Don't Miss!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಬ್ಬಂಗ್-3' ಚಿತ್ರದಿಂದ ಮಲೈಕಾಗೆ ಗೇಟ್ ಪಾಸ್ ಕೊಟ್ಟ ಸಲ್ಮಾನ್ ಖಾನ್.!
ಬಾಲಿವುಡ್ ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಅಭಿನಯದ 'ದಬ್ಬಂಗ್' ಚಿತ್ರದಲ್ಲಿ ಮುನ್ನಿ ಆಗಿ ಮಲೈಕಾ ಅರೋರಾ ಸೊಂಟ ಬಳುಕಿಸಿದ್ದರು. ಇದೇ ಕಾಂಬಿನೇಶನ್ ನ 'ದಬ್ಬಂಗ್-3' ಚಿತ್ರದಲ್ಲೂ ಮುಂದುವರೆಸುವ ಪ್ಲಾನಿಂಗ್ ನಡೆದಿತ್ತು.
ಆದರೆ ಈಗ 'ದಬ್ಬಂಗ್-3' ಚಿತ್ರದಿಂದ ಮಲೈಕಾ ಅರೋರಾರನ್ನ ಕೈಬಿಡಲಾಗಿದೆ. ಖುದ್ದು ಸಲ್ಮಾನ್ ಖಾನ್, ಮಲೈಕಾ ಅರೋರಾಗೆ ಗೇಟ್ ಪಾಸ್ ಕೊಟ್ಟಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲೀಗ ಹರಿದಾಡುತ್ತಿದೆ.
ಬೋನಿ ಕಪೂರ್ ಗಿಲ್ಲ ಸಲ್ಮಾನ್ ಕಾಲ್ ಶೀಟ್: ಇದೆಲ್ಲ ಅರ್ಜುನ್ ಕೃಪಾಪೋಷಿತ.!
ಅದ್ಯಾವಾಗ ಮಲೈಕಾ ಅರೋರಾ, ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿದ್ರೋ, ಅಂದಿನಿಂದ ಸಲ್ಮಾನ್ ಖಾನ್ ಗೆ ಮಲೈಕಾ ಕಂಡ್ರೆ ಆಗಲ್ಲ. ಇದೇ ಕಾರಣಕ್ಕಾಗಿ ತಮ್ಮ 'ದಬ್ಬಂಗ್-3' ಚಿತ್ರದಿಂದ ಮಲೈಕಾರನ್ನು ಸಲ್ಮಾನ್ ಹೊರಗಿಟ್ಟಿದ್ದಾರೆ. ಮುಂದೆ ಓದಿರಿ...
ಮಲೈಕಾ ಜಾಗಕ್ಕೆ ಬಂದ ಕರೀನಾ
'ದಬ್ಬಂಗ್-3' ಚಿತ್ರದಿಂದ ಮಲೈಕಾ ಔಟ್ ಆದ್ಮೇಲೆ ಅದೇ ಜಾಗಕ್ಕೆ ಕರೀನಾ ಕಪೂರ್ ರನ್ನ ಸಲ್ಮಾನ್ ಖಾನ್ ಕರೆ ತಂದಿದ್ದಾರೆ. 'ದಬ್ಬಂಗ್-3' ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಸೊಂಟ ಬಳುಕಿಸಲು ಕರೀನಾ ಕಪೂರ್ ಗೆ ಆಫರ್ ಮಾಡಲಾಗಿದೆ.
ಸಲ್ಮಾನ್ ಸಹೋದರ ಅರ್ಬಾಝ್ ಗೆ ಸದ್ಯದಲ್ಲೇ ಮತ್ತೊಂದು ಮದುವೆ.?
ವಿಶೇಷ ಪಾತ್ರದಲ್ಲಿ ಅರ್ಬಾಜ್ ಖಾನ್ ಗರ್ಲ್ ಫ್ರೆಂಡ್
ಮಲೈಕಾ ರಿಂದ ವಿಚ್ಛೇದನ ಪಡೆದ ಮೇಲೆ ಜಾರ್ಜಿಯಾ ಎಂಬುವರನ್ನು ಅರ್ಬಾಜ್ ಖಾನ್ ಪ್ರೀತಿಸುತ್ತಿದ್ದಾರೆ. ಇದೇ ಜಾರ್ಜಿಯಾಗೆ 'ದಬ್ಬಂಗ್-3' ಚಿತ್ರದಲ್ಲಿ ವಿಶೇಷ ಪಾತ್ರ ನೀಡಲಾಗಿದೆ.
ಸೋನಂ ಆರತಕ್ಷತೆಯಲ್ಲಿ ಅರ್ಜುನ್ ಕಂಡು ಮೂತಿ ತಿರುಗಿಸಿದ ಸಲ್ಮಾನ್.! ಯಾಕೆ.?
ಖಾನ್ ಮನೆಗೆ ಅರ್ಜುನ್ ಕಪೂರ್ ಬ್ಯಾನ್
ಅರ್ಬಾಜ್ ಖಾನ್ ರಿಂದ ಮಲೈಕಾ ವಿಚ್ಛೇದನ ಪಡೆಯಲು ಅರ್ಜುನ್ ಕಪೂರ್ ಕಾರಣ. ಅರ್ಜುನ್ ಕಪೂರ್ ಜೊತೆ ಕ್ಲೋಸ್ ಆದ್ಮೇಲೆ ಅರ್ಬಾಜ್ ಖಾನ್ ಗೆ ಮಲೈಕಾ ಡೈವೋರ್ಸ್ ನೀಡಿದರು. ಹೀಗಾಗಿ ಅರ್ಜುನ್ ಕಪೂರ್ ಮೇಲೆ ಸಲ್ಮಾನ್ ಖಾನ್ ಗೆ ಮುನಿಸು. ತಮ್ಮ ಮನೆಗೆ ಬಾರದಂತೆ ಅರ್ಜುನ್ ಕಪೂರ್ ಗೆ ಸಲ್ಮಾನ್ ಖಾನ್ ನಿಷೇಧ ಹೇರಿದ್ದಾರೆ.
ಮದುವೆ ಸೀಸನ್ ಶುರು, 2019ಕ್ಕೆ ಅರ್ಜುನ್ ಕಪೂರ್- ಮಲೈಕಾ ಆರೋರಾ ವಿವಾಹ
ಚಿತ್ರೀಕರಣ ಯಾವಾಗ್ಲಿಂದ ಶುರು.?
ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ 'ದಬ್ಬಂಗ್-3' ಸಿನಿಮಾ ಇದೇ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಸೆಟ್ಟೇರಲಿದೆ. ಮುಂದಿನ ವರ್ಷದ ಈದ್ ಗೆ 'ದಬ್ಬಂಗ್-3' ತೆರೆಗೆ ಬರಲಿದೆ.