"ನನ್ನನ್ನು ಮದುವೆ ಆಗ್ತೀರಾ" ಎಂದು ಬಹಿರಂಗವಾಗಿಯೇ ಕೇಳಿದ ಹಾಲಿವುಡ್ ಪತ್ರಕರ್ತೆಗೆ ಸಲ್ಲು ಉತ್ತರ ಏನು?

ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಮದುವೆ ಬಗ್ಗೆ ಪದೇ ಪದೇ ಚರ್ಚೆ ನಡೆಯುತ್ತಲೇ ಇರುತ್ತದೆ. ವಯಸ್ಸು 50 ದಾಟಿದ್ರು, ಸಲ್ಲು ಇನ್ನು ಮದುವೆ ಬಗ್ಗೆ ಯೋಚಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮದುವೆ ಮಾಡಿಕೊಳ್ಳುವ ಆಲೋಚನೆ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಇನ್ನು ಸಲ್ಮಾನ್ ಖಾನ್ ಎದುರು ಸಾಕಷ್ಟು ಚೆಲುವೆಯರು ಲವ್, ಮದುವೆ ಪ್ರಪೋಸಲ್ ಇಟ್ಟಿದ್ದಾರೆ.

ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಈದ್ ಸಂಭ್ರಮದಲ್ಲಿ ರಿಲೀಸ್ ಆಗಿತ್ತು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬಾಲಿವುಡ್ ಬಾಕ್ಸಾಫೀಸ್‌ ಸುಲ್ತಾನ್ ಬ್ಯುಸಿಯಾಗಿದ್ದಾರೆ. ಅದರಲ್ಲೂ 'ಟೈಗರ್- 3' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ಹಿಂದೆ ಸಾಕಷ್ಟು ಸಲ್ಲು ಜೊತೆ ಸಾಕಷ್ಟು ನಟಿಯರ ಹೆಸರುಗಳು ತಳುಕು ಹಾಕಿಕೊಂಡಿತ್ತು. ಇದೀಗ ಹಾಲಿವುಡ್ ಪತ್ರಕರ್ತೆ ಬಹಿರಂಗರಂವಾಗಿಯೇ ಸಲ್ಲು ಎದುರು ಮದುವೆ ಪ್ರಪೋಸಲ್ ಇಟ್ಟಿದ್ದಾರೆ.

Salman Khan Reacts To Hollywood Lady Fan Marriage Proposal

90ರ ದಶಕದಲ್ಲೇ ಸಲ್ಲು ಸಾಕಷ್ಟು ಯುವತಿಯರ ಹೃದಯ ಕದ್ದಿದ್ದರು. ಇವತ್ತಿಗೂ ಬಾಲಿವುಡ್‌ ಬ್ಯಾಡ್‌ಬಾಯ್‌ಗೆ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳು ಇದ್ದಾರೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್‌ಗೆ ಮಾಧ್ಯಮದವರು ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ನಡುವೆ ಹಾಲಿವುಡ್‌ನಿಂದ ಬಂದಿದ್ದೀನಿ ಎಂದು ಹೇಳಿಕೊಂಡ ಪತ್ರಕರ್ತೆ ನನ್ನನ್ನು ಮದುವೆ ಆಗ್ತೀರಾ ಎಂದು ಬಹಿರಂಗವಾಗಿಯೇ ಕೇಳಿಬಿಟ್ಟಿದ್ದಾರೆ.

ನೀವು ಶಾರುಕ್ ಅನ್ಕೊಂಡ್ರಾ?

ಸಲ್ಲು ಒಳ್ಳೆ ನಟ ಅಷ್ಟೇ ಅಲ್ಲ, ಒಳ್ಳೆ ಮಾತುಗಾರ. ತಮ್ಮ ಮಾತಿನ ಮೂಲಕವೂ ಅಭಿಮಾನಿಗಳನ್ನು ರಂಜಿಸಬಲ್ಲರು. ಇತ್ತೀಚೆಗೆ ಹಾಲಿವುಡ್‌ನಿಂದ ಬಂದಿದ್ಧೇನೆ ಎಂದು ಹೇಳಿದ ಪತ್ರಕರ್ತೆ ಎಂದು ಹೇಳಿಕೊಂಡ ಅಭಿಮಾನಿಯೊಬ್ಬರು ಸಲ್ಲುಗೆ ಎದುರು ನಾನು ನಿಮ್ಮನ್ನು ನೋಡಿದ ತಕ್ಷಣ ಪ್ರೀತಿ ಬಿದ್ದೆ ಎಂದಿದ್ದಾರೆ. ಅದಕ್ಕೆ ಸಲ್ಲು ನೀವು ಶಾರುಕ್ ಖಾನ್ ಬಗ್ಗೆ ಮಾತನಾಡುತ್ತಿದ್ದೀರಾ ಅಲ್ಲವೇ ಎಂದು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ನನ್ನನ್ನು ಮದುವೆ ಆಗ್ತೀರಾ?

