ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡುತ್ತಿರುವ ಸಲ್ಮಾನ್ ಖಾನ್‌ಗೆ ನನ್ನನ್ನು ಮದುವೆಯಾಗಿ ಎಂದ 25ರ ಹರೆಯದ ಚೆಲುವೆ...!
ಬಾಲಿವುಡ್ ನಲ್ಲಿ ಸಾರ್ವಕಾಲಿಕ ಚರ್ಚೆ ಎನ್ನುವುದೊಂದಿದ್ದರೆ ಅದು ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಅವರ ಮದ್ವೆಯ ಕುರಿತು. ವಯಸ್ಸು 58 ಆಗಿದ್ರೂ ಮದುವೆ ಬಗ್ಗೆ ಯೋಚನೆಯೇ ಮಾಡದೇ ಇನ್ನೂ ಹಾಗೆಯೇ ಸಲ್ಲು ಉಳಿದಿರುವುದರಿಂದ ಅವರ ಅನೇಕ ಅಭಿಮಾನಿಗಳು ಸಂಕಟವನ್ನೂ ಪಡುತ್ತಾರೆ.
ಇನ್ನೂ.. ಒಂದ್ಕಾಲದಲ್ಲಿ ಸಲ್ಲು.. ಸಲ್ಲು.. ಎಂದು ಕನವರಿಸುತ್ತಿದ್ದ ಅನೇಕ ನಾಯಕಿಯರು ಈಗ ಮದುವೆಯಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಕೆಲವರು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗಕ್ಕೆ ಕರೆತರವ ಧಾವಂತದಲ್ಲಿದ್ದಾರೆ. ಆದರೂ ಅದ್ಯಾಕೋ ಸಲ್ಮಾನ್ ಖಾನ್ ಮಾತ್ರ ಮದುವೆ ಆಗುವ ಮನಸು ಮಾಡಿಲ್ಲ. ಇಂಥಾ ಸಲ್ಮಾನ್ ಖಾನ್ ವ್ಯೆಯಕ್ತಿಕ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ. ಪ್ರಾಣ ಭಯದಲ್ಲಿಯೇ ದಿನ ದೂಡುತ್ತಿದ್ದಾರೆ.

ಹಾಗಂಥ ಸಲ್ಮಾನ್ ಖಾನ್ ಮನೆಯಲ್ಲಿ ಬೆಚ್ಚಗೆ ಕುಳಿತುಕೊಂಡಿಲ್ಲ. ತಮ್ಮ ಆಪ್ತ ಸ್ನೇಹಿತ ಬಾಬಾ ಸಿದ್ದಿಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಬಲಿಯಾದ ಮೇಲೂ ಕೂಡ ಸಲ್ಮಾನ್ ಖಾನ್ ಕಾಯಕವೇ ಕೈಲಾಸ ಎಂದು ಕೆಲಸವನ್ನು ಮಾಡುತ್ತಿದ್ದಾರೆ. ಮಾತು ನೀಡಿದಂತೆ ಮತ್ತು ಸಂಭಾವನೆ ಪಡೆದ ತಪ್ಪಿಗೆ ಬಿಗ್ ಬಾಸ್ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಮನದಲ್ಲಿ ನೋವು ಮತ್ತು ಭಯ ಇದ್ದರೂ ಕೂಡ ಸ್ಫರ್ಧಿಗಳ ಮುಂದೆ ತೋರಿಸದೇ ವಾರಾಂತ್ಯಕ್ಕೆ ಬಂದು ಪಂಚಾಯ್ತಿ ಮಾಡುತ್ತಿದ್ದಾರೆ. ಹೀಗಿರುವಾಗ ಚೆಲುವೆ ಒಬ್ಬರು ನನ್ನನ್ನು ಮದುವೆಯಾಗಿ ಎಂದು ಸಲ್ಮಾನ್ ಖಾನ್‌ಗೆ ಪ್ರಪೋಸ್ ಮಾಡಿದ್ದಾರೆ.
