For Quick Alerts
  ALLOW NOTIFICATIONS  
  For Daily Alerts

  'ರಾಧೆ' ಟ್ರೇಲರ್: ಮತ್ತೆ ರೌಡಿ ಪೊಲೀಸ್ ಆದ ಸಲ್ಮಾನ್ ಖಾನ್

  |

  ನಟ ಸಲ್ಮಾನ್ ಖಾನ್ ಅಭಿನಯಿಸಿ ನೃತ್ಯ ನಿರ್ದೇಶಕ, ನಟ ಪ್ರಭುದೇವ ನಿರ್ದೇಶನ ಮಾಡಿರುವ 'ರಾಧೆ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

  ಮೂರು ನಿಮಿಷಕ್ಕೆ ಎರಡೇ ಸೆಕೆಂಡ್ ಕಡಿಮೆ ಇರುವ ಈ ಉದ್ದನೆಯ ಟ್ರೇಲರ್‌ನಲ್ಲಿ ಸಲ್ಮಾನ್ ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿರುವ ಹಾಸ್ಯ, ಆಕ್ಷನ್, ಹಾಡು, ನೃತ್ಯ, ವಿಲನ್, ರೊಮಾನ್ಸ್‌ ಎಲ್ಲದರ ಝಲಕ್ ಅನ್ನೂ ಈ ಉದ್ದನೆಯ ಟ್ರೇಲರ್‌ನಲ್ಲಿ ತೋರಲಾಗಿದೆ.

  'ರಾಧೆ' ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತೆ ರೌಡಿ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಗರವೊಂದರಲ್ಲಿ ವಿಲನ್‌ಗಳಿಂದಾಗಿ ಮಾದಕ ವಸ್ತು ಮಾರಾಟ ಅವ್ಯಾಹತವಾಗಿ ನಡೆದು, ಹಿಂಸಾಚಾರ ಮಿತಿ ಮೀರಿ ಹೋಗಿ ಪೊಲೀಸರಿಗೆ ತಲೆ ನೋವಾಗಿದ್ದಾಗ ರೌಡಿ ಪೊಲೀಸ್ 'ರಾಧೆ' ಅನ್ನು ಕರೆಸಲಾಗುತ್ತದೆ. ರೌಡಿಗಳಿಗೆ ರೌಡಿಯಾದ ಸಲ್ಮಾನ್ ವಿಲನ್‌ಗಳ ಮೂಳೆ ಮುರಿದು 'ಶಾಂತಿ'(?!) ನೆಲೆಸುವಂತೆ ಮಾಡುವ ಕತೆಯನ್ನು 'ರಾಧೆ' ಸಿನಿಮಾ ಹೊಂದಿದೆ ಎಂಬುದು ಟ್ರೇಲರ್‌ನಿಂದ ಸುಲಭವಾಗಿ ಊಹಿಸಬಹುದಾಗಿದೆ.

  ಈ ಹಿಂದೆ 'ಪೋಕಿರಿ' ಸಿನಿಮಾದ ರೀಮೇಕ್‌ 'ವಾಂಟೆಡ್‌'ನಲ್ಲಿಯೂ ಸಲ್ಮಾನ್ ಖಾನ್ ಇದೇ ರೀತಿಯ ಪಾತ್ರ ಮಾಡಿದ್ದರು. ಈಗ ಮತ್ತೆ ಅದೇ ರೌಡಿ ಪೊಲೀಸ್‌ ಮಾದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಆಕ್ಷನ್‌ ಜೊತೆಗೆ ಹಾಸ್ಯ ಮಾಡುವ ಜವಾಬ್ದಾರಿಯನ್ನೂ ಸಲ್ಮಾನ್ ಅವರೇ ವಹಿಸಿಕೊಂಡಿದ್ದಾರೆ ಎಂಬ ಅನುಮಾನ ಟ್ರೇಲರ್‌ನ ಕೆಲವು ದೃಶ್ಯಗಳಿಂದ ಬರುತ್ತದೆ.

  ಇನ್ನುಳಿದಂತೆ ಟ್ರೇಲರ್‌ನಲ್ಲಿ ಸಿನಿಮಾದ ವಿಲನ್ ರಣದೀಪ್ ಹೂಡಾ ಗಮನ ಸೆಳೆಯುತ್ತಾರೆ. ಜೊತೆಗೆ ನಟಿ ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್ ಅವರುಗಳು ತಮ್ಮ ಗ್ಲಾಮರ್‌ನ ಝಲಕ್ ಅನ್ನು ಟ್ರೇಲರ್‌ನಲ್ಲಿ ತೋರಿಸಿದ್ದಾರೆ. ಆಕ್ಷನ್‌ ದೃಶ್ಯಗಳು ಹಾಗೂ ಕೆಲವು ಪಂಚಿಂಗ್‌ ಡೈಲಾಗ್‌ಗಳು ಸಹ ಟ್ರೇಲರ್‌ನಲ್ಲಿವೆ.

  ಫಸ್ಟ್ ಟೈಂ ನಾಯಕಿ ತುಟಿಗೆ ಕಿಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸಲ್ಮಾನ್‌ಖಾನ್

  ಸಿನಿಮಾದ ನಿರ್ಮಾಣವನ್ನು ಸಲ್ಮಾನ್ ಖಾನ್, ಸೋಹೆಲ್ ಖಾನ್, ಅತುಲ್ ಅಗ್ನಿಹೋತ್ರಿ, ನಿಖಿಲ್ ನಮಿತ್ ಮಾಡಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಪ್ರಭು ದೇವಾ. ಸಿನಿಮಾವು ಮೇ 13 ರಂದು ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ.

  English summary
  Salman Khan's Radhe; Your most wanted Bhai's trailer released today. Movie will release on May 13.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X