ಥಿಯೆಟರ್‌ನಲ್ಲಿ ಅಭಿಮಾನಿಗಳ ಹುಚ್ಚಾಟ, ಅಭಿಮಾನಿಗಳಲ್ಲಿ ಹೀಗೆ ಮಾಡದಂತೆ ಸಲ್ಮಾನ್ ಮನವಿ

ಸ್ಟಾರ್ ನಟರ ಸಿನಿಮಾಗಳ ಅಂದರೆ ಅಲ್ಲಿ ಅಬ್ಬರ ಆಡಂಬರ, ಸಂಭ್ರಮಾಚರಣೆ ಇದ್ದೇ ಇರುತ್ತೆ. ಥಿಯೇಟರ್‌ನಲ್ಲಿ ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೇ ಸಾಕು ಅಬಿಮಾನಿಗಳು ತಿಂಗಳ ಹಿಂದಿನಿಂದಲೇ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿರುತ್ತಾರೆ. ಹೇಗೆ ಗ್ರ್ಯಾಂಡ್ ಓಪನಿಂಗ್ ಮಾಡಬೇಕು, ಸಂಭ್ರಮಾಚರಣೆಯನ್ನು ಹೇಗೆ ಮಾಡಬೇಕು ಎಂಬೆಲ್ಲ ಬಗ್ಗೆ ಚರ್ಚೆ ಜೋರಾಗಿರುತ್ತೆ. ಹೀಗೆ ತಮ್ಮ ನೆಚ್ಚನ ಕಲಾವಿದರ ಸಿನಿಮಾಗಳ ರಿಲೀಸ್‌ ಅನ್ನು ಎಂಜಾಯ್ ಮಾಡುವ ಮಂದಿ ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತಾರೆ. ಅದಕ್ಕೆ ಈಗ ಸಾಕ್ಷಿಯಾಗಿರೋದು ಬಾಲಿವುಡ್ ಬಾಯ್‌ಜಾನ್ ಸಲ್ಮಾನ್ ಖಾನ್ ಅವರ ಅಭಿಮಾನಿಗಳು.

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ಅಂತಿಮ್ - ದಿ ಫೈನಲ್ ಟ್ರೂತ್' ಸಿನಿಮಾ ಕೆಲವೇ ದಿನಗಳ ಹಿಂದೆಯಷ್ಟೇ ಅಂದರೆ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ.

ಈ ಸಿನಿಮಾ ಬಿಡುಗಡೆ ನಂತರ ಸಿನಿಮಾ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೇ ಸಲ್ಮಾನ್ ಖಾನ್ ನಟನೆಯ ಈ ಸಿನಿಮಾ ಅತೀ ಕಡಿಮೆ ಕಲೆಕ್ಷನ್ ಮಾಡಿರುವ ವಿಚಾರದಲ್ಲೂ ಸುದ್ದಿಯಾಗಿದೆ. ಆದರೆ ಅಭಿಮಾನಿಗಳು ಮಾತ್ರ ಸಲ್ಮಾನ್ ಖಾನ್ ನಟನೆಯ ಸಿನಿಮಾ ಆಗಿರುವುದರಿಂದ ಚಿತ್ರ ರಿಲೀಸ್ ದಿನ ಭರ್ಜರಿಯಿಂದ ಸಂಭ್ರಮಿಸಿದ್ದಾರೆ. ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಆದರೆ ಈ ಸಂಭ್ರಮವೇ ಈಗ ಒಂದು ಎಡವಟ್ಟಿಗೆ ಕಾರಣವಾಗಿದೆ. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಸ್ವತಃ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿದ್ದಾರೆ.

Salman Khan requests fans not to burst firecracker in theaters.

