ಕೊರೊನಾ ಸಮಯದಲ್ಲಿ ಹೊಸ ವ್ಯಾಪಾರಕ್ಕೆ ಕೈ ಹಾಕಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಕೇವಲ ಸಿನಿಮಾದಿಂದ ಮಾತ್ರವೇ ಹಣ ಗಳಿಸುವುದಿಲ್ಲ. ಸಿನಿಮಾ ಹೊರತಾಗಿಯೂ ಕೆಲ ವ್ಯವಹಾರಗಳು ಇವೆ.
Recommended Video
ಸಿನಿಮಾಗಳಲ್ಲಿ ನಟಿಸಿ ಕೋಟಿ-ಕೋಟಿ ಸಂಪಾದಿಸುವ ಸಲ್ಮಾನ್ ಖಾನ್ ನಟನೆ ಹೊರತಾಗಿ ಇನ್ನೂ ಹಲವು ಮೂಲಗಳಿಂದ ಹಣ ಸಂಪಾದಿಸುತ್ತಾರೆ. ನಟನ ಜೊತೆಗೆ ಅವರೊಬ್ಬ ಬ್ಯುಸಿನೆಸ್‌ಮನ್ ಸಹ.
ಸಿನಿಮಾ ನಿರ್ಮಾಣ ಸಂಸ್ಥೆ, ಟಿವಿ ಕಂಟೆಂಟ್ ನಿರ್ಮಾಣ ಸಂಸ್ಥೆ ಎರಡನ್ನೂ ಸಲ್ಮಾನ್ ಖಾನ್ ಹೊಂದಿದ್ದಾರೆ. ಜೊತೆಗೆ 'ಬೀಯಿಂಗ್ ಹ್ಯೂಮನ್' ಫ್ಯಾಷನ್ ಬ್ರಾಂಡ್ ಸಹ ಅವರದ್ದೇ. ಯಾತ್ರಾ ಡಾಟ್ ಕಾಮ್‌ನಲ್ಲೂ ಪಾಲುದಾರಿಕೆ ಹೊಂದಿದ್ದಾರೆ ಸಲ್ಮಾನ್ ಇದರ ಜೊತೆಗೆ ಈಗ ಹೊಸ ಬ್ಯುಸಿನೆಸ್ ಒಂದಕ್ಕೆ ಸಲ್ಮಾನ್ ಖಾನ್ ಕೈ ಹಾಕಿದ್ದಾರೆ.

ಫ್ರೆಶ್ ಹೆಸರಿನ ಬ್ರ್ಯಾಂಡ್ ಬಿಡುಗಡೆ
ಫ್ರೆಶ್ (FRSH) ಹೆಸರಿನ ಹೊಸ ಬ್ರಾಂಡ್ ಬಿಡುಗಡೆ ಮಾಡಿರುವ ಸಲ್ಮಾನ್ ಖಾನ್. ಪ್ರಸ್ತುತ ಫ್ರೆಶ್ ಹೆಸರಿನ ಸ್ಯಾನಿಟೈಸರ್‌ಗಳನ್ನು ಹೊರತಂದಿದ್ದಾರೆ. ಈ ಸ್ಯಾನಿಟೈಸರ್‌ಗಳು ಶೀಘ್ರವೇ ಸಮೀಪದ ಸ್ಟೋರ್‌ಗಳಲ್ಲಿ ಲಭ್ಯವಾಗಲಿವೆಯಂತೆ.

ಇನ್ನೂ ಹಲವು ವಸ್ತುಗಳು ಬರಲಿವೆ
ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ಸಲ್ಮಾನ್ ಖಾನ್, 'ಸುಗಂಧ ದ್ರವ್ಯ, ಬಾಡಿಓರ್ಡರ್, ಇನ್ನೂ ಕೆಲವು ಸೌಂದರ್ಯ ವರ್ದಕಗಳನ್ನು ಬಿಡುಗಡೆ ಮಾಡುವ ಇರಾದೆ ಇತ್ತು, ಆದರೆ ಸ್ಯಾನಿಟೈಸರ್‌ಗಳು ಪ್ರಸ್ತುತ ಬಹಳ ಅವಶ್ಯಕ ಹಾಗಾಗಿ ಸ್ಯಾನಿಟೈಸರ್ ಅನ್ನು ಮೊದಲಿಗೆ ಬಿಡುಗಡೆ ಮಾಡುತ್ತಿದ್ದೇವೆ' ಎಂದಿದ್ದಾರೆ.

'ಉತ್ತಮ ಗುಣಮಟ್ಟ, ಹೆಚ್ಚಿನ ಬೆಲೆ ಇಲ್ಲ'
ಫ್ರೆಶ್ ಬ್ರ್ಯಾಂಡಿನ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಾಗಿದೆ. ಜೊತೆಗೆ ಹೆಚ್ಚು ಬೆಲೆಯೂ ಇಲ್ಲ. ಶೀಘ್ರದಲ್ಲಿಯೇ ಸಮೀಪದ ಅಂಗಡಿಗಳಲ್ಲಿ ದೊರಕುತ್ತದೆ. ಶೀಘ್ರದಲ್ಲಿಯೇ ಸೌಂದರ್ಯ ವರ್ದಕಗಳನ್ನೂ ಸಹ ಬಿಡುಗಡೆ ಮಾಡುತ್ತೇವೆ' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಬೀಯಿಂಗ್ ಹ್ಯೂಮನ್ ಪ್ರಮುಖ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ
ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಈಗಾಗಲೇ ಪ್ರಮುಖ ಬ್ರ್ಯಾಂಡ್ ಆಗಿದೆ. ಬೀಯಿಂಗ್ ಹ್ಯೂಮನ್ ಸೈಕಲ್‌ಗಳೂ ಸಹ ಲಭ್ಯವಿವೆ. ಸಲ್ಮಾನ್ ಖಾನ್ ವ್ಯವಹಾರದ ವಿಶೇಷತೆಯೆಂದರೆ ಅವರು ವ್ಯವಹಾರದಿಂದ ಗಳಿಸಿದ ಹಣದಲ್ಲಿ ಒಂದಂಶವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಾರೆ.


Click it and Unblock the Notifications











