ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮಾಡಿದರು ಮನವಿ
ಬಾಲಿವುಡ್ ನಟ ಸಲ್ಮಾನ್ ಖಾನ್ ಹುಟ್ಟುಹಬ್ಬ ಎಂದರೆ ಅಭಿಮಾನಿಗ ಪಾಲಿಗೆ ಹಬ್ಬವೇ ಸರಿ. ಪ್ರತಿ ವರ್ಷ ಡಿಸೆಂಬರ್ 27 ಬಂದರೆ ಸಾಕು ಸಲ್ಮಾನ್ ಖಾನ್ ಮನೆ ಗ್ಯಾಲೆಕ್ಸಿ ಮುಂದೆ ಜನಸಾಗರವೇ ಸೇರುತ್ತದೆ.
ಆದರೆ ಈ ಬಾರಿ ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೌದು, ಈ ವರ್ಷ ಕೊರೊನಾ ಹಾಗು ಇತರೆ ಕಾರಣಗಳಿಂದ ನಟ ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಕೊರೊನಾ ಇರುವ ಕಾರಣ ಯಾರೂ ಸಹ ಹುಟ್ಟುಹಬ್ಬದ ದಿನ ತಮ್ಮ ಮನೆಯ ಬಳಿ ಗುಂಪು ಸೇರಬೇಡಿ ಎಂದು ಸಲ್ಮಾನ್ ಖಾನ್ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಮನೆಯ ಗೇಟಿನ ಮುಂದೆ ದೊಡ್ಡ ನೋಟೀಸ್ ಸಹ ಲಗತ್ತಿಸಲಾಗಿದೆ.

ನೊಟೀಸ್‌ನಲ್ಲಿ, ಅಭಿಮಾನಿಗಳು ಯಾರೂ ಸಹ ನನ್ನ ಹುಟ್ಟುಹಬ್ಬದಂದು ಮನೆಯ ಮುಂದೆ ಗುಂಪು ಸೇರಬೇಡಿ, ಕೊರೊನಾ ಇರುವ ಕಾರಣ ನಿಮ್ಮ ಆರೋಗ್ಯದ ದೃಷ್ಟಿಯಿಂದಾಗಿ ಯಾರೂ ಸಹ ಮನೆಯ ಬಳಿ ಬಂದು ಆರೋಗ್ಯದೊಂದಿಗೆ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಸಲ್ಮಾನ್ ಮನವಿ ಮಾಡಿದ್ದಾರೆ.
Recommended Video
ಈ ಡಿಸೆಂಬರ್ 27 ಕ್ಕೆ ಸಲ್ಮಾನ್ ಖಾನ್ ಗೆ 55 ವರ್ಷವಾಗುತ್ತದೆ. ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಬಿಡುಗಡೆ ಆಗಬೇಕಿದೆ. ಈ ನಡುವೆ ಬಿಗ್‌ಬಾಸ್ 14 ನಿರೂಪಣೆ ಮಾಡುತ್ತಿದ್ದಾರೆ ಸಲ್ಮಾನ್ ಖಾನ್.


Click it and Unblock the Notifications











