»   » ಬೆಲ್ಜಿಯಂನಲ್ಲಿ 'ಟ್ಯೂಬ್ ಲೈಟ್' ಚಿತ್ರದ ನಾಯಕ ಶಾರುಖ್ ಖಾನ್ ಅಂತೆ!

ಬೆಲ್ಜಿಯಂನಲ್ಲಿ 'ಟ್ಯೂಬ್ ಲೈಟ್' ಚಿತ್ರದ ನಾಯಕ ಶಾರುಖ್ ಖಾನ್ ಅಂತೆ!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಳೆದ ಹಲವು ತಿಂಗಳುಗಳಿಂದ ಕುತೂಹಲ ಮೂಡಿಸಿದ್ದ ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಕಳೆದ ವಾರವಷ್ಟೇ ಬಿಡುಗಡೆ ಆಗಿದ್ದು, ಭಾರತ ಸಿನಿ ಪ್ರಿಯರ ನಿರೀಕ್ಷೆ ಮಟ್ಟವನ್ನು ತಲುಪುವಲ್ಲಿ ಸೋತಿದೆ. ಅಲ್ಲದೇ ಬಾಕ್ಸ್ ಆಫೀಸ್ ಗಳಿಕೆಯಲ್ಲು ಚಿತ್ರ ಹಿಂದೆಬಿದ್ದಿದೆ. ಚಿತ್ರದ ಬಗೆಗಿನ ಈಗಿನ ಹೊಸ ವಿಷಯ ಏನಂದ್ರೆ ಬೆಲ್ಜಿಯಂನಲ್ಲಿ ಚಿತ್ರದ ನಾಯಕ ಶಾರುಖ್ ಖಾನ್ ಎಂದು ಚಿತ್ರ ಪ್ರದರ್ಶನಕ್ಕೆ ಮುಂದಾಗಿರುವುದು.

  ಮೊದಲ ವಾರಂತ್ಯದಲ್ಲಿ 'ಟ್ಯೂಬ್ ಲೈಟ್' ಮಾಡಿದ ಕಲೆಕ್ಷನ್ ಎಷ್ಟು?

  ಹೌದು, 'ಟ್ಯೂಬ್‌ ಲೈಟ್' ಚಿತ್ರದ ಉತ್ತಮ ಮಾರುಕಟ್ಟೆಗಾಗಿ ಮತ್ತು ಹೆಚ್ಚು ಜನ ಚಿತ್ರ ನೋಡಲು ಬರಲಿ ಎಂಬ ಕಾರಣಕ್ಕಾಗಿ ಬೆಲ್ಜಿಯಂ ನಲ್ಲಿನ 'Brussels' ಎಂಬ ಥಿಯೇಟರ್ ನವರು ಒಂದು ಸೂಪರ್ ಐಡಿಯಾ ಮಾಡಿದ್ದಾರೆ. ಚಿತ್ರ ಶಾರುಖ್ ಖಾನ್ ಅವರದ್ದು ಎಂದು ಮಾಹಿತಿ ನೀಡಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಚಿತ್ರದ 'Cast' ಸೆಕ್ಷನ್ ನಲ್ಲಿ ಶಾರುಖ್ ಖಾನ್ ಎಂದು ಮಾಹಿತಿ ನೀಡಿದ್ದಾರೆ. ಆದರೆ ಈ ಚಿತ್ರದ ನಾಯಕ ಸಲ್ಮಾನ್ ಖಾನ್ ಆಗಿದ್ದು, ಶಾರುಖ್ ಖಾನ್ ಕೇವಲ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  Salman Khan’s ‘Tubelight’ marketed as Shah Rukh Khan’s film in Brussels

  ಆದರೆ ಒಂದಂತು ನಿಜ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಹ 'ಟ್ಯೂಬ್ ಲೈಟ್' ಚಿತ್ರದ ಬಾಕ್ಸ್ ಆಫೀಸ್ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದು. 'ಟ್ಯೂಬ್ ಲೈಟ್' ಚಿತ್ರ ಇತ್ತ ಗಟ್ಟಿಯಾದ ಕಥೆಯಿಂದಲೂ ಕೂಡಿಲ್ಲದಿರುವುದು ಮತ್ತು ಸಲ್ಮಾನ್ ಖಾನ್ ಅಭಿನಯವು ಸಹ ಸ್ವಲ್ಪ ಸಪ್ಪೆಯಾಗಿದ್ದು ಪ್ರೇಕ್ಷಕರ ನಿರೀಕ್ಷೆಗೆ ನಿರಾಸೆ ಉಂಟುಮಾಡಿದೆ.

  'ಟ್ಯೂಬ್‌ ಲೈಟ್' ಚಿತ್ರಕ್ಕೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ. ಚೀನಾ ಮೂಲದ ನಟಿ Zhu Zhu ಮತ್ತು ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ರವರು ನಟಿಸಿದ್ದಾರೆ.

  English summary
  Salman Khan starrer Tubelight had very few footfalls in India and the overseas market had little or no footfalls at all. A theatre in the capital city of Belgium, Brussels has come up with a unique marketing idea to garner footfalls by claiming that the film is a Shahrukh Khan starrer.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more