»   » ಸಲ್ಮಾನ್ ನೆಚ್ಚಿನ ಸಹನಟ ಇಂದರ್ ಈಗ ನೆನಪು ಮಾತ್ರ

ಸಲ್ಮಾನ್ ನೆಚ್ಚಿನ ಸಹನಟ ಇಂದರ್ ಈಗ ನೆನಪು ಮಾತ್ರ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಂದರ್ ಕುಮಾರ್ ಸರಫ್ ಅವರು ಗುರುವಾರ ತಡರಾತ್ರಿ 2 ಗಂಟೆಗೆ ಅಂಧೇರಿಯ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಸುದ್ದಿ ಬಾಲಿವುಡ್ ಮಂದಿಗೆ ಆಘಾತ ತಂದಿದೆ.

ಮಾಸೂಮ್, ಕಿಲಾಡಿಯೋಂಕಾ ಕಿಲಾಡಿ, ಕಹಿ ಪ್ಯಾರ್ ನ ಹೋ ಜಾಯೆ, ಗಜ ಗಾಮಿನಿ ಅಲ್ಲದೆ ಸಲ್ಮಾನ್ ಖಾನ್ ಅವರ 'ವಾಂಟೆಂಡ್' ಚಿತ್ರದಲ್ಲಿ ನಟಿಸಿದ್ದರು. ಏಕ್ತಾ ಕಪೂರ್ ಅವರ ಬಹು ಜನಪ್ರಿಯ ಧಾರಾವಾಹಿ 'ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿ' ಯಲ್ಲಿ ಮಿಹಿರ್ ಪಾತ್ರಧಾರಿಯಾಗಿ ಇಂದರ್ ಜನಪ್ರಿಯತೆ ಗಳಿಸಿದ್ದರು.

ಪತ್ನಿ ಪಲ್ಲವಿ, ಓರ್ವ ಪುತ್ರಿಯನ್ನು ಅಗಲಿರುವ ಇಂದರ್ ಅವರಿಗೆ ಈ ಹಿಂದೆ ಹೃದಯ ಸಂಬಂಧಿ ಕಾಯಿಲೆ ಬಾಧಿಸಿರಲಿಲ್ಲ. ಆದರೆ, ವೈಯಕ್ತಿಕ ಬದುಕಿನ ಸಮಸ್ಯೆಗಳಿಂದ ಬೇಸತ್ತು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ಆದರೆ, ಈ ಬಗ್ಗೆ ಯಾರನ್ನು ದೂರುವಂತಿಲ್ಲ. ಪತ್ನಿ ಜತೆ ಜಗಳವಾಡಿಕೊಂಡು ಪರಸ್ಪರ ಬೇರೆ ಬೇರೆ ಫ್ಲಾಟ್ ಗಳಲ್ಲಿ ವಾಸಿಸತೊಡಗಿದ್ದರು. ಇಂದರ್ ಬಗ್ಗೆ ಇನ್ನೊಂದಿಷ್ಟು ಮಾಹಿತಿ ನಿಮ್ಮ ಮುಂದೆ..

ಇಂದರ್ ಅವರ ಸಿನಿಮಾ ರಂಗ ಪ್ರವೇಶ

1996ರಲ್ಲೇ ಬಾಲಿವುಡ್ ರಂಗ ಪ್ರವೇಶ ಮಾಡಿದ ಇಂದರ್ ಕುಮಾರ್ ಅವರ ಮೊದಲ ಚಿತ್ರ ಮಾಸೂಮ್. ಆಯೇಷಾ ಜುಲ್ಕಾ ಹಾಗೂ ಕುಮಾರ್ ನಟನೆಯ ಈ ಚಿತ್ರದ ಕೆಲ ಹಾಡುಗಳು ಹಿಟ್ ಆಗಿತ್ತು. ಆನಂತರ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಅಕ್ಷಯ್ ಕುಮಾರ್ -ರೇಖಾ ಅಭಿನಯದ ಖಿಲಾಡಿಯೋಂಕಾ ಖಿಲಾಡಿ, ಸಂಜಯ್ ದತ್, ಮನೀಶಾ ಕೊಯಿರಾಲಾ ಅವರ 'ಭಾಗಿ', ಸಲ್ಮಾನ್ ಅವರ ವಾಂಟೆಡ್ ಚಿತ್ರ ಹೆಚ್ಚು ಹೆಸರು ತಂದು ಕೊಟ್ಟಿತು.

ಸಲ್ಮಾನ್ ಆಪ್ತ ವರ್ಗ

ಸಲ್ಮಾನ್ ಖಾನ್ ಅವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಇಂದರ್ ಅವರು ಸಹಜವಾಗಿ ಸಲ್ಮಾನ್ ಅವರ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ವಾಂಟೆಂಡ್, ಕಹಿನ್ ಪ್ಯಾರ್ ನಾ ಹೋ ಜಾಯೇ, ತುಮ್ಕೋ ನಾ ಭೂಲ್ ಪಾಯೆಂಗೆ ಮುಂತಾದ ಚಿತ್ರಗಳಲ್ಲಿ ನಡೆಸಿದ್ದರು. ಸಲ್ಮಾನ್ ಅವರ ಕುಟುಂಬ ವರ್ಗಕ್ಕೂ ಇಂದರ್ ಚಿರಪರಿಚಿತ.

ಸಿರೀಯಲ್ ನಲ್ಲಿ ಇಂದರ್

ಏಕ್ತಾ ಕಪೂರ್ ನಿರ್ಮಾಣದ ಬಹು ಜನಪ್ರಿಯ ಮೆಗಾ ಧಾರಾವಾಹಿ ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಯಲ್ಲಿ ಅಮರ್ ಉಪಾಧ್ಯಾಯ್ ನಿರ್ವಹಿಸುತ್ತಿದ್ದ ಮಿಹಿತಿ ವಿರಾನಿ ಪಾತ್ರದಲ್ಲಿ ಕೆಲ ಕಾಲ ಇಂದರ್ ನಟಿಸಿದ್ದರು. ನಂತರ ಈ ಪಾತ್ರ ರೋನಿತ್ ರಾಯ್ ಪಾಲಾಯಿತು. ಇಂದರ್ ಕೂಡಾ ಸಿನಿಮಾಗಳ ಅವಕಾಶ ಪಡೆದುಕೊಳ್ಳತೊಡಗಿದರು.

2014ರಲ್ಲಿ ರೇಪ್ ಕೇಸ್

2014ರಲ್ಲಿ ರೇಪ್ ಕೇಸ್ ಎದುರಿಸಿದ್ದ ಇಂದರ್, ಪತ್ನಿ ಜತೆ ವೈಮನಸ್ಯ ಬೆಳೆಸಿಕೊಂಡು ದೂರಾದ ಬಳಿಕ ನಡೆದ ಘಟನೆ.
'ನಾನು ಕೌಟುಂಬಿಕ ಕಲಹದಿಂದ ಬೇಸತ್ತಿದ್ದೆ. ಹೀಗಾಗಿ ರೂಪದರ್ಶಿಯನ್ನು ಕರೆಸಿಕೊಂಡು ಕೆಲ ಕಾಲ ಇರಿಸಿಕೊಂಡಿದ್ದೆ. ಇಬ್ಬರ ನಡುವೆ ನಡೆದಿದ್ದು ಸಹಮತ ಸೆಕ್ಸ್. ನಾನೇನು ಆಕೆಗೆ ಮೋಸ ಮಾಡಿ ಲೈಂಗಿಕ ಸುಖ ಅನುಭವಿಸಿಲ್ಲ, ಆಕೆಯನ್ನು ಕೂಡಿ ಹಾಕಿಲ್ಲ ಎಂದು ಇಂದರ್ ಸ್ಪಷ್ಟನೆ ನೀಡಿದ್ದರು.

ಇಶಾ ಕೊಪ್ಪಿಕ್ಕರ್ ಗೆಳೆಯ

ಕರ್ನಾಟಕ ಮೂಲದ ಇಶಾ ಕೊಪ್ಪಿಕರ್ ಜತೆ 12 ವರ್ಷಗಳ ಕಾಲ ಗೆಳೆತನ ಹೊಂದಿದ್ದ ಇಂದರ್ ನಂತರ ಕಮಲ್ ಜೀತ್ ಕೌರ್ ಜತೆ ವಿವಾಹವಾಗಿದ್ದ, ಎರಡು ತಿಂಗಳಲ್ಲೇ ಮದುವೆ ಮುರಿದು ಬಿತ್ತು. ನಂತರ ಸೋನಾಲ್ ಕರಿಯಾಳನ್ನು 2003ರಲ್ಲಿ ಮದುವೆಯಾಗಿ, ನಂತರ ವಿಚ್ಛೇದನ ಪಡೆದಿದ್ದ. ಅಮೇಲೆ ಪಲ್ಲವಿಯನ್ನು ಮದುವೆಯಾಗಿ, ಆಕೆ ಜತೆಗೂ ಕಿತ್ತಾಡಿಕೊಂಡು ದೂರಾಗಿದ್ದ.

English summary
Bollywood actor Inder Kumar breathed his last today on July 28, 2017 due to a heart attack which occurred at 2 AM while he was asleep in his bungalow in Andheri, Mumbai. The actor was 45 years old. He was favorite co star of Super Star Salman Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada