For Quick Alerts
  ALLOW NOTIFICATIONS  
  For Daily Alerts

  ಆಟದಲ್ಲಿ ನಮ್ಮನ್ನು ಯಾವಾಗಲೂ ಸೋಲಿಸುತ್ತಾರೆ ಸುದೀಪ್: ಸಲ್ಮಾನ್ ಖಾನ್

  |

  ಸಲ್ಮಾನ್ ಖಾನ್ ಹಾಗೂ ಸುದೀಪ್ ನಡುವಿನ ಗೆಳೆತನದ ಬಗ್ಗೆ ವಿಶೇಷ ಟಿಪ್ಪಣಿಯ ಅಗತ್ಯವಿಲ್ಲ. ದಶಕಗಳ ಬಾಂಧವ್ಯ ಅವರದ್ದು. ಸುದೀಪ್ ಅಂತೂ ಸಲ್ಮಾನ್ ಅನ್ನು ಸಹೋದರ ಎಂದೇ ಸಂಭೋಧಿಸುತ್ತಾರೆ.

  ಇದೀಗ ನಟ ಸುದೀಪ್, ತಮ್ಮ ಹೊಸ ಸಿನಿಮಾ 'ವಿಕ್ರಾಂತ್ ರೋಣ' ಅನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದು, ಸಹೋದರನ ಸಾಹಸಕ್ಕೆ ಸಲ್ಮಾನ್ ಖಾನ್ ಜೊತೆಯಾಗಿ ನಿಂತಿದ್ದಾರೆ.

  'ವಿಕ್ರಾಂತ್‌ ರೋಣ'ನ ಹೆಗಲ ಮೇಲೆ ಸಲ್ಮಾನ್ ಖಾನ್ ಕೈ: ಮುಂಬೈನಲ್ಲಿ ತಾರಾ ಮೇಳ'ವಿಕ್ರಾಂತ್‌ ರೋಣ'ನ ಹೆಗಲ ಮೇಲೆ ಸಲ್ಮಾನ್ ಖಾನ್ ಕೈ: ಮುಂಬೈನಲ್ಲಿ ತಾರಾ ಮೇಳ

  ನಿನ್ನೆ ಮುಂಬೈನಲ್ಲಿ 'ವಿಕ್ರಾಂತ್ ರೋಣ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಜುಲೈ 25) ನಡೆದಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಲ್ಮಾನ್ ಖಾನ್ ಆಗಮಿಸಿದ್ದರು. ಜೀವ ಬೆದರಿಕೆ ಇದ್ದರೂ ಬಹಳ ದಿನಗಳ ಬಳಿಕ ಬಹಿರಂಗ ಸಮಾರಂಭದಲ್ಲಿ ಪಾಲ್ಗೊಂಡ ಸಲ್ಮಾನ್ ಖಾನ್, ಸುದೀಪ್ ಬಗ್ಗೆ ಒಳ್ಳೆಯ ಮಾತುಗಳನ್ನಾಡುವ ಜೊತೆಗೆ 'ಆಟದಲ್ಲಿ, ಸುದೀಪ್ ನಮ್ಮನ್ನು ಯಾವಾಗಲೂ ಸೋಲಿಸುತ್ತಾರೆ' ಎಂದು ಆರೋಪ ಸಹ ಮಾಡಿದರು.

  ಸುದೀಪ್‌ ಜೊತೆಗಿನ ಹಳೆಯ ನಂಟನ್ನು ಮೆಲುಕು ಹಾಕಿದ ನಟ ಸುಲ್ಮಾನ್ ಖಾನ್, ''ನಮ್ಮಿಬ್ಬರನ್ನು ಹಳೆಯ ಬಂಧ. ನಾನು ಬಿಗ್‌ಬಾಸ್ ನಿರೂಪಣೆ ಮಾಡುತ್ತೇನೆ, ಸುದೀಪ್ ಸಹ ಬಿಗ್‌ಬಾಸ್ ನಿರೂಪಣೆ ಮಾಡುತ್ತಾರೆ. ಅವರು 'