ಸಲ್ಮಾನ್ ಮತ್ತು ಸುದೀಪ್ ಜೋಡಿಯ 'ದಬಾಂಗ್ 3' ಚಿತ್ರಕ್ಕೆ ಮುಹೂರ್ತ
ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ 'ದಬಾಂಗ್ 3' ಸಿನಿಮಾದ ಮುಹೂರ್ತ ಇಂದು ನೆರವೇರಿದೆ. ಮುಹೂರ್ತ ಕಾರ್ಯಕ್ರಮದಲ್ಲಿಯೇ ತಮ್ಮ ಮೊದಲ ಫೋಟೋವನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ.
ಸಿನಿಮಾದ ಪೂಜಾ ಕಾರ್ಯಕ್ರಮ ಇಂದು ನಡೆದಿದ್ದು, ಮೊದಲ ದೃಶ್ಯದ ಚಿತ್ರೀಕರಣ ಆಗಿದೆ. ತಮ್ಮ ಶಾರ್ಟ್ ಹಿಂದೆ ಕಾಲರ್ ಗೆ ಕನ್ನಡಕ ಸಿಕ್ಕಿಸಿಕೊಂಡು ಸಲ್ಮಾನ್ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಸಿನಿಮಾದ ಶುಭಾರಂಭದ ವಿಷಯವನ್ನು ತಿಳಿಸಿದ್ದಾರೆ.
'ದಬಾಂಗ್' ಸರಣಿಯ ಮೂರು ಸಿನಿಮಾವನ್ನು ಬೇರೆ ಬೇರೆ ನಿರ್ದೇಶಕರು ನಿಭಾಯಿಸಿದ್ದಾರೆ. ಈ ಬಾರಿ ಆ ಜವಾಬ್ದಾರಿ ಪ್ರಭುದೇವ ಮೇಲೆ ಬಂದಿದೆ. 'ವಾಟೆಂಡ್' ಚಿತ್ರದ ನಂತರ ಮತ್ತೆ ಸಲ್ಮಾನ್ ಖಾನ್ ಗೆ ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚುಲ್ ಬುಲ್ ಪಾಂಡೆಯಾಗಿ ಸಿನಿಮಾದಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಕನ್ನಡದ ಹೆಮ್ಮೆಯ ನಟ ಸುದೀಪ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಮತ್ತೆ ಬಾಲಿವುಡ್ ನಲ್ಲಿ ಕಿಚ್ಚ ತಮ್ಮ ಖದರ್ ತೋರಿಸಲಿದ್ದಾರೆ.
'ದಬಾಂಗ್' ಸೀರಿಸ್ ನ ಮೂರನೇ ಅವತರಣಿಕೆ ಇದಾಗಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಹಳೆಯ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿದೆ. ಹಾಗಾಗಿ ಈ ಸಿನಿಮಾದ ಕ್ರೇಜ್ ಜಾಸ್ತಿ ಇದೆ.


Click it and Unblock the Notifications











