»   » ಸೆಟ್ಟೇರುವ ಮುನ್ನವೇ ಸಲ್ಮಾನ್ 'ದಬಾಂಗ್ 3' ಚಿತ್ರಕಥೆ ರಿವೀಲ್ ಆಯ್ತು!

ಸೆಟ್ಟೇರುವ ಮುನ್ನವೇ ಸಲ್ಮಾನ್ 'ದಬಾಂಗ್ 3' ಚಿತ್ರಕಥೆ ರಿವೀಲ್ ಆಯ್ತು!

Posted By:
Subscribe to Filmibeat Kannada

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್' ಮತ್ತು 'ದಬಾಂಗ್ 2' ಚಿತ್ರಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟರು. ಈ ಎರಡು ಚಿತ್ರಗಳ ಯಶಸ್ಸಿನ ನಂತರ ಈಗ ಸಲ್ಲು 'ದಬಾಂಗ್ 3' ಚಿತ್ರ ಮಾಡಲು ಮುಂದಾಗಿದ್ದು, ಸೆಟ್ಟೇರುವ ಮುನ್ನವೇ ಚಿತ್ರದ ಕಥೆಯನ್ನು ಸ್ವತಃ ಬಹಿರಂಗ ಪಡಿಸಿದ್ದಾರೆ.

ಸಲ್ಮಾನ್ ಖಾನ್ ಇತ್ತೀಚೆಗೆ ಡಿಎನ್‌ಎ ಜೊತೆಗಿನ ಸಂದರ್ಶನದಲ್ಲಿ 'ದಬಾಂಗ್ 3' ಚಿತ್ರದ ಕಥೆ, ಚಿತ್ರ ಯಾವಾಗ ಸೆಟ್ಟೇರಲಿದೆ ಮತ್ತು ತಮ್ಮ ಇತರೆ ಪ್ರಾಜೆಕ್ಟ್‌ಗಳು ಯಾವುವು ಎಂಬುದನ್ನು ರಿವೀಲ್ ಮಾಡಿದ್ದಾರೆ.

Salman Khan reveals the plot of Dabangg 3

'ಸುಲ್ತಾನ್' ನಟ ಸಲ್ಮಾನ್ ಖಾನ್ ಈಗಾಗಲೇ 2 ವರ್ಷದವರೆಗೆ ಕಾಲ್ ಶೀಟ್ ಕೊಟ್ಟಿದ್ದಾರಂತೆ. ಅವರನ್ನು ತೆರೆ ಮೇಲೆ ಕ್ರಿಸ್‌ಮಸ್ ವೇಳೆಗೆ 'ಟೈಗರ್ ಜಿಂದ ಹೈ' ಚಿತ್ರದಲ್ಲಿ ನೋಡಬಹುದು. ಈ ಚಿತ್ರದಲ್ಲಿ ಅವರೊಂದಿಗೆ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ.

'ದಬಾಂಗ್ 3' ಸಿನಿಮಾ ಮಾಡುವ ಸುಳಿವು ನೀಡಿದ ಬೆನ್ನಲ್ಲೇ ಸಲ್ಲು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಆದರೆ ಚಿತ್ರ ಸೆಟ್ಟೇರುವ ಮುನ್ನವೇ ಕಥೆ ಬಗ್ಗೆ ಹೇಳಿರುವ ಸಲ್ಮಾನ್ ಖಾನ್, "ಚಿತ್ರ ಪ್ರಸ್ತುತದಲ್ಲಿ ಆರಂಭವಾಗಿ ಫ್ಲ್ಯಾಶ್ ಬ್ಯಾಕ್ ಗೆ ಹೋಗುತ್ತದೆ. ನಂತರ ಮತ್ತೆ ಪ್ರೆಸೆಂಟ್ ಗೆ ಬರಲಿದೆ. ಇದರಲ್ಲಿ ಹಲವು ಘಟನೆಗಳು ಇರಲಿವೆ. ಚುಲ್ ಪಾಂಡೆ ಪ್ರೆಸೆಂಟ್ ನಲ್ಲಿ ತಮ್ಮ ಜೀವನದಲ್ಲಿ 'ದಬಾಂಗ್' ಚಿತ್ರದ ಎರಡು ಭಾಗಗಳಲ್ಲಿ ಏನಾಯಿತು, 'ಚುಲ್ ಬುಲ್ ಪಾಂಡೆ' ಹೆಸರು ಹೇಗೆ ಬಂತು ಎಂಬುದನ್ನು ತೋರಿಸಲಾಗುತ್ತದೆ. ಆದರೆ ಫ್ಲ್ಯಾಶ್ ಬ್ಯಾಕ್ ನಿಂದ ಬಂದ ನಂತರ ಪ್ರೆಸೆಂಟ್ ನಲ್ಲಿ ಏನಾಗಲಿದೆ ಎಂಬುದು ಮಾತ್ರ ಕುತೂಹಲಕಾರಿ" ಎಂದು ಹೇಳಿದ್ದಾರೆ.

Salman Khan reveals the plot of Dabangg 3

ಸಲ್ಮಾನ್ ಖಾನ್ ತಮ್ಮ ಪ್ಲಾನ್ ಪ್ರಕಾರ ಈಗ ಇನ್ನು ಹೆಸರು ಸೂಚಿಸದ ರೆಮೋ ಡಿಸೋಜಾ ರವರ ಡ್ಯಾನ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಜೊತೆಗೆ 'ದಬಾಂಗ್ 3' ಚಿತ್ರದ ಸ್ಕ್ರಿಪ್ಟ್ ಸಹ ರೆಡಿ ಆಗಿದ್ದು ಈ ಚಿತ್ರದ ಶೂಟಿಂಗ್ ಸಹ ಆರಂಭಿಸಲಿದ್ದಾರಂತೆ. ಆದರೆ ಈ ಹಿಂದಿನ 'ದಬಾಂಗ್' ಸೀಕ್ವೆಲ್ ಗಳನ್ನು ನಿರ್ದೇಶನ ಮಾಡಿದ ಅರ್ಬಾಜ್ ಖಾನ್ 'ದಬಾಂಗ್ 3' ನಿರ್ದೇಶನ ಮಾಡುವುದಿಲ್ಲವಂತೆ. ಬದಲಿಗೆ ಅಲಿ ಅಬ್ಬಾಸ್ ಜಫರ್ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆಯಂತೆ.

English summary
Bollywood Actor Salman Khan fans have loved him in the previous parts of the Dabangg series. And as we know that he is all set of Dabangg 3, the actor himself leaked a few details about the part 3, and has certainly raised the excitement.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada