'ಅಂತಿಮ್' ಫಸ್ಟ್ ಲುಕ್ ಬಿಡುಗಡೆ: ಸಲ್ಮಾನ್ ಖಾನ್ ಶರ್ಟ್ ಲೆಸ್‌ ಆಕ್ಷನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಣ ಮಾಡುತ್ತಿರುವ 'ಅಂತಿಮ್- ದಿ ಫೈನಲ್ ಟ್ರೂತ್' ಚಿತ್ರದ ಫಸ್ಟ್ ಲುಕ್ ಟೀಸರ್ ಅನಾವರಣಗೊಂಡಿದ್ದು ಚಿತ್ರಪ್ರೇಮಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ.

ಆಯುಷ್ ಶರ್ಮಾ ಈ ಚಿತ್ರದಲ್ಲಿ ಪ್ರಮುಖ ನಾಯಕನಾಗಿದ್ದು, ಸಲ್ಮಾನ್ ಖಾನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಯುಷ್ ಶರ್ಮಾ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ಟೀಸರ್‌ನಲ್ಲೇ ಸದ್ದು ಮಾಡ್ತಿದ್ದಾರೆ.

ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಿಖ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದು, ಲ್ಯಾಂಡ್ ಮಾಫಿಯಾ ವಿರುದ್ಧ ಫೈಟ್ ಮಾಡುವ ಅಧಿಕಾರಿಯಾಗಿ ಅಬ್ಬರಿಸಿದ್ದಾರೆ ಎನ್ನಲಾಗಿದೆ.

Salman Khans New Film Antim First look Released

ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟೀಸರ್ ಹಂಚಿಕೊಂಡಿದ್ದು, ''ಅಂತಿಮ್ ಆರಂಭವಾಗಿದೆ...'' ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್‌ಗೆ ಸರಿ ಸಮನಾಗಿ ಆಯುಷ್ ಶರ್ಮಾ ಸಹ ಮೇಕ್ ಓವರ್ ಮಾಡಿಕೊಂಡಿದ್ದು, ಸಖತ್ ಫಿಟ್ ಹಾಗೂ ಸಿಕ್ಸ್ ಪ್ಯಾಕ್‌ನಲ್ಲಿ ಮಿಂಚಿದ್ದಾರೆ.

ಈ ಚಿತ್ರವನ್ನು ಮಹೇಶ್ ಮಂಜ್ರೆಕರ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ, 'ಅಂತಿಮ್; ದಿ ಫೈನಲ್ ಟ್ರುತ್' ಸಿನಿಮಾ 2018ರಲ್ಲಿ ರಿಲೀಸ್ ಆದ ಮರಾಠಿಯ 'ಮುಲ್ಶಿ ಪ್ಯಾಟರ್ನ್' ಸಿನಿಮಾದ ರಿಮೇಕ್ ಆಗಿದೆ.
ಸದ್ಯ ಚಿತ್ರೀಕರಣ ಆರಂಭಿಸಿರುವ ಈ ಚಿತ್ರ 2021ರಲ್ಲಿ ತೆರೆಗೆ ಬರಲಿದೆ.

Recommended Video

S Narayan ಗೆ ಗೌರವ ಡಾಕ್ಟರೇಟ್ | Filmibeat Kannada

English summary
Salman khan and Aayush Sharma starrer Antim movie first look released. the movie directed buy mahesh v manjrekar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X