ಹೌದು, ಅಸಲಿಗೆ ಹಮಾರಿ ಬಹು ಸಿಲ್ಕ್ ಧಾರಾವಾಹಿ ಮೂಲಕ ಉತ್ತರ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ ಚಾಹತ್ ಪಾಂಡೆ ಈ ವರ್ಷದ ಬಿಗ್ ಬಾಸ್‌ನಲ್ಲಿ ಭಾಗಿಯಾಗಿದ್ದಾರೆ. ಹಿಂದಿ ಕಿರುತೆರೆ ವಲಯದಲ್ಲಿ ವಿವಾದಾತ್ಮಕ ನಾಯಕಿಯಾಗಿಯೇ ಗುರುತಿಸಿಕೊಂಡಿರುವ ಚಾಹತ್ ಪಾಂಡೆ ಅವರಿಗೆ ಸಲ್ಮಾನ್ ಖಾನ್ ಪ್ರಶ್ನೆಯೊಂದನ್ನು ಮಾಡಿದ್ದಾರೆ. ನಿಮ್ಮ ಕನಸಿನ ಹುಡುಗ ಹೇಗಿರಬೇಕು ಎಂದು ಕೇಳಿದ್ದಾರೆ. ಇದಕ್ಕೆ 25ರ ಹರೆಯದ ಚಾಹತ್ ಪಾಂಡೆ ಬಿಗ್ ಬಾಸ್ ಮನೆಯಲ್ಲಿರುವ ಮತ್ತೊಬ್ಬ ಸ್ಫರ್ಧಿ ಕರಣ್ ವೀರ್ ಮೆಹ್ತಾ ಅವರನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಕರಣ್ ವೀರ್ ಮೆಹ್ತಾ ರೀತಿ ಜಿಮ್‌ಗೆ ಹೋಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವವರು ಬೇಕೆಂದಿದ್ದಾರೆ. ಆ ನಂತರ ಮತ್ತೊಬ್ಬ ಸ್ಫರ್ಧಿ ಅವಿನಾಶ್ ಮಿಶ್ರಾ ಹೆಸರನ್ನೇಳಿ ಅವಿನಾಶ್ ಅವರಂತೆ ಡ್ಯಾನ್ಸ್ ಮಾಡಲು ಆ ವ್ಯಕ್ತಿಗೆ ಬರುವಂತೆ ಇರಬೇಕು ಎಂದು ಹೇಳಿದ್ದಾರೆ. ನನ್ನ ಮದುವೆಯಾಗುವ ಹುಡುಗನಿಗೆ ವಿವಿಯನ್ ಡಿಸೇನಾ ರೀತಿ ಹೇರ್ ಸ್ಟೈಲ್ ಇರಬೇಕು ಎಂದು ಹೇಳಿ ಮತ್ತೊಬ್ಬ ಸ್ಫರ್ಧಿ ವಿವಿಯನ್ ಬಳಿ ನೋಡಿದ್ದಾರೆ.
ಚಾಹತ್ ಅವರ ಈ ಷರತ್ತುಗಳನ್ನು ಕೇಳಿ ಮನೆಯಲ್ಲಿದ್ದ ಎಲ್ಲ ಸ್ಫರ್ಧಿಗಳು ಚಾಹತ್ ಕಾಲೆಳೆದಿದ್ದಾರೆ. ನಕ್ಕಿದ್ದಾರೆ. ಆಗ ಚಾಹತ್ ಸರ್ ಯಾರು ಬೇಡ ನೀವೇ ನನ್ನ ಮದುವೆ ಮಾಡಿಕೊಳ್ಳಿ' ಎಂದು ಸಲ್ಮಾನ್ ಖಾನ್‌ಗೆ ಹೇಳಿದ್ದಾರೆ. ಚಾಹತ್ ಅವರ ಈ ಬೇಡಿಕೆಗೆ ಮೊದಲು ನಸು ನಕ್ಕ ಸಲ್ಮಾನ್ ಖಾನ್ ನೀವು ಹೇಳಿರುವ ಯಾವ ಗುಣಗಳು ಕೂಡ ನನ್ನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅದರಲ್ಲಿಯೂ ನಿಮ್ಮ ತಾಯಿ ಮತ್ತು ನನ್ನ ತಾಯಿ ನಡುವೆ ಹೊಂದಾಣಿಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಚಾಹತ್ ನಾವು ಇಬ್ಬರು ಕುಳಿತು ಈ ಸಮಸ್ಯೆಯನ್ನು ಅವರಿಬ್ಬರ ಜೊತೆ ಚರ್ಚೆ ಮಾಡಿ ಬಗೆಹರಿಸೋಣ ಎಂದಿದ್ದಾರೆ. ಸದ್ಯಕ್ಕೆ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಬಗೆ ಬಗೆಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಕೆಲಸದ ಮೇಲೆ ಸಲ್ಮಾನ್ ಖಾನ್‌ಗೆ ಇರುವ ಕಾಳಜಿ ಮತ್ತು ಶ್ರದ್ಧೆಯ ಕುರಿತು ಕೂಡ ಚರ್ಚೆಯಾಗುತ್ತಿದೆ.


Click it and Unblock the Notifications