"ಈ ಪ್ರಶ್ನೆ ಕೇಳಲು ನಾನು ಹಾಲಿವುಡ್‌ನಿಂದ ಬಂದಿದ್ದೇನೆ. ನಾನು ನಿಮ್ಮನ್ನು ನೋಡಿದ ಕ್ಷಣವೇ ಪ್ರೀತಿಲಿ ಬಿದ್ದೆ" ಎಂದಿದ್ದಾರೆ. ಅದಕ್ಕೆ ಸಲ್ಲು "ನೀವು ಶಾರುಖ್ ಖಾನ್ ಬಗ್ಗೆ ಮಾತನಾಡುತ್ತಿದ್ದೀರಿ, ಅಲ್ವಾ?" ಮರು ಪ್ರಶ್ನೆ ಹಾಕಿದ್ದಾರೆ. ಇಲ್ಲ ನಾನು ಸಲ್ಮಾನ್ ಖಾನ್ ಬಗ್ಗೆನೇ ಮಾತನಾಡುತ್ತಿದ್ದೇನೆ ಎಂದಿದ್ದಾರೆ. ನಂತರ ಆಕೆ "ನನ್ನನ್ನು ಮದುವೆ ಆಗ್ತೀರಾ? ಎಂದು ಕೇಳಿದಕ್ಕೆ ಸಲ್ಲು "ನಾನು ಮದುವೆ ಮಾಡಿಕೊಳ್ಳುವ ದಿನಗಳು ಮುಗಿಯಿತು. ನೀವು 20 ವರ್ಷದ ಹಿಂದೆ ನನ್ನನ್ನು ಭೇಟಿಯಾಗಬೇಕಿತ್ತು" ಎಂದು ಹೇಳಿ ಹೊರಟಿದ್ದಾರೆ.

ಸಲ್ಲು ಲವ್ ಅಫೇರ್‌ಗಳು

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಫೇರ್‌ಗಳು ಒಂದೆರಡಲ್ಲ. ಸಂಗೀತಾ ಬಿಜಲಾನಿ ಇಂದ ಹಿಡಿದು ಐಶ್ವರ್ಯ ರೈವರೆಗೆ ಹಲವು ನಟಿಯರ ಜೊತೆ ಸಲ್ಲು ಡೇಟಿಂಗ್ ನಡೆಸಿರುವ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಲುಲಿಯಾ ವೆಂಚರ್ ಜೊತೆ ಸಲ್ಲು ಮದುವೆ ಆಗಿದ್ದಾರೆ. ಇಬ್ಬರು ಒಂದೇ ಮನೆಯಲ್ಲಿ ಇದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು. ಆದರೆ ಈವರೆಗೆ ಸಲ್ಲು ಮದುವೆ ಆಗಿಲ್ಲ ಎನ್ನುತ್ತಾರೆ.

ನಾನು ತಂದೆ ಆಗಬೇಕು ಎಂದಿದ್ದ ಸಲ್ಲು

ಕೆಲ ದಿನಗಳ ಹಿಂದೆ 'ಆಪ್ ಕಿ ಅದಾಲತ್' ಟಿವಿ ಶೋನಲ್ಲಿ ಸಲ್ಲು ಮಾತನಾಡಿದ್ದರು. ತಮ್ಮ ಭವಿಷ್ಯದ ಬಗ್ಗೆ ಮಾತನಾಡುತ್ತಾ "ಏನು ಹೇಳುವುದು, ಮನೆಗೆ ಸೊಸೆ ಬೇಕು ಅಂತಲ್ಲ, ನನಗೆ ಮಗು ಬೇಕು ಅಂತ ಯೋಜನೆ ಹಾಕಿದ್ದೆ. ಆದರೆ ಭಾರತೀಯ ಕಾನೂನಿನ ಪ್ರಕಾರ ಈಗ ಅದು ಸಾಧ್ಯವಿಲ್ಲ. ಹಾಗಾಗಿ ಮುಂದೆ ಏನು ಮಾಡೋದು ಅಂತ ನೋಡಬೇಕು" ಎಂದು ಹೇಳಿಕೊಂಡಿದ್ದರು.

More from Filmibeat

English summary
Salman Khan Reacts To Hollywood Lady Fan Marriage Proposal. He said "My days of getting married are over. You should have met me about 20 years ago", know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X