For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ 'ಕಭಿ ಈದ್ ಕಭಿ ದಿವಾಲಿ' ಚಿತ್ರದ ಟೈಟಲ್ ಬದಲಾವಣೆಗೆ ನಿರ್ಧರಿಸಿದ್ದೇಕೆ ಚಿತ್ರತಂಡ?

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಕಭಿ ಈದ್ ಕಭಿ ದಿವಾಲಿ ಸಿನಿಮಾದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗುತ್ತಿದ್ದ ಸಲ್ಮಾನ್ ಖಾನ್ ಹೊಸ ಚಿತ್ರ ಕಭಿ ಈದ್ ಕಭಿ ದಿವಾಲಿ ಟೈಟಲ್ ಬದಲಾವಣೆಗೆ ಸಿನಿಮಾತಂಡ ಪ್ಲಾನ್ ಮಾಡಿದೆಯಂತೆ.

  ಫರ್ಹಾದ್ ಸಂಜಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಸಹೋದರಿಯ ಪತಿ ಆಯುಷ್ ಶರ್ಮಾ ಮತ್ತು ಜಹೀರ್ ಇಕ್ಬಾಲ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಚಿತ್ರತಂಡ ಟೈಟಲ್ ಬದಲಾವಣೆ ಮಾಡಲು ಮುಂದಾಗಿರುವ ಕಾರಣ ವಿವಾದವನ್ನು ತಪ್ಪಿಸುವ ಸಲುವಾಗಿ. ಚಿತ್ರದ ಶೀರ್ಷಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡರೆ ಕಷ್ಟ ಎನ್ನುವ ಕಾರಣಕ್ಕೆ ಸೆಟ್ಟೇರುವ ಮೊದಲೆ ಬದಲಾಯಿಸಿದರೆ ಉತ್ತಮ ಈ ನಿರ್ಧರಕ್ಕೆ ಬಂದಿದೆ ಚಿತ್ರತಂಡ. ಸದ್ಯ ಹೊಸ ಶೀರ್ಷಿಕೆ ಹುಡುಕಾಟದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ ಎನ್ನಲಾಗುತ್ತಿದೆ.

  ಚಿತ್ರ ಬಿಡುಗಡೆ ಸಮಯದಲ್ಲಿ ವಿವಾದ ಆದರೆ ಎನ್ನುವ ಅನುಮಾನ ಚಿತ್ರತಂಡಕ್ಕೆ ಈಗಲೇ ಕಾಡಲು ಪ್ರಾರಂಭವಾಗಿದೆ. ಸಲ್ಮಾನ್ ಖಾನ್ ಮತ್ತು ನಿರ್ಮಾಪಕ ಸಾಜಿದ್ ಇಬ್ಬರು ಎಲ್ಲಾ ಧರ್ಮವನ್ನು ಗೌರವಿಸುತ್ತಾರೆ. ಕಭಿ ಈದ್ ಕಭಿ ದಿವಾಲಿಯನ್ನು ಯಾರಾದರೂ ಎರಡು ಹಬ್ಬಗಳನ್ನು ಗೇಲಿ ಮಾಡುವಂತೆ ತಪ್ಪಾಗಿ ತಿಳಿದುಕೊಂಡರೆ ಕಷ್ಟ ಎನ್ನುವ ಕಾರಣಕ್ಕೆ ಬದಲಾಯಿಸುವ ನಿರ್ಧಾರಕ್ಕೆ ಬಂದಿದೆ ಸಲ್ಮಾನ್ ಖಾನ್ ತಂಡ.

  ಸದ್ಯ ಹೊಸ ಶೀರ್ಷಿಕೆಯ ಹುಡುಕಾಟದಲ್ಲಿರುವ ಚಿತ್ರತಂಡ ಯಾವ ಹೆಸರನ್ನು ಇಡಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಸದ್ಯ ರಾಧೆ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇನ್ನು ಸದ್ಯದಲ್ಲೇ ಸಲ್ಲು ಟೈಗರ್ -3 ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ಅಂದರೆ ಸೆಪ್ಟಂಬರ್ ವೇಳೆಗೆ ಕಭಿ ಈದ್ ಕಭೀ ದಿವಾಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

  English summary
  Salman Khan starre Kabhi Eid Kabhi Diwali set for title change.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X