For Quick Alerts
  ALLOW NOTIFICATIONS  
  For Daily Alerts

  "ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ": ಸಲ್ಮಾನ್ ಖಾನ್ ಹೇಳಿಕೆ ವೈರಲ್!

  |

  ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ 'ಗಾಡ್‌ಫಾದರ್' ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದೆ. ಚಿತ್ರ ಹಿಂದಿಗೂ ಡಬ್ ಆಗಿ ರಿಲೀಸ್ ಆಗ್ತಿದ್ದು, ಚಿರು ಅಂಡ್ ಟೀಂ ಮುಂಬೈನಲ್ಲಿ ಸಿನಿಮಾ ಪ್ರಚಾರ ನಡೆಸ್ತಿದೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಖಾನ್ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

  ಟಾಲಿವುಡ್ ನಟ ಚಿರಂಜೀವಿ ಮತ್ತು ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಆತ್ಮೀಯ ಸ್ನೇಹಿತರು. ಇದೇ ಸ್ನೇಹಕ್ಕಾಗಿ ಸಲ್ಲು ತೆಲುಗು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಒಂದು ರೂಪಾಯಿ ಸಂಭಾವನೆ ಇಲ್ಲದೇ ಚಿತ್ರದಲ್ಲಿ ನಟಿಸಿದ್ದಾರೆ. 'ಲೂಸಿಫರ್' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಸಲ್ಲು ನಿಭಾಯಿಸಿದ್ದಾರೆ. ಸದ್ಯ ಸ್ಯಾಂಪಲ್‌ಗಳಲ್ಲಿ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಖದರ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

  ಸೀಕ್ರೆಟ್ ಬಿಚ್ಚಿಟ್ಟ ಚಿರಂಜೀವಿ: 'ಗಾಡ್‌ಫಾದರ್' ಚಿತ್ರಕ್ಕೆ ಸಲ್ಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ?ಸೀಕ್ರೆಟ್ ಬಿಚ್ಚಿಟ್ಟ ಚಿರಂಜೀವಿ: 'ಗಾಡ್‌ಫಾದರ್' ಚಿತ್ರಕ್ಕೆ ಸಲ್ಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ?

  'ಗಾಡ್‌ಫಾದರ್' ಚಿತ್ರದ ಮುಂಬೈ ಸುದ್ದಿಗೋಷ್ಠಿಯಲ್ಲಿ ಚಿರು ಹಾಗೂ ಸಲ್ಲು ಬಹಳ ತಮಾಷೆಯಾಗಿ ಮಾತನಾಡಿದ್ದಾರೆ. ತಮ್ಮಿಬ್ಬರ ಸ್ನೇಹದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಚಿರು ಜೊತೆ ನಟಿಸಿದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಲ್ಲು "ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ ಎಂದುಕೊಂಡಿದ್ದೀರಾ. ಖಂಡಿತ ಇದೆ. ಈ ಹಿಂದೆ ನಾನು- ಚಿರು ಥಾಯ್ಲೆಂಡ್‌ನಲ್ಲಿ ಜಾಹೀರಾತುವೊಂದರ ಚಿತ್ರೀಕರಣ ಮುಗಿಸಿ ಮುಂಬೈಗೆ ಬಂದೆವು. ಮಧ್ಯಾಹ್ನ 1.30ರ ಸುಮಾರಿಗೆ ಬಂದಿಳೆದಿವು. ಚಿರು ಮುಂಜಾನೆ ಹೈದರಾಬಾದ್‌ಗೆ ಹೋಗಬೇಕಿತ್ತು. ಸ್ವಲ್ಪ ಹೊತ್ತು ಇಬ್ಬರು ಮಾತನಾಡಿದೆವು. ನಂತರ ನಾನು ಬೆಡ್‌ರೂಂಗೆ ಹೋಗಿ ಮಲಗಿಕೊಳ್ಳುವುದಕ್ಕೆ ಚಿರಂಜೀವಿಗೆ ಹೇಳಿದೆ, ಅವರು ಮಾತ್ರ ಕೌಚ್‌ ಮೇಲೆ ಮಲಗುವುದಾಗಿ ಹೇಳಿದರು. ನಿಜ ಹೇಳಬೇಕೆಂದರೆ ನನಗೂ ಕೌಚ್‌ ಮೇಲೆ ಮಲಗುವ ಮನಸ್ಸಿತ್ತು. ಆದರೆ ಚಿರುಗೆ ಮಾತಿಗೆ ಇಲ್ಲ ಎನ್ನದೇ ಒಪ್ಪಿಕೊಂಡೆ. ನಾನು ಹೋಗಿ ಬೆಡ್‌ರೂಂನಲ್ಲಿ ಮಲಗಿದರೆ ಚಿರು ನನ್ನ ಕೌಚ್ ಮೇಲೆ ಮಲಗಿ ನಿದ್ರೆ ಮಾಡಿದರು. ಈ ರೀತಿ ನಾನು ಸಿನಿಮಾದಲ್ಲಿ ನಟಿಸುವಂತಾಯಿತು" ಎಂದು ಸಲ್ಲು ತಮಾಷೆ ಮಾಡಿದ್ದಾರೆ. ಈ ಹೇಳಿಕೆ ಈಗ ವೈರಲ್ ಆಗಿದೆ.

  ನಂತರ ಮಾತನಾಡಿದ ಚಿರು, "ಗಾಡ್ ಫಾದರ್‌ ಚಿತ್ರದಲ್ಲಿ ಒಂದು ಸ್ಟ್ರಾಂಗ್ ಕ್ಯಾರೆಕ್ಟರ್ ಇದೆ. ಲೂಸಿಫರ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್ ಪಾತ್ರ ಮಾಡಿದ್ದರು. ಗಾಡ್‌ಫಾದರ್‌ನಲ್ಲಿ ಈ ಪಾತ್ರವನ್ನು ಸಲ್ಮಾನ್‌ ಭಾಯ್‌ ಮಾಡಿದರೆ ಉತ್ತಮ ಎಂದು ನಾವು ಭಾವಿಸಿದ್ದೇವೆ. ನಾವು ಕೇಳಿದಾಗ, "ನಾನು ಮಾಡಬೇಕೆಂದು ನೀವು ಬಯಸಿದರೆ, ಎರಡನೇ ಆಲೋಚನೆಯಿಲ್ಲದೆ ಮಾಡುತ್ತೇನೆ. ನೀವೇನು ಯೋಚಿಸಬೇಡಿ, ನಾನು ಮಾಡುತ್ತೇನೆ ಎಂದು ಸಲ್ಲು ಒಪ್ಪಿಕೊಂಡರು. ಸಲ್ಮಾನ್ ಭಾಯ್ ಒಪ್ಪಿದ ನಂತರ ಚಿತ್ರಕ್ಕೆ ಮತ್ತಷ್ಟು ಖದರ್ ಬಂತು. ಶೂಟಿಂಗ್‌ನಲ್ಲಿ ನಮಗೆ ಬಹಳ ಸಹಕರಿಸಿದರು. ಆಗಲೇ ನಮಗೆ ಸಿನಿಮಾ ಸಕ್ಸಸ್ ಗ್ಯಾರೆಂಟಿ ಎನ್ನುವ ನಂಬಿಕೆ ಬಂತು. ನಮ್ಮ ಮೇಲಿನ ಅಪಾರ ಪ್ರೀತಿಯಿಂದ ಸಲ್ಲು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಲ್ಲು ಜೊತೆ ಬಹಳ ಜೋಶ್‌ನಿಂದ ಚಿತ್ರದಲ್ಲಿ ನಟಿಸಿದ್ದೇನೆ. ಅದನ್ನು ನೀವು ತೆರೆಮೇಲೆ ನೋಡ್ತೀರಾ" ಎಂದು ಚಿರಂಜೀವಿ ಹೇಳಿದ್ದಾರೆ.

  Salman Khan reveals about his close bond with Chiranjeevi in Godfather mumbai press meet

  ಮೋಹನ್ ರಾಜಾ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್ 'ಗಾಡ್‌ಫಾದರ್' ದಸರಾ ಸಂಭ್ರಮದಲ್ಲಿ ಅಕ್ಟೋಬರ್ 5ಕ್ಕೆ ತೆರೆಗೆ ಬರ್ತಿದೆ. ನಯನತಾರಾ, ಸತ್ಯದೇವ್, ಸಮುದ್ರ ಖನಿ, ಸುನಿಲ್, ಪುರಿ ಜಗನ್ನಾಥ್ ಸೇರಿದಂತೆ ಸಾಕಷ್ಟು ಜನ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎಸ್‌. ತಮನ್ ಮ್ಯೂಸಿಕ್ ಚಿತ್ರಕ್ಕಿದೆ. ರಾಮ್‌ಚರಣ್, ಆರ್‌. ಬಿ ಚೌಧರಿ, ಎನ್‌. ವಿ ಪ್ರಸಾದ್ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  English summary
  Salman Khan reveals about his close bond with Chiranjeevi in Godfather mumbai press meet. Know More.
  Sunday, October 2, 2022, 11:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X