ಭಾಗ್ಯಶ್ರೀಗೆ 'ಕಿಸ್' ಮಾಡಿ ಎಂದಿದ್ದ ಫೋಟೊಗ್ರಾಫರ್‌ಗೆ ಸಲ್ಮಾನ್ ಹೇಳಿದ್ದ ಮಾತಿದು...

By Avani Malnad

ಬಾಲಿವುಡ್‌ನಲ್ಲಿ ತೆರೆಯ ಮೇಲೆ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ನಟ ಯಾರಿದ್ದಾರೆ? ಹುಡುಕಿದರೆ ಬೆರಳಣಿಕೆಯಷ್ಟು ಹೀರೋಗಳು ಸಿಗಬಹುದು. ಆದರೆ ಚಿತ್ರರಂಗಕ್ಕೆ ಬಂದು ಮೂರು ದಶಕಗಳು ಕಳೆದರೂ ಮುತ್ತಿನ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳದ ನಟನೆಂದರೆ ಸಲ್ಮಾನ್ ಖಾನ್.

Recommended Video

ತೀರಿಕೊಂಡ ತಂದೆಯ ಹುಟ್ಟು ಹಬ್ಬಕ್ಕೆ ಅದ್ಭುತವಾಗಿ ಶುಭಕೋರಿದ ಸ್ಟಾರ್ ನಟ | FILMIBEAT KANNADA

ಆಕ್ಷನ್, ಕಾಮಿಡಿ, ರೊಮ್ಯಾಂಟಿಕ್ ಚಿತ್ರಗಳಲ್ಲಿ ಸಲ್ಮಾನ್ ನಟಿಸಿದ್ದರೂ, ನಟಿಯರ ಜತೆಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಿದ್ದು ತೀರಾ ಕಡಿಮೆ. 'ಮೈನೆ ಪ್ಯಾರ್ ಕಿಯಾ'ದಂತಹ ಚಿತ್ರಗಳ ಮೂಲಕ ಸಲ್ಮಾನ್ ಖಾನ್ ಅನೇಕ ಯುವತಿಯರ ಹೃದಯ ಕದ್ದಿದ್ದರು. ಆರಂಭದ ದಿನಗಳಲ್ಲಿ ಸಲ್ಮಾನ್ ರೊಮ್ಯಾಂಟಿಕ್ ಹೀರೋ ಆಗಿ ಹೆಸರು ಪಡೆದಿದ್ದರೂ, ಸಭ್ಯತೆ ಮೀರುವ ದೃಶ್ಯಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. ಅದರಲ್ಲಿಯೂ ಚುಂಬನ ದೃಶ್ಯದಂತಹ ಇಂಟಿಮೇಟ್ ದೃಶ್ಯಗಳಿಗೆ ಒಲ್ಲೆ ಎಂದೇ ಹೇಳುತ್ತಿದ್ದರು. ಅಂತಹ ಪ್ರಸಂಗವೊಂದನ್ನು ನಟಿ ಭಾಗ್ಯಶ್ರೀ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

ಸಲ್ಮಾನ್-ಭಾಗ್ಯಶ್ರೀ ಜೋಡಿ

ಸಲ್ಮಾನ್-ಭಾಗ್ಯಶ್ರೀ ಜೋಡಿ

1989ರಲ್ಲಿ ಸಲ್ಮಾನ್ ಖಾನ್-ಭಾಗ್ಯಶ್ರೀ ಜೋಡಿಯ 'ಮೈನೆ ಪ್ಯಾರ್ ಕಿಯಾ' ತೆರೆಕಂಡು, ಯುವ ಹೃದಯಿಗಳಲ್ಲಿ ಕಚಗುಳಿ ಇರಿಸಿತ್ತು. ಬಾಲಿವುಡ್‌ನ ಅತ್ಯಂತ ಹಿಟ್‌ ಚಿತ್ರಗಳಲ್ಲಿ ಈ ಸಿನಿಮಾ ಕೂಡ ಒಂದು. ಅದರಲ್ಲಿಯೂ ಈ ಜೋಡಿ ಬಹುದೊಡ್ಡ ಯಶಸ್ಸು ಗಳಿಸಿತ್ತು. ಇಂತಹ ಸಂದರ್ಭದಲ್ಲಿಯೇ ಆ ಕಾಲಘಟ್ಟದಲ್ಲಿ ಬಹಳ ಖ್ಯಾತರಾಗಿದ್ದ ಛಾಯಾಗ್ರಾಹಕರೊಬ್ಬರು ಇಬ್ಬರನ್ನೂ ಸಂಪರ್ಕಿಸಿದ್ದರು.

