ಲಾಕ್‌ಡೌನ್ ಸಮಯದಲ್ಲಿ ಹಾಡು ಚಿತ್ರೀಕರಿಸಿ ಬಿಡುಗಡೆ ಮಾಡಿದ ಸಲ್ಮಾನ್ ಖಾನ್

ಏನೇ ಆಗಲಿ, ಹೇಗೆ ಇರಲಿ ಜನರ ಮನರಂಜಿಸುತ್ತಲೇ ಇರಬೇಕು, ಹೊಸದೇನಾದರೂ ಮಾಡುತ್ತಲೇ ಇರಬೇಕು ಎಂಬ ಹಪಹಪಿ ನಟ-ನಟಿಯರಿಗೆ ಇರುತ್ತದೆ.

ಲಾಕ್‌ಡೌನ್‌ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಡು ಹಾಡುತ್ತಿರುವ, ಜೋಕ್‌ ಹೇಳುತ್ತಿರುವ, ನೃತ್ಯದ ವಿಡಿಯೋಗಳನ್ನು ಹಾಕುತ್ತಿರುವ ನಟ-ನಟಿಯರು ಸಾಕಷ್ಟು ಮಂದಿ ಇದ್ದಾರೆ.

ನಟ ಸಲ್ಮಾನ್ ಖಾನ್ ಸಹ ಲಾಕ್‌ಡೌನ್‌ ಸಮಯಮವನ್ನು ಕಾಲಹರಣ ಮಾಡಲು ಮನಸ್ಸಿಲ್ಲದೆ, ಇದೇ ಸಮಯದಲ್ಲಿ ಹಾಡೊಂದನ್ನು ನಿರ್ದೇಶಿಸಿ, ನಿರ್ಮಿಸಿ, ನಟಿಸಿ ಯೂಟ್ಯೂಬ್‌ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಫಾರಂ ಹೌಸ್‌ನಲ್ಲಿಯೇ ಇರುವ ಸಲ್ಮಾನ್ ಖಾನ್

ಫಾರಂ ಹೌಸ್‌ನಲ್ಲಿಯೇ ಇರುವ ಸಲ್ಮಾನ್ ಖಾನ್

ಲಾಕ್‌ಡೌನ್ ಆದಾಗಿನಿಂದಲೂ ಸಲ್ಮಾನ್ ಖಾನ್, ತನ್ನ ಕೆಲವು ಗೆಳೆಯರು, ಕುಟುಂಬ ಸದಸ್ಯರೊಂದಿಗೆ ಪಮೇಲಾದ ತನ್ನ ಫಾರ್ಮೌಸ್‌ನಲ್ಲಿದ್ದಾರೆ. ಅಲ್ಲೇ ಇದ್ದು ಹಾಡೊಂದನ್ನು ನಿರ್ದೇಶಿಸಿದ್ದಾರೆ.

ಫಾರಂ ಹೌಸ್‌ನಲ್ಲೇ ಚಿತ್ರೀಕರಣ

ಫಾರಂ ಹೌಸ್‌ನಲ್ಲೇ ಚಿತ್ರೀಕರಣ

ತಮ್ಮ ಫಾರಂ ಹೌಸ್‌ನಲ್ಲಿಯೇ ಕೆಲವು ಸೀಮಿತ ವಸ್ತುಗಳನ್ನು ಬಳಸಿಕೊಂಡು ಸುಂದರವಾದ ಹಾಡೊಂದನ್ನು ಸಲ್ಮಾನ್ ಖಾನ್ ಮಾಡಿದ್ದಾರೆ. 'ತೇರೇ ಬಿನಾ' ಎನ್ನುವ ಈ ಹಾಡನ್ನು ಸಲ್ಮಾನ್ ಖಾನ್ ಅವರೇ ಹಾಡಿದ್ದಾರೆ.

ವಿರಹಿಯೊಬ್ಬನ ನೋವಿನ ಹಾಡು

ವಿರಹಿಯೊಬ್ಬನ ನೋವಿನ ಹಾಡು

ನಟಿ ಜಾಕ್ವೆಲಿನ್ ನಾಯಕಿಯಾಗಿರುವ ಈ ಹಾಡು, ಕಳೆದು ಹೋದ ಗೆಳತಿಯ ನೆನಪಲ್ಲಿ ಹಾಡುವ ವಿರಹಿಯೊಬ್ಬನ ನೋವನ್ನು ಕಟ್ಟಿಕೊಡುವ ಪ್ರಯತ್ನವನ್ನು ಸಲ್ಮಾನ್ ಖಾನ್ ಮಾಡಿದ್ದಾರೆ.

ಹಾಡು ಹಾಡಿರುವುದು ಸಲ್ಮಾನ್ ಖಾನ್

ಹಾಡು ಹಾಡಿರುವುದು ಸಲ್ಮಾನ್ ಖಾನ್

ಹಾಡಿನ ಸಾಹಿತ್ಯ ಶಬ್ಬೀರ್ ಅಹ್ಮದ್ ಬರೆದಿದ್ದಾರೆ. ಸಂಗೀತ ನಿರ್ದೇಶಿಸಿರುವುದು ಅಜಯ್ ಭಾಟಿಯಾ. ಹಾಡನ್ನು ನಿರ್ದೇಶಿಸಿ, ಹಾಡಿರುವುದು ಸ್ವತಃ ಸಲ್ಮಾನ್ ಖಾನ್. ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

More from Filmibeat

English summary
Salman Khan released a video song while lock down. Song shoot done in his farm. Jacqueline Fernandez is in lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X