'ಅಂತಿಮ್' ಟ್ರೇಲರ್ ಬಿಡುಗಡೆ: ಸಲ್ಮಾನ್ ಖಾನ್ ಮೈಕಟ್ಟಿಗೆ ಫಿದಾ ಆದ ಅಭಿಮಾನಿಗಳು

ಸಲ್ಮಾನ್ ಖಾನ್ ನಟಿಸಿರುವ ಹೊಸ ಸಿನಿಮಾ 'ಅಂತಿಮ್' ಟ್ರೆಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ಸಲ್ಮಾನ್ ಖಾನ್‌ರ ಪವರ್‌ಫುಲ್ ಡೈಲಾಗ್‌ಗಳು, ಕಟ್ಟುಮಸ್ತು ದೇಹ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

'ಅಂತಿಮ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದು ಯುವ ನಟನೊಬ್ಬ ವಿಲನ್ ಪಾತ್ರದಲ್ಲಿ ನಟಿಸಿದ್ದಾನೆ. ಸರ್ದಾರ್ ಆಗಿರುವ ಸಲ್ಮಾನ್ ಖಾನ್ ರಾಜಕೀಯ ಒತ್ತಡದ ನಡುವೆ ವಿಲನ್‌ ಅನ್ನು ನಿರ್ನಾಮ ಮಾಡುವ ಕತೆಯನ್ನು 'ಅಂತಿಮ್' ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಭೂಕಬಳಿಕೆ, ರಿಯಲ್‌ ಎಸ್ಟೇಟ್ ರೌಡಿಸಂ ವಿಷಯಗಳ ಮೇಲೂ ಬೆಳಕು ಚೆಲ್ಲಲಾಗಿದೆ.

3 ನಿಮಿಷಕ್ಕೂ ಹೆಚ್ಚಿನ ಅವಧಿಯ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಟ್ರೇಲರ್‌ನಲ್ಲಿ ಸಲ್ಮಾನ್ ಖಾನ್ ಅಷ್ಟೆ ವಿಲನ್ ಆಯುಷ್ ಶರ್ಮಾ ಸಹ ಗಮನ ಸೆಳೆಯುತ್ತಿದ್ದಾರೆ. ಸಲ್ಮಾನ್ ಖಾನ್‌ರಷ್ಟೆ ಫವರ್‌ ಫುಲ್ ಸಂಭಾಷಣೆಗಳು ವಿಲನ್‌ಗೂ ಇರುವುದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ.

Salman Khans Antim Movie Trailer Released

ಸಲ್ಮಾನ್ ಈ ಸಿನಿಮಾದಲ್ಲಿಯೂ ಶರ್ಟ್ ತೆಗೆದಿದ್ದು ಅವರ ಕಟ್ಟುಮಸ್ತು ದೇಹ ಮಿರಿಮಿರಿ ಮಿಂಚುತ್ತಿದೆ. ಸಲ್ಮಾನ್ ಖಾನ್‌ಗೆ ಈಗ 55 ವರ್ಷ ವಯಸ್ಸು ಈ ವಯಸ್ಸಿನಲ್ಲಿಯೂ ದೇಹವನ್ನು ಕಟ್ಟುಮಸ್ತಾಗಿ ಇರಿಸಿಕೊಂಡಿದ್ದಾರೆ ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ನಟಿಸಿರುವ 'ಅಂತಿಮ್' ಸಿನಿಮಾವು ಮರಾಠಿಯ 'ಮುಲ್ಶಿ ಪಟ್ಟೆರನ್' ಸಿನಿಮಾದ ರೀಮೇಕ್ ಆಗಿದ್ದು, ನಟ ಮಹೇಶ್ ಮಂಜ್ರೇಕರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಟಿಸಿದ್ದಾರೆ ಸಹ. 'ಅಂತಿಮ್' ಸಿನಿಮಾಕ್ಕೆ ಸಲ್ಮಾನ್ ಖಾನ್‌ ಅವರೇ ಬಂಡವಾಳ ಹೂಡಿದ್ದಾರೆ.

ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ಪ್ರಗ್ಯಾ ಜೈಸ್ವಾಲ್, ಮಹಿಮಾ ಮಕ್ವಾನಾ, ಜಿಶ್ಶು ಸೇನ್‌ಗುಪ್ತಾ, ನಿಖಿತ್ ಧೀರ್, ಸಯಾಜಿ ಶಿಂಧೆ, ಮಹೇಶ್ ಮಂಜ್ರೇಕರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವು ನವೆಂಬರ್ 26 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾ ಕೆಲ ತಿಂಗಳ ಹಿಂದಷ್ಟೆ ಒಟಿಟಿ ಹಾಗೂ ಚಿತ್ರಮಂದಿರ ಎರಡರಲ್ಲೂ ಒಟ್ಟಿಗೆ ಬಿಡುಗಡೆ ಆಗಿತ್ತು. ಪ್ರಭುದೇವಾ ನಿರ್ದೇಶನ ಮಾಡಿದ್ದ ಸಿನಿಮಾದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ಬರಲಿಲ್ಲವಾದರೂ ಸಿನಿಮಾವು ನೂರಾರು ಕೋಟಿ ಹಣ ಸಂಪಾದನೆ ಮಾಡಿತ್ತು. 'ಅಂತಿಮ್' ಸಿನಿಮಾ ಸಹ ದೊಡ್ಡ ಮಟ್ಟದ ಹಿಟ್ ಆಗಲಿದೆಯೆಂಬ ನಿರೀಕ್ಷೆ ಸಲ್ಲು ಭಾಯ್ ಅಭಿಮಾನಿಗಳಲ್ಲಿದೆ.

'ಅಂತಿಮ್' ಹೊರತುಪಡಿಸಿ, ಸಲ್ಮಾನ್ ಖಾನ್ 'ಇನ್‌ಶಾ ಅಲ್ಲಾ', 'ರಘು ರಾಜಾ ರಾಮ್', 'ಕಭಿ ಈದ್ ಕಭಿ ದಿವಾಲಿ', 'ವಾಂಟೆಡ್ 2', 'ಡ್ಯಾನ್ಸಿಂಗ್ ಡ್ಯಾಡ್', 'ಟೈಗರ್ 3', 'ಭಜರಂಗಿ ಭಾಯಿಜಾನ್ 2', 'ದಬಾಂಗ್ 4', 'ಧಕ್', 'ಕಿಕ್ 2', 'ನೋ ಎಂಟ್ರಿ 2' ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇವುಗಳಲ್ಲಿ 'ಟೈಗರ್ 3' ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ.

More from Filmibeat

English summary
Salman Khan's Antim movie trailer released. Movie will release on theaters on November 26.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X