'ಅಂತಿಮ್ - ದಿ ಫೈನಲ್ ಟ್ರೂತ್' ಬಿಡುಗಡೆ ಆದ ದಿನವೇ ಥಿಯೇಟರ್ ಒಂದರಲ್ಲಿ ತೆರೆಯ ಮೇಲೆ ಸಲ್ಮಾನ್ ಖಾನ್ ಎಂಟ್ರಿ ಆಗುವ ದೃಶ್ಯ ಬಂದಿದೆ. ಈ ದೃಶ್ಯವನ್ನು ಸಂಭ್ರಮಿಸಲು ಅಭಿಮಾನಿಗಳು ಥಿಯೇಟರ್ ಒಳಗೆಯೇ ಪಟಾಕಿಗಳನ್ನು ಸಿಡಿಸಿದ್ದಾರೆ. ಇದು ಸಿನಿಮಾ ನೋಡಲು ಆಗಮಿಸಿದವರಿಗೆ ಕಿರಿಕಿರಿ ಉಂಟುಮಾಡಿದ್ದು, ಪಟಾಕಿಯ ದಟ್ಟ ಹೊಗೆಯಿಂದ ಸರಿಯಾಗಿ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಹಾಗೆ ಅಲ್ಲಿದ್ದಂತಹ ಚಿಕ್ಕ ಮಕ್ಕಳು, ಹಾಗೇ ವಯಸ್ಸಾದವರಿಗೆ ಇದು ಭಾರೀ ತೊಂದರೆಯನ್ನು ನೀಡಿದ್ದು, ಥಿಯೇಟರ್‌ನಲ್ಲಿ ಪಟಾಕಿ ಸಿಡಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಕಷ್ಟು ಮಂದಿ ಇದಕ್ಕೆ ಕಮೆಂಟ್ ಮಾಡುತ್ತಿದ್ದು ಇದೆಂತಹ ಹುಚ್ಚಾಟ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹಾಗೇ ಅತಿರೇಕದ ಪರಮಾವಧಿ ಎಂದಿರೋ ಹಲವರು, ಥಿಯೇಟರ್ ಒಳಗೆ ಅಗ್ನಿ ಅವಘಡ ಸಂಭವಿಸಿದ್ದರೆ ಏನು ಗತಿ ಎಂದೆಲ್ಲಾ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

Salman Khan requests fans not to burst firecracker in theaters.

ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ನಟ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಸಲ್ಮಾನ್ ಖಾನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಇಂತಹ ಅತಿರೇಕದ ವರ್ತನೆ ತೋರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇಂತಹ ಕೆಲಸಗಳನ್ನು ನೀವು ಮತ್ತೆ ಮಾಡಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗೇಯೇ ಥಿಯೇಟರ್‌ಗಳ ಮಾಲೀಕರಿಗೂ ಸಂದೇಶವನ್ನು ನೀಡಿದ್ದಾರೆ. ಥಿಯೇಟರ್‌ನಲ್ಲಿ ನೀವು ಹೀಗೆಲ್ಲ ಆಗದಂತೆ ಎಚ್ಚರಿಕೆ ವಹಿಸಿ ಎಂದಿದ್ದಾರೆ. ಅವರೇ ಈ ಬಗ್ಗೆ ವೀಡಿಯೋವನ್ನು ಸಹಾ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳ ವರ್ತನೆಗೆ ಬೇಸರಗೊಂಡಿರುವ ಸಲ್ಲು ಸಿನಿಮಾ ವೀಕ್ಷಕರಲ್ಲೂ ಕ್ಷಮೆಯಾಚಿಸಿದ್ದು, 'ಅಂತಿಮ್ - ದಿ ಫೈನಲ್ ಟ್ರೂತ್' ಸಿನಿಮಾ ನೋಡಿ ಆಶೀರ್ವದಿಸಿ ಎಂದು ಕೇಳಿಕೊಂಡಿದ್ದಾರೆ.

Salman Khan requests fans not to burst firecracker in theaters.

ಸಲ್ಮಾನ್ ಖಾನ್‌ರ 'ಅಂತಿಮ್' ಸಿನಿಮಾ ಮರಾಠಿಯ 'ಮುಲ್ಶಿ ಪಟ್ಟೇರನ್' ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾವನ್ನು ಮಹೇಶ್ ಮಂಜ್ರೇಕರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಹೆಚ್ಚಿನ ಪ್ರಚಾರ ಮಾಡಲಾಗಿಲ್ಲ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕನಿಗಿಂತಲೂ ವಿಲನ್ ಪಾತ್ರ ಹೆಚ್ಚು ಪವರ್‌ಫುಲ್ ಆಗಿದೆ ಎಂಬುದು ಸಹ ಸಲ್ಮಾನ್ ಅಭಿಮಾನಿಗಳ ನಿರಾಸೆಗೆ ಕಾರಣ.

More from Filmibeat

English summary
salman khan requests fans not to burst firecracker in theaters.Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X