ಹೋಲ್ ಸೇಲ್ ಆಗಿ ಎಲ್ಲರನ್ನೂ ಫೂಲ್ ಮಾಡಿದ ಸಲ್ಮಾನ್ ಖಾನ್.!

By Harshitha

Recommended Video

ಎಲ್ಲರಿಗೂ ಶಾಕ್ ಕೊಟ್ಟ ಸಲ್ಮಾನ್ ಖಾನ್ | Filmibeat Kannada

ನಿನ್ನೆ ರಾತ್ರಿ 10.46 ಗಂಟೆಗೆ ಸಲ್ಮಾನ್ ಖಾನ್ ಟ್ವಿಟ್ಟರ್ ಅಕೌಂಟ್ ನಿಂದ ಒಂದೇ ಒಂದು ಟ್ವೀಟ್ ಹೊರ ಬಂತು. ಆ ಟ್ವೀಟ್ ನೋಡಿ ಅಭಿಮಾನಿಗಳು ಸಂಭ್ರಮ ಪಟ್ಟರು. ಆದಷ್ಟು ಬೇಗ ಸಲ್ಲು ಭಾಯ್ ಮದುವೆ ಆಗ್ತಾರೆ ಅಂತ ಅನೇಕರು ಸಂತಸಗೊಂಡರು. ಆದ್ರೆ, ಅದು ನಿಜ ಅಲ್ಲ ಅಂತ ಈಗ ಕನ್ಫರ್ಮ್ ಆಗಿದೆ.

ಹೋಲ್ ಸೇಲ್ ಆಗಿ ಸಲ್ಮಾನ್ ಖಾನ್ ಎಲ್ಲರನ್ನೂ ಫೂಲ್ ಮಾಡಿದ್ದಾರೆ. ''ತಮಗೆ ಹುಡುಗಿ ಸಿಕ್ಕಳು'' ಅಂತ ಸಲ್ಮಾನ್ ಖಾನ್ ಹೇಳಿದ್ದು ನಿಜ. ಆದ್ರೆ, ''ಮದುವೆ ಆಗಲು ಅಲ್ಲ'' ಅಂತ ಸಲ್ಮಾನ್ ಭಾಯ್ ಸ್ಪಷ್ಟ ಪಡಿಸಿದ್ದಾರೆ.

ಅಲ್ಲಿಗೆ, ಸಿಹಿ ಸುದ್ದಿ ನಿರೀಕ್ಷೆ ಮಾಡಿದ ಅಭಿಮಾನಿಗಳ ಆಸೆಗೆ ಬಕೆಟ್ ಗಟ್ಟಲೆ ತಣ್ಣೀರು ಎರಚಿದಂತಾಗಿದೆ. ಅಷ್ಟಕ್ಕೂ, ಏನೀ ಟ್ವೀಟ್ ಮ್ಯಾಟರ್ ಅಂದ್ರಾ.? ಸಂಪೂರ್ಣ ವಿವರ ಇಲ್ಲಿದೆ, ಓದಿರಿ...

ನಿನ್ನೆ ಸಲ್ಮಾನ್ ಮಾಡಿದ ಟ್ವೀಟ್ ಇದು

ನಿನ್ನೆ ಸಲ್ಮಾನ್ ಮಾಡಿದ ಟ್ವೀಟ್ ಇದು

''ನನಗೆ ಹುಡುಗಿ ಸಿಕ್ಕಳು'' ಅಂತ ನಿನ್ನೆ ರಾತ್ರಿ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದರು.

ಸಲ್ಲುಗೆ ಮದುವೆಯಂತೆ.!

ಸಲ್ಲುಗೆ ಮದುವೆಯಂತೆ.!

ಸಲ್ಮಾನ್ ಖಾನ್ ಮಾಡಿದ್ದ ಟ್ವೀಟ್ ನೋಡಿ, ಓಹೋ... ಸಲ್ಮಾನ್ ಖಾನ್ ಮದುವೆ ಆಗ್ತಿರ್ಬೇಕು ಅಂತ ಅನೇಕರು ಭಾವಿಸಿದ್ದರು.

ಫೂಲ್ ಮಾಡಿದ ಸಲ್ಮಾನ್

ಫೂಲ್ ಮಾಡಿದ ಸಲ್ಮಾನ್

''ಆಯುಷ್ ಶರ್ಮಾ ಅಭಿನಯದ 'ಲವ್ ರಾತ್ರಿ' ಚಿತ್ರಕ್ಕಾಗಿ ಹುಡುಗಿ ಸಿಕ್ಕಿದ್ದಾಳೆ. ಆಕೆಯ ಹೆಸರು ವರೀನಾ ಹುಸೇನ್. ಡೋಂಟ್ ವರಿ, ಬೀ ಹ್ಯಾಪಿ'' ಅಂತ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ, ಹುಡುಗಿ ಸಿಕ್ಕಿರುವುದು ಸಿನಿಮಾಗಾಗಿ, ಮದುವೆಗಾಗಿ ಅಲ್ಲ ಎಂಬುದು ಈ ಟ್ವೀಟ್ ನಿಂದ ಸ್ಪಷ್ಟವಾಗಿದೆ.

ಆಯುಷ್ ಶರ್ಮಾ ಯಾರು.?

ಆಯುಷ್ ಶರ್ಮಾ ಯಾರು.?

ಆಯುಷ್ ಶರ್ಮಾ ಬೇರೆ ಯಾರೂ ಅಲ್ಲ, ಸಲ್ಮಾನ್ ತಂಗಿ ಅರ್ಪಿತಾ ಖಾನ್ ಪತಿ. 'ಲವ್ ರಾತ್ರಿ' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ ಆಯುಷ್ ಶರ್ಮಾ. ಅಂದ್ಹಾಗೆ, 'ಲವ್ ರಾತ್ರಿ' ಚಿತ್ರಕ್ಕೆ ಸಲ್ಮಾನ್ ಖಾನ್ ನಿರ್ಮಾಪಕ.

ಯಾರೀ ವರೀನಾ.?

ಯಾರೀ ವರೀನಾ.?

ಸದ್ಯ ಮುಂಬೈನಲ್ಲಿ ನೆಲೆಸಿರುವ ವರೀನಾ ಮಾಡೆಲ್. ಕ್ಯಾಡ್ಬರಿ ಸಿಲ್ಕ್ ಆಡ್ ನಲ್ಲಿ ಕಾಣಿಸಿಕೊಂಡಿರುವ ವರೀನಾ ಇದೀಗ 'ಲವ್ ರಾತ್ರಿ' ಮೂಲಕ ಬಾಲಿವುಡ್ ಬೆಳ್ಳಿಪರದೆ ಮೇಲೆ ಮಿನುಗಲಿದ್ದಾರೆ.

More from Filmibeat

English summary
Bollywood Actor Salman Khan has taken his twitter account to reveal the heroine for Aayush Sharma's Bollywood Debut 'Loveratri'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X