ಸಲ್ಮಾನ್ ಅಭಿನಯದ 'ಈ' ಫ್ಲಾಪ್ ಸಿನಿಮಾ ಗರ್ಲ್ ಫ್ರೆಂಡ್ ಲೂಲಿಯಾಗೆ ತುಂಬಾ ಇಷ್ಟವಂತೆ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ವಿದೇಶಿ ಗರ್ಲ್ ಫ್ರೆಂಡ್ ಲುಲಿಯಾ ವಂತೂರ್ ನಡುವಿನ ಸಂಬಂಧದ ವಿಚಾರ ಗುಟ್ಟಾಗಿ ಉಳಿದಿಲ್ಲ. ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಅಂತಾನೆ ಗುರುತಿಸಿಕೊಂಡಿರುವ ಲೂಲಿಯಾ ಸದ್ಯ ಸಲ್ಲು ಜೊತೆಯೇ ಕಾಲ ಕಳೆಯುತ್ತಿದ್ದಾರೆ.

Recommended Video

ಸಾವಿಗೂ ಮುನ್ನ ರಿಷಿ ಕಪೂರ್ ಆಸ್ಪತ್ರೆಯಲ್ಲಿ ಕೇಳಿದ ಹಾಡು ಇದೇ | Rishi Kapoor | Filmibeat Kannada

ಹೌದು, ಲಾಕ್ ಡೌನ್ ನಲ್ಲಿ ಸಲ್ಮಾನ್ ಖಾನ್, ಅವರ ಪನ್ವೆಲ್ ಫಾರ್ಮ್ ಹೌಸ್ ನಲ್ಲಿಯೆ ಲಾಕ್ ಆಗಿದ್ದಾರೆ. ವಿಶೇಷ ಅಂದರೆ ಸಲ್ಲು ಜೊತೆ ಗರ್ಲ್ ಫ್ರೆಂಡ್ ಲೂಲಿಯಾ ವಂತೂರ್ ಕೂಡ ಫಾರ್ಮ್ ಹೌಸ್ ನಲ್ಲಿಯೆ ಇದ್ದಾರೆ. ಲಾಕ್ ಡೌನ್ ಸಮಯವನ್ನು ಇಬ್ಬರು ಒಟ್ಟಿಗೆ ಕಳೆಯುತ್ತಿದ್ದಾರೆ.

ಸದಾ ಸಲ್ಮಾನ್ ಖಾನ್ ಜೊತೆಯಲ್ಲಿಯೆ ಇರುವ ಲೂಲಿಯಾಗೆ, ಸಲ್ಲು ಅಭಿನಯದ ಫ್ಲಾನ್ ಸಿನಿಮಾ ಅಂದರೆ ತುಂಬಾ ಇಷ್ಟವಂತೆ. ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿರುವ ಲೂಲಿಯಾ ಸಲ್ಮಾನ್ ಅಭಿನಯದ ಸಿನಿಮಾಗಳ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ.

Salman Khans Flop Film His Girlfriend Lulia Vanturs One Of The Favourites

ಸಲ್ಮಾನ್ ಅಭಿನಯದ ನೆಚ್ಚಿನ ಸಿನಿಮಾಗಳ ಬಗ್ಗೆ ಮಾತನಾಡಿರುವ ಲೂಲಿಯಾ ಜಾನ್ ಇ ಮನ್ ಸಿನಿಮಾ ಅಂದರೆ ತುಂಬಾ ಇಷ್ಟವಂತೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಆದರು ಲೂಲಿಯಾಗೆ ನಚ್ಚಿನ ಸಿನಿಮಾಗಳಲ್ಲಿ ಒಂದಾಗಿದೆಯಂತೆ.

ಇನ್ನೂ ತೇರೆ ನಾಮ್, ಭಜರಂಗಿ ಭಾಯ್ ಜಾನ್ ಸಿನಿಮಾಗಳು ಸಹ ನೆಚ್ಚಿನ ಸಿನಿಮಾಗಳಂತೆ. ಸಲ್ಲು ಮತ್ತು ಲೂಲಿಯಾ ಬಗ್ಗೆ ಎಷ್ಟೇ ವದಂತಿಗಳು ಹರಿದಾಡುತ್ತಿದ್ದರೂ ಇಬ್ಬರು ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಆದರೆ ಲೂಲಿಯಾ, ನಟ ಸಲ್ಮಾನ್ ಖಾನ್ ಜೊತೆ ಸದಾ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ನಡುವೆ ಸಂಥಿಂಗ್ ಇದೆ ಎನ್ನುವುದು ಗೊತ್ತಾಗುತ್ತಿದೆ.

More from Filmibeat

English summary
Bollywood Actor Salman Khan's flop film his Girlfriend Iulia Vantur's one of the Favourites.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X