Salman Khan: ಬಾಲಿವುಡ್‌ ಭಾಯ್ಜಾನ್‌ಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತೆ ಬೆದರಿಕೆ: ದೂರು ದಾಖಲು

ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಸಲ್ಮಾನ್ ಖಾನ್‌ಗೆ ಮತ್ತೆ ಬೆದರಿಕೆ ಒಡ್ಡಿದ್ದಾರೆ. ಈ ಬಾರಿ ಮೇಲ್ ಮಾಡಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸಲ್ಮಾನ್ ಖಾನ್ ಖಾನ್ ಖಾನ್‌ಗೆ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಈ ಬೆದರಿಕೆ ಹಿನ್ನೆಲೆಯಲ್ಲಿ ಒಮ್ಮೆಲೆ ಬೆಚ್ಚಿಬಿದ್ದ ಸಲ್ಮಾನ್ ಖಾನ್ ಟೀಂ ಈ ಬಗ್ಗೆ ಮುಂಬೈನ ಬಾಂದ್ರಾ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಲಾಗ್ತಿದೆ.

ಮೇಲ್ ಬೆದರಿಕೆ ಹಿನ್ನೆಲೆಯಲ್ಲಿ ಗ್ಯಾಂಗ್‌ಸ್ಟರ್‌ಗಳಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್‌ ವಿರುದ್ಧ ಮುಂಬೈ ಪೊಲೀಸರ ಮತ್ತೊಮ್ಮೆ ಕೇಸ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಹಲವು ಬಾರಿ ಹಲವು ರೀತಿಯಲ್ಲಿ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಬಂದಿದೆ. ಒಮ್ಮೆ ಸಲ್ಮಾನ್ ಖಾನ್ ಹತ್ಯೆಗೂ ಬಿಷ್ಣೋಯ್ ಗ್ಯಾಂಗ್ ಪ್ರಯತ್ನಿಸಿತ್ತು. ಈ ಬಾರಿ ಬೆದರಿಕೆ ವೇಳೆ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ ಜೊತೆ ಮಾತಾನಾಡಬೇಕಿದೆ ಎಂದು ಮೇಲ್ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಲ್ಮಾನ್ ಖಾನ್ ಟೀಂ ಹೇಳಿದೆ. ಅಷ್ಟೇ ಅಲ್ಲ ಸಲ್ಮಾನ್ ಖಾನ್ ಹತ್ಯೆ ಮಾಡುವುದೇ ನಮ್ಮ ಜೀವನದ ಗುರಿ ಎಂದು ಮೇಲ್ ಮಾಡಿರುವುದಾಗಿ ಹೇಳಲಾಗ್ತಿದೆ.

Salman Khan receives warning mail, FIR filed against Lawrence Bishnoi and Goldy Brar

ಗಾಯಕ ಸಿಧು ಮೂಸೆವಾಲಾ ಹತ್ಯೆ ಕೇಸ್‌ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪಾತಕಿ ಲಾರೆನ್ಸ್‌ ಬಿಷ್ಣೊಯ್‌, ಸಲ್ಮಾನ್‌ ಖಾನ್‌ಗೆ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲಲ್ಲ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಲ್ಮಾನ್‌ ಖಾನ್‌ ಹತ್ಯೆ ಮಾಡುವುದಾಗಿ 2018ರಲ್ಲಿ ಕೋರ್ಟ್ ಆವರಣದಲ್ಲಿ ಲಾರೆನ್ಸ್‌ ಬಿಷ್ಣೊಯ್‌ ಎಚ್ಚರಿಕೆ ನೀಡಿದ್ದ. ಇನ್ನು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ನಿರ್ದೋಷಿ ಎಂದು ತೀರ್ಪು ಬಂದಿತ್ತು. ಶುಕ್ರವಾರವಷ್ಟೇ ಪಾತಕಿ ಲಾರೆನ್ಸ್‌ ಬಿಷ್ಣೊಯ್‌ ಬೆದರಿಕೆ ಒಡ್ಡಿದಾಗಿ ವರದಿಯಾಗಿತ್ತು. ಇದೀಗ ಮೇಲ್ ಮೂಲಕ ಮತ್ತೆ ಬೆದರಿಕೆ ಬಂದಿದೆ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ನಿರ್ದೋಷಿ ಎಂದು ಹೇಳಿದರೂ ಬಿಷ್ಣೋಯ್‌ ಸಮುದಾಯದವರಿಗೆ ಸಲ್ಲುಗೆ ಸಂಕಷ್ಟ ಎದುರಾಗಿದೆ. ಬಾಲಿವುಡ್ ನಟನನ್ನು ಅವರು ಶತ್ರು ರೀತಿ ನೋಡುತ್ತಿದ್ದಾರೆ. ಕೃಷ್ಣಮೃಗ ನಮ್ಮ ಆರಾಧ್ಯ ದೈವ. ಹಾಗಾಗಿ ಸಲ್ಮಾನ್ ಖಾನ್ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಸಲ್ಮಾನ್ ಹತ್ಯೆ ಯತ್ನವೂ ನಡೆಯಿತು. ಸದ್ಯ ಲಾರೆನ್ಸ್‌ ಬಿಷ್ಣೊಯ್‌ ಜೈಲಿನಲ್ಲಿ ಇದ್ದಾನೆ. ಗಾಯಕ ಸಿಧು ಮೂಸೆವಾಲಾ ಅವರನ್ನು ತಾವೇ ಹತ್ಯೆ ಮಾಡಿದ್ದಾಗಿ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿತ್ತು.