ಹಾಟ್ ಫೋಟೊಕ್ಕೆ ಬಯಸಿದ್ದರು

ಹಾಟ್ ಫೋಟೊಕ್ಕೆ ಬಯಸಿದ್ದರು

ಛಾಯಾಗ್ರಾಹಕರಿಗೆ ಚಿತ್ರರಂಗ ಹೆಚ್ಚಿನ ಮಹತ್ವ ನೀಡುತ್ತಿದ್ದ ಸಮಯ ಅದು. ಆಗ ಹೆಸರಾಂತ ಛಾಯಾಗ್ರಾಹಕರೊಬ್ಬರು ಸಲ್ಮಾನ್ ಮತ್ತು ಭಾಗ್ಯಶ್ರೀ ಅವರ 'ಹಾಟ್' ಫೋಟೊಗಳನ್ನು ತೆಗೆಯಲು ಬಯಸಿದ್ದರು. ಸಾಮಾನ್ಯವಾಗಿ ಛಾಯಾಗ್ರಾಹಕರಿಗೆ ಪೋಸ್ ನೀಡಲು ಸಲ್ಮಾನ್ ಹಿಂದೇಟು ಹಾಕುತ್ತಿರಲಿಲ್ಲ. ಆದರೆ ಆ ಛಾಯಾಗ್ರಾಹಕರು ಇರಿಸಿದ್ದ ಬೇಡಿಕೆಗೆ ಸಲ್ಮಾನ್ ಸುತಾರಾಂ ಒಪ್ಪಿರಲಿಲ್ಲವಂತೆ.

ಕಿಸ್ ಮಾಡಿ ಎಂದಿದ್ದ ಫೋಟೊಗ್ರಾಫರ್

ಕಿಸ್ ಮಾಡಿ ಎಂದಿದ್ದ ಫೋಟೊಗ್ರಾಫರ್

ಈ ಸನ್ನಿವೇಶದ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಭಾಗ್ಯಶ್ರೀ ನೆನಪು ಹಂಚಿಕೊಂಡಿದ್ದಾರೆ. ಮಾಮೂಲಿ ಫೋಟೊಗಳು ಬೇಡ. ಭಾಗ್ಯಶ್ರೀ ಅವರನ್ನು ಹಿಡಿದುಕೊಂಡು ಕಿಸ್ ಮಾಡಿ. ಅದರ ಫೋಟೊ ತೆಗೆಯುತ್ತೇನೆ ಎಂದು ಛಾಯಾಗ್ರಾಹಕ ಸಲ್ಮಾನ್‌ಗೆ ಹೇಳಿದ್ದರಂತೆ.

ಪ್ರತಿ ಮಾತೂ ಭಾಗ್ಯಶ್ರೀಗೆ ಕೇಳಿಸುತ್ತಿತ್ತು

ಪ್ರತಿ ಮಾತೂ ಭಾಗ್ಯಶ್ರೀಗೆ ಕೇಳಿಸುತ್ತಿತ್ತು

ಆಗಿನ್ನೂ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಇಬ್ಬರೂ ಹೊಸಬರು. ಛಾಯಾಗ್ರಾಹಕರು ಆಗಲೇ ಬಹಳ ಖ್ಯಾತಿ ಗಳಿಸಿದ್ದವರು. ಹೀಗಾಗಿ ಯಾರೂ ತೆಗೆಯದಂತಹ ಮತ್ತು ಕಿಸ್ಸಿಂಗ್ ಫೋಟೊಗಳೆಂದರೆ ವಿಶೇಷ ಎನಿಸುವಂತಿದ್ದ ಆ ಕಾಲಘಟ್ಟದಲ್ಲಿ ಇಂತಹ ಫೋಟೊ ತೆಗೆದು ಸೆನ್ಸೇಷನ್ ಸೃಷ್ಟಿಸಲು ಛಾಯಾಗ್ರಾಹಕ ಬಯಸಿದ್ದರು. ಭಾಗ್ಯಶ್ರೀ ಅವರನ್ನು ಹೇಗೆ ಹಿಡಿದುಕೊಂಡು ಚುಂಬಿಸಬೇಕು ಎಂಬುದನ್ನು ಸಲ್ಮಾನ್ ಖಾನ್ ಅವರಿಗೆ ಛಾಯಾಗ್ರಾಹಕ ವಿವರಿಸುತ್ತಿದ್ದರು. ಆದರೆ ಅವರು ಮಾತನಾಡುತ್ತಿದ್ದ ಪ್ರತಿ ಶಬ್ಧವೂ ತಮಗೆ ಕೇಳಿಸುತ್ತಿತ್ತು ಎಂದು ಭಾಗ್ಯಶ್ರೀ ತಿಳಿಸಿದ್ದಾರೆ.

ಸಲ್ಮಾನ್ ನೀಡಿದ್ದ ಉತ್ತರ

ಸಲ್ಮಾನ್ ನೀಡಿದ್ದ ಉತ್ತರ

'ಅರೆ ಕ್ಷಣ ನನಗೆ ಆಘಾತವಾಗಿತ್ತು. ಆದರೆ ಸಲ್ಮಾನ್ ನೀಡಿದ ಪ್ರತಿಕ್ರಿಯೆ ಕೂಡ ಕೇಳಿಸಿತು. ನಾನು ಆ ರೀತಿ ಯಾವುದನ್ನೂ ಮಾಡುವುದಿಲ್ಲ. ಆ ರೀತಿಯ ಯಾವುದೇ ಪೋಸ್ ಬೇಕಾದರೂ ನೀವು ಭಾಗ್ಯಶ್ರೀ ಅವರನ್ನು ಕೇಳಬೇಕು. ಸಲ್ಮಾನ್ ಅವರ ಉತ್ತರ ನನಗೆ ಬಹಳ ಇಷ್ಟವಾಗಿತ್ತು. ಮಿಗಿಲಾಗಿ ನಾನು ಬಹಳ ಸುರಕ್ಷಿತ ಜನರ ನಡುವೆ ಇದ್ದೇನೆ ಎಂಬುದು ಅರಿವಾಗಿತ್ತು' ಎಂದು ಭಾಗ್ಯಶ್ರೀ ಹೇಳಿದ್ದಾರೆ.

ನನ್ನ ಸಿನಿಮಾ ಕುಟುಂಬಗಳು ನೋಡಬೇಕು

ನನ್ನ ಸಿನಿಮಾ ಕುಟುಂಬಗಳು ನೋಡಬೇಕು

ತೆರೆಯ ಮೇಲೆ ಎಂದಿಗೂ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಸಲ್ಮಾನ್ ಖಾನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ತಮ್ಮ ಸಿನಿಮಾಗಳು ಎಂದಿಗೂ ಇರುವುದು ಕುಟುಂಬದವರು ಒಟ್ಟಿಗೆ ಕುಳಿತು ನೋಡಲಿ ಎಂದು. ಹೀಗಾಗಿ ಅಂತಹ ದೃಶ್ಯಗಳು ತಮಗೆ ಬೇಡ ಎಂದಿದ್ದರು.

More from Filmibeat

English summary
Actress Bhagyashree said, once a famous photographer wanted to take smooching photos of her with Salman Khan. But Salman refused that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X