ಸಲ್ಮಾನ್ ಖಾನ್‌ರ ಲಕ್ಕಿ ಚೈನ್, ಪೂಜಾ ಹೆಗ್ಡೆ ಕೈಲಿ! ಏನಿದು ಕತೆ?

ಸಾವಿರಾರು ಕೋಟಿಯ ಒಡೆಯ ಸಲ್ಮಾನ್ ಖಾನ್ ಚಿನ್ನದ ಆಭರಣಗಳನ್ನು ತೊಡುವುದಿಲ್ಲ. ಕೈಗೊಂದು ಬೆಳ್ಳಿಯಂತೆ ಕಾಣುವ ಚೈನು ಬಿಟ್ಟರೆ ಇನ್ನಾವುದೇ ಆಭರಣ ಅವರ ಮೈಮೇಲಿಲ್ಲ.

ಸಲ್ಮಾನ್ ಖಾನ್‌ರ ಈ ಚೈನು ಅವರ ಲಕ್ಕಿ ಚೈನ್ ಅಂತೆ. ಈ ಚೈನ್ ಇಲ್ಲದೆ ಸಾರ್ವಜನಿಕವಾಗಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವುದೇ ಇಲ್ಲ. ಸಾಗರ ನೀಲಿ ಬಣ್ಣದ ಹವಳುಳ್ಳ ಈ ಚೈನು ಸಲ್ಮಾನ್ ಖಾನ್‌ರ ಗುರುತಾಗಿಬಿಟ್ಟಿದೆ. ಆದರೆ ಈಗ ಈ ಚೈನು ನಟಿ ಪೂಜಾ ಹೆಗ್ಡೆ ಕೈ ಸೇರಿದೆ!

ಹೌದು, ದಕ್ಷಿಣ ಭಾರತ ಚಿತ್ರರಂಗದಲ್ಲಿ ಧೂಮ್ ಮಚಾಯಿಸುತ್ತಿರುವ ಪೂಜಾ ಹೆಗ್ಡೆ, ಸಲ್ಮಾನ್ ಖಾನ್‌ರ ಲಕ್ಕಿ ಚೈನ್ ಅನ್ನು ಕೈಲಿ ಹಿಡಿದುಕೊಂಡು ಫೋಟೊಕ್ಕೆ ಫೋಸು ನೀಡಿದ್ದಾರೆ. ತಮ್ಮ ಲಕ್ಕಿ ಚೈನನ್ನು ಪೂಜಾಗೆ ಏಕೆ ನೀಡಿದರು ಸಲ್ಮಾನ್ ಎಂಬ ಗುಸು-ಗುಸು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Salman Khans Lucky Chain Is In Pooja Hegdes Hand

ಆದರೆ ಇದಕ್ಕೆ ಕಾರಣ ಬೇರೆಯದ್ದೇ ಇದೆ. ಸಲ್ಮಾನ್ ಖಾನ್‌ರ ಲಕ್ಕಿ ಚೈನ್ ಅನ್ನು ಪೂಜಾ ಹೆಗ್ಡೆ ಹಿಡಿದಿರುವುದು ಸಂದೇಶವೊಂದನ್ನು ತಲುಪಿಸಲು! ಹೌದು, ಪೂಜಾ ಹೆಗ್ಡೆ, ತಾನು ಸಲ್ಮಾನ್ ಖಾನ್‌ರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಲು ಹೀಗೆ ಸಲ್ಮಾನ್ ಖಾನ್‌ರ ಲಕ್ಕಿ ಚೈನ್ ಕೈಗೆ ತೊಟ್ಟುಕೊಂಡು ಫೋಟೊಕ್ಕೆ ಫೋಸು ನೀಡಿದ್ದಾರೆ.

ಸಲ್ಮಾನ್ ಖಾನ್‌ರ ಮುಂದಿನ ಸಿನಿಮಾ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಷ್ಟೆ ಪ್ರಾರಂಭವಾಗಿದೆ. ಅದೇ ಕಾರಣಕ್ಕೆ ಪೂಜಾ ಹೆಗ್ಡೆ ಸಲ್ಮಾನ್ ಖಾನ್‌ರ ಲಕ್ಕಿ ಚೈನ್ ಅನ್ನು ಕೈಲಿ ಹಿಡಿದು ಫೋಸ್ ನೀಡಿದ್ದಾರೆ.

ಅಸಲಿಗೆ ನಟಿ ಪೂಜಾ ಹೆಗ್ಡೆಗೆ ಒಳ್ಳೆಯ ದಿನಗಳು ನಡೆಯುತ್ತಿಲ್ಲವೆನಿಸುತ್ತದೆ. ಪೂಜಾ ನಟಿಸಿದ ಸತತ ನಾಲ್ಕು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್', 'ರಾಧೆ-ಶ್ಯಾಮ್', 'ಬೀಸ್ಟ್' ಹಾಗೂ 'ಆಚಾರ್ಯ' ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದರು. ಈ ಮೂರು ಸಿನಿಮಾಗಳು ಮಕಾಡೆ ಮಲಗಿವೆ. ಹಾಗಿದ್ದರೂ ಪೂಜಾಗೆ ಅವಕಾಶಗಳೇನೂ ಕಡಿಮೆ ಆಗಿಲ್ಲ.

'ಬೀಸ್ಟ್' ಸಿನಿಮಾ ಬಳಿಕ ಈಗ ಮತ್ತೊಮ್ಮೆ ವಿಜಯ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಸಿನಿಮಾ ಸಹ ಅವರ ಬಳಿ ಇದೆ. ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಈಗಾಗಲೇ ರಣ್ವೀರ್ ಸಿಂಗ್ ಜೊತೆ 'ಸರ್ಕಸ್' ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಇನ್ನು ನಟ ಸಲ್ಮಾನ್ ಖಾನ್ ಸಹ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಷ್ಟೆ, 'ಟೈಗರ್ 3' ಸಿನಿಮಾದಲ್ಲಿ ನಟಿಸಿ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಳಿಕ 'ಭಜರಂಗಿ ಭಾಯಿಜಾನ್ 2' ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ 'ಕಿಕ್ 2', 'ನೋ ಎಂಟ್ರಿ 2', 'ರಘು ರಾಜ ರಾಮ್', 'ಡಾನ್ಸಿಂಗ್ ಡ್ಯಾಡ್', 'ಇನ್‌ಶಾ ಅಲ್ಹಾ', 'ವಾಂಟೆಡ್ 2', 'ಕಿಕ್ 2', 'ಢಾಕ್, 'ದಬಂಗ್ 4' ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಈ ನಡುವೆ ತೆಲುಗಿನಲ್ಲಿ ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದಾರೆ ಚಿರಂಜೀವಿ.

More from Filmibeat

English summary
Salman Khan's lucky chain is in Pooja Hegde's hand. Salman and Pooja acting together in new movie called 'Kabhi Eid Kabhi Diwali'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X