'ಟ್ಯೂಬ್‌ಲೈಟ್‌'ಗಿಂತ ಕಡೆಯಾದ 'ಭಾಯ್': ಈದ್ ಸಂಭ್ರಮದಲ್ಲಿ ಬಂದ ಸಲ್ಲು ಚಿತ್ರಗಳ ಫಸ್ಟ್ ಡೇ ಕಲೆಕ್ಷನ್ ವಿವರ ಇಲ್ಲಿದೆ

ಬಾಲಿವುಡ್‌ನಲ್ಲಿ ಈದ್ ಅಂದ್ರೆ ಸಲ್ಮಾನ್ ಖಾನ್ ಸಿನಿಮಾಗಳು ಅನ್ನುವ ಮಾತಿದೆ. ಈದ್ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಸಲ್ಲು ಚಿತ್ರಗಳು ಬಾಕ್ಸಾಫೀಸ್‌ ಶೇಕ್ ಮಾಡಿವೆ. ಆದರೆ ಈ ವರ್ಷ ಬಂದಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಯಾಕೋ ತಿಣುಕಾಡುತ್ತಿದೆ. ಫ್ಯಾಮಿಲಿ ಎಂಟರ್‌ಟೈನರ್ ಜೊತೆ ಸಲ್ಲು ಹಬ್ಬದ ಸಂಭ್ರಮ ಹೆಚ್ಚಿಸಲು ಬಂದ್ರು ಪ್ರಯೋಜನವಾಗಿಲ್ಲ. ಅದ್ಯಾಕೋ ಭಾಯ್ಜಾನ್ ಹವಾ ನಡೀತ್ತಿಲ್ಲ.

2009ರಲ್ಲಿ 'ವಾಟೆಂಡ್‌' ಸಿನಿಮಾ ಈದ್ ಸಂಭ್ರಮದಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಲ್ಲಿಂದ ಮುಂದೆ ಪ್ರತಿವರ್ಷ ಹಬ್ಬಕ್ಕೆ ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡಲು ಸಲ್ಮಾನ್ ಖಾನ್ ಆರಂಭಿಸಿದ್ದರು. ಅದರಲ್ಲಿ ಬಹುತೇಕ ಸಕ್ಸಸ್ ಕಂಡಿದ್ದಾರೆ. ಈ ವರ್ಷವೂ ಅದೇ ಲೆಕ್ಕಾಚಾರದಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ರಿಲೀಸ್ ಮಾಡಿದ್ದಾರೆ. ವಿಶ್ವದಾದ್ಯಂತ 5700ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಆದರೆ ದೊಡ್ಡ ಓಪನಿಂಗ್ ಮಾತ್ರ ಸಿಕ್ಕಿಲ್ಲ. ಶನಿವಾರ ಮತ್ತು ಭಾನುವಾರ ಮ್ಯಾಜಿಕ್ ನಡೆಯುತ್ತಾ ಕಾದು ನೋಡಬೇಕು.

Salman Khans Eid Movies Day 1 collection report: Kisi Ka Bhai Kisi Ki Jaan crossed Rs 15 crore

ಮೊದಲ ದಿನ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಅಂದಾಜು 15.81 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ. ಸಲ್ಮಾನ್‌ ಖಾನ್ ಕ್ರೇಜ್‌ಗೆ ಇದು ಬಹಳ ಕಮ್ಮಿ. 6 ವರ್ಷಗಳ ಹಿಂದೆ ಬಂದಿದ್ದ 'ಟ್ಯೂಬ್‌ಲೈಟ್‌' ಸಿನಿಮಾ ಕೂಡ 21.15 ಕೋಟಿ ರೂ. ಗಳಿಸಿತ್ತು. ಸಲ್ಲು ಈದ್ ರಿಲೀಸ್‌ ಸಿನಿಮಾಗಳಲ್ಲಿ ಮೊದಲ ದಿನ ಅತಿ ಕಮ್ಮಿ ಕಲೆಕ್ಷನ್ ಮಾಡಿದ್ದ ಸಿನಿಮಾ 'ಟ್ಯೂಬ್‌ಲೈಟ್‌' ಎನಿಸಿಕೊಂಡಿತ್ತು. ಆದರೆ ಅದಕ್ಕಿಂತಲೂ ಕಡಿಮೆ ಗಳಿಕೆ ಕಂಡು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ನಿರಾಸೆ ಮೂಡಿಸಿದೆ.

ತಮಿಳಿನ 'ವೀರಂ' ರೀಮೆಕ್ ಆಗಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಕ್ಕೆ ಫರ್ಹಾದ್ ಸಮ್ಜಿ ಆಕ್ಷನ್ ಕಟ್ ಹೇಳಿದ್ದಾರೆ. ಸ್ವತಃ ಸಲ್ಲು ಬಂಡವಾಳ ಹೂಡಿದ್ದು ಜೀ ಸಂಸ್ಥೆ ಚಿತ್ರವನ್ನು ವಿತರಣೆ ಮಾಡ್ತಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ. ಭರ್ಜರಿ ಆಕ್ಷನ್ ಜೊತೆಗೆ ಕಾಮಿಡಿ, ರೊಮ್ಯಾನ್ಸ್, ಎಮೋಷನ್ ಎಲ್ಲವನ್ನು ಸೇರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. 'ವೀರಂ' ಸಿನಿಮಾ ಕನ್ನಡ, ತೆಲುಗಿಗೆ ರೀಮೆಕ್ ಆಗಿ ಸೋಲುಂಡಿದ್ದವು. ಆದರೆ ಸಲ್ಲು ತಮ್ಮ ಸ್ಟೈಲ್ ಹಾಗೂ ಪರ್ಫಾರ್ಮನ್ಸ್‌ನಿಂದ ಚಿತ್ರವನ್ನು ಗೆಲ್ಲಿಸುವ ನಿರೀಕ್ಷೆ ಇತ್ತು.

ವಾರಕ್ಕೂ ಮೊದ್ಲೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾದರೂ ಒಳ್ಳೆ ರೆಸ್ಪಾನ್ಸ್ ಏನು ಸಿಕ್ಕಿರಲಿಲ್ಲ. ರೀಮೆಕ್ ಆಗಿದ್ದರಿಂದ ಸಿನಿಮಾ ಮೇಲೆ ಅಭಿಮಾನಿಗಳಿಗೂ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಈವರೆಗೆ ಈದ್ ಸಂಭ್ರಮದಲ್ಲಿ ಇಷ್ಟೊಂದು ಸ್ಕ್ರೀನ್‌ಗಳಲ್ಲಿ ಸಲ್ಲು ಸಿನಿಮಾ ರಿಲೀಸ್ ಆಗಿರಲಿಲ್ಲ. ಆದರೂ ಕೂಡ ಕಲೆಕ್ಷನ್ ಕಮ್ಮಿ ಆಗಿದೆ.

Salman Khans Eid Movies Day 1 collection report: Kisi Ka Bhai Kisi Ki Jaan crossed Rs 15 crore

ಸಲ್ಲು ಈದ್ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ವಿವರ ಇಲ್ಲಿದೆ

ಸಿನಿಮಾ ಮೊದಲ ದಿನದ ಗಳಿಕೆ(ಕೋಟಿ ರೂ.ಗಳಲ್ಲಿ)

ವಾಟೆಂಡ್(2009) 5.2

ದಬಾಂಗ್(2010) 14.50

ಬಾಡಿಗಾರ್ಡ್(2011) 21.60

ಏಕ್‌ ಥಾ ಟೈಗರ್(2012) 32.93

ಕಿಕ್(2014) 26.40

ಭಜರಂಗಿ ಭಾಯ್ಜಾನ್(2015) 27.25

ಸುಲ್ತಾನ್(2016) 36.54

ಟ್ಯೂಬ್‌ಲೈಟ್(2017) 21.15

ರೇಸ್‌- 3 (2018) 29.17

ಭಾರತ್(2019) 42.30

ಕಿಸಿ ಕಾ ಭಾಯ್ ಕಿಸಿ ಕಿ ಜಾನ್ 15.81

ಒಟ್ನಲ್ಲಿ ಬರ್ತಾ ಬರ್ತಾ ಬಾಕ್ಸಾಫೀಸ್‌ನಲ್ಲಿ ಸಲ್ಮಾನ್ ಖಾನ್ ಮ್ಯಾಜಿಕ್ ನಡೀತ್ತಿಲ್ಲ. ಇನ್ನಾದರೂ ಸಲ್ಲು ಎಚ್ಚೆತ್ತುಕೊಳ್ಳಬೇಕಿದೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಮನಗೆದ್ದರೂ ಲಾಜಿಕ್ ಇಲ್ಲದ ಸನ್ನಿವೇಶಗಳು, ಕಾಮಿಡಿ ಹೆಸರಿನಲ್ಲಿ ಮಾಡಿರುವ ಹುಚ್ಚಾಟ ವಾಕರಿಕೆ ತರಿಸುತ್ತಿದೆ. ವೀಕೆಂಡ್‌ ಕಲೆಕ್ಷನ್ ಮೇಲೆ ಸಿನಿಮಾ ಸೋಲು ಗೆಲುವು ನಿಂತಿದೆ. ಸಿನಿಮಾ ಚೆನ್ನಾಗಿದ್ದರೆ ಯಾವಾಗ ರಿಲೀಸ್ ಆದ್ರು ಜನ ನೋಡುತ್ತಾರೆ. ಈದ್ ಅಂದ ಮಾತ್ರಕ್ಕೆ ಸಲ್ಲು ಸಿನಿಮಾ ಗೆಲ್ಲಲ್ಲ.

More from Filmibeat

English summary
Salman Khan's Eid Released Movies Day 1 collection report: Kisi Ka Bhai Kisi Ki Jaan crossed Rs 15 crore. Saturday and Sunday very crucial for family entertainer movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X