಲ್ಲುಗೆ ''ನಿಮ್ಮ ಮದುವೆ ಯಾವಾಗ?'' ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆ ಕೇಳಿದ ಸಲ್ಮಾನ್ ಖಾನ್ ಮನಸ್ಸಿನಲ್ಲಿ ಸಿಡಿಮಿಡಿಕೊಂಡಂತೆ ಕಂಡರೂ, ''ನೀವು ಏನು ಹೇಳ್ತಿರೋ ಅದನ್ನ ನಾನು ಮಾಡಲ್ಲ'' ಎಂದು ಹೇಳಿ ಸುಮ್ಮನಾದರು.

  ಪರ್ಸನಲ್ ಬೇಡ ಎಂದರು

  ಪರ್ಸನಲ್ ಬೇಡ ಎಂದರು

  ಇದನ್ನು ಗಮನಿಸಿದ ಕಾರ್ಯಕ್ರಮದ ನಿರೂಪಕ, ''ಸಿನಿಮಾಗೆ ಸಂಬಂಧಿಸದ ಪ್ರಶ್ನೆಗಳನ್ನು ಮಾತ್ರ ಕೇಳಿದ್ರೆ ಉತ್ತಮ'' ಎಂದು ಪ್ರಕಟಿಸಿದರು. ಅದಕ್ಕೆ ಸಲ್ಮಾನ್ ಖಾನ್ ಕೂಡ ದನಿಗೂಡಿಸಿ ''ಅವರು ಕೇಳಿದ್ದು ಕೂಡ ಸಿನಿಮಾದ ಬಗ್ಗೆಯೇ ಎಂದು'' ಬುದ್ದಿವಂತಿಕೆ ಪ್ರದರ್ಶಿಸಿದರು.

  'ದಬಾಂಗ್' ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸುದೀಪ್, ಎಷ್ಟು?'ದಬಾಂಗ್' ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸುದೀಪ್, ಎಷ್ಟು?

  ಈ ಪ್ರಶ್ನೆಗೆ ಬೆಲೆ ಇಲ್ಲ

  ಈ ಪ್ರಶ್ನೆಗೆ ಬೆಲೆ ಇಲ್ಲ

  ಸಲ್ಮಾನ್ ಖಾನ್ ಗೆ ತಮ್ಮ ಜೀವನದಲ್ಲಿ ಇಷ್ಟ ಆಗದೆ ಇರುವ ಪ್ರಶ್ನೆ ಅಂತ ಏನಾದರು ಇದ್ದರೆ, ಅದು ಮದುವೆಗೆ ಸಂಬಧಿಸಿದ್ದು ಮಾತ್ರ ಆಗಿರಬಹುದು. ಯಾಕಂದ್ರೆ, ಸಲ್ಮಾನ್ ಖಾನ್ ಮದುವೆ ಆಗುವ ಯಾವ ಸುಳಿವು, ಸೂಚನೆಯೂ ನೀಡಿಲ್ಲ. ಸದ್ಯಕ್ಕೆ ಯಾವುದೇ ಲವ್ ಇರುವ ಬಗ್ಗೆಯೂ ಮಾಹಿತಿ ಇಲ್ಲ. ಮದುವೆ ಬಗ್ಗೆ ಯಾವ ಸಮಯದಲ್ಲೂ ಕೇಳಿದ್ರು ಸಲ್ಲು ಕೋಡೋದು ಇಂತಹ ಉತ್ತರವೇ. ಹಾಗಾಗಿ, ಈ ಪ್ರಶ್ನೆಯನ್ನು ಕೇಳದೇ ಇರುವುದೇ ಉತ್ತಮ.

  ಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆಸುದೀಪ್ ಮತ್ತು ಸಲ್ಮಾನ್ ಖಾನ್ 'ಈ ಒಂದು' ದೃಶ್ಯಕ್ಕಾಗಿ 25 ದಿನಗಳು ಹೊಡೆದಾಡಿದ್ದಾರೆ

  English summary
  Bollywood Superstar Salman Khan visited to Bengaluru for Dabangg 3 promotion. one of the journalist asked questions to sallu about Marriage. what he told? check it..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X