Salman Khan receives warning mail, FIR filed against Lawrence Bishnoi and Goldy Brar

ಸದ್ಯ ಬಂದಿರುವ ಮೇಲ್‌ನಲ್ಲಿ "ಸಲ್ಮಾನ್ ಖಾನ್, ನೀನು ಗೋಲ್ಡಿ ಬ್ರಾರ್‌ನನ್ನು ಮುಖಾಮುಖಿಯಾಗಿ ಭೇಟಿಯಾಗಬೇಕು. ಇಲ್ಲದಿದ್ದರೇ ಮುಂದಾಗುವ ಅನಾಹುತಕ್ಕೆಲ್ಲಾ ನೀನೆ ಹೊಣೆ.. ಮುಂದಿನ ಸಾರಿ ಖಂಡಿತ" ಎಂದು ಹೇಳಲಾಗಿದ್ದು, ಈ ಮೇಲ್ ಅನ್ನು ಗೋಲ್ಡಿ ಬ್ರಾರ್‌ ಸಹಾಯಕ ಕಳಿಸಿರುವುದಾಗಿ ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ವಿರುದ್ಧ ಮೊದಲ ಬಾರಿ ಬೆದರಿಕೆ ಒಡ್ಡಿದಾಗಲೇ ಮಹಾರಾಷ್ಟ್ರ ಸರ್ಕಾರ ನಟನಿಗೆ ಹೆಚ್ಚಿನ ಭದ್ರತೆ ಒದಗಿಸಿತ್ತು. ಇನ್ನು ಸಲ್ಮಾನ್ ಖಾನ್ ಬುಲೆಟ್ ಫ್ರೂಪ್ ಕಾರ್ ಕೂಡ ಖರೀದಿಸಿದ್ದರು.

ಮತ್ತೊಮ್ಮೆ ಸಲ್ಮಾನ್ ಖಾನ್ ಹಾಗೂ ಅವರ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದರು. ನಂತರ ಮನೆಯ ಬಳಿಯೂ ಭದ್ರತೆ ಹೆಚ್ಚಿಸಲಾಗಿತ್ತು. ಇದೀಗ ಬೆದರಿಕೆ ಮೇಲ್ ಬರುತ್ತಿದ್ದಂತೆ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಅಭಿಮಾನಿಗಳು ಮಾತ್ರ ಈ ಮೇಲ್ ವಿಚಾರ ಕೇಳಿ ಆತಂಕಗೊಂಡಿದ್ದಾರೆ. ನೆಚ್ಚಿನ ನಟನಿಗೆ ಮತ್ತಷ್ಟು ಭದ್ರತೆ ಬೇಕು ಎನ್ನುತ್ತಿದ್ದಾರೆ. ಸದ್ಯ ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್', 'ಟೈಗರ್- 3' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಶೀಘ್ರದಲ್ಲೇ ಹೊಸ ಬಿಗ್‌ಬಾಸ್ ಸೀಸನ್ ನಡೆಸಿಕೊಡಲಿದ್ದಾರೆ.

More from Filmibeat

English summary
Salman Khan receives threat mail, FIR filed against Lawrence Bishnoi and Goldy Brar. Security increased for Salman Khan after threat mail. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X