»   » ಸಲ್ಮಾನ್ ಬಾಮೈದನ ಚಪ್ಪಲಿ ಬೆಲೆಯಲ್ಲಿ ದುಬೈಗೆ ಹೋಗ್ಬಹುದಂತೆ

ಸಲ್ಮಾನ್ ಬಾಮೈದನ ಚಪ್ಪಲಿ ಬೆಲೆಯಲ್ಲಿ ದುಬೈಗೆ ಹೋಗ್ಬಹುದಂತೆ

Posted By:
Subscribe to Filmibeat Kannada

ಸಿನಿಮಾ ತಾರೆಯರು ಐಷರಾಮಿ ಜೀವನವನ್ನ ಹೆಚ್ಚು ಇಷ್ಟ ಪಡ್ತಾರೆ. ತಾವು ತೊಡುವ ಬಟ್ಟೆ, ಚಪ್ಪಲಿ, ಶೂ, ಒಡವೆ, ಹಾಗೂ ಬಳಸುವ ವಾಹನಗಳು ಹೀಗೆ ಪ್ರತಿಯೊಂದು ಕಾಸ್ಟ್ಲಿ ಆಗಿರಬೇಕು. ಈ ಟ್ರೆಂಡ್ ಬಾಲಿವುಡ್ ನಲ್ಲಿ ಹೆಚ್ಚು ನೋಡಬಹುದು.

ಇಂತಹ ಐಷರಾಮಿ ಸೆಲೆಬ್ರೆಟಿಯೊಬ್ಬರು ಈಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅತ್ಯಂತ ಸರಳವಾಗಿ ಡ್ರೆಸ್ ತೊಟ್ಟಿದ್ದ ಈ ನಟ ದುಬಾರಿ ಬೆಲೆಯ ಚಪ್ಪಲಿ ಹಾಕಿಕೊಂಡಿದ್ದರು ಎನ್ನುವುದು ಈಗ ಬಾಲಿವುಡ್ ನಲ್ಲಿ ಗಿರಿಗಿಟ್ಲೆ ಹೊಡಿತಿದೆ. ಇಂತಹ ಐಷರಾಮಿ ತಾರೆ ಯಾರು ಅಂದ್ರಾ, ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಬಾಮೈದ ಆಯುಶ್ ಶರ್ಮಾ.

ಇತ್ತೀಚೆಗಷ್ಟೇ ಮುಂಬೈ ನಗರದಲ್ಲಿ ಕಾಣಿಸಿಕೊಂಡ ಆಯುಶ್, ಕಪ್ಪು ಪ್ಯಾಂಟ್, ಕಪ್ಪು-ಬಿಳುಪಿನ ಟಿ-ಶರ್ಟ್ ಹಾಗೂ ಬಾಸ್ಕೆಟ್ ಬಾಲ್ ಕ್ಯಾಪ್ ತೊಟ್ಟಿದ್ದರು. ಇಷ್ಟೊಂದು ಹ್ಯಾಂಡ್ ಸಮ್ ಆಗಿ ಕಾಣಿಸಿಕೊಂಡಿದ್ದ ಆಯುಶ್ ಸಿಂಪಲ್ ಆಗಿರುವ ಕೆಂಪು ಬಣ್ಣದ ಚಪ್ಪಲಿ ಹಾಕಿದ್ದರು. ಆದ್ರೆ, ಈ ಚಪ್ಪಲಿಯ ಬೆಲೆ ಕೇಳಿ ಒಂದು ಕ್ಷಣ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

ಸಲ್ಮಾನ್ ಖಾನ್ ಈಸ್ ಬ್ಯಾಕ್: ಬಾಕ್ಸ್ ಆಫೀಸ್ ನಲ್ಲಿ 'ಟೈಗರ್' ಹವಾ

Salman Khan's brother in law Aayush Sharma chappals cost

ಹೌದು, ಆಯುಶ್ ತೊಟ್ಟಿದ್ದ ಈ ಚಪ್ಪಲಿಯ ಬೆಲೆ ಸುಮಾರು 24 ಸಾವಿರ ರೂಪಾಯಿ ಆಗಿದ್ದು, ಈ ಬೆಲೆಯಲ್ಲಿ ದುಬೈಯಿಂದ ರಿಟರ್ನ್ ಬರಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಅಂದ್ಹಾಗೆ, ಆಯುಶ್ ಶರ್ಮಾ, ಸಲ್ಮಾನ್ ಖಾನ್ ಅವರ ಸಹೋದರಿಯ ಅರ್ಪಿತಾ ಖಾನ್ ಅವರ ಪತಿ. 2014ರಲ್ಲಿ ಇವರಿಬ್ಬರ ವಿವಾಹವಾಗಿತ್ತು.

ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್

English summary
Salman Khan's brother-in-law Aayush Sharma steps out wearing chappals as expensive as a return ticket to Dubai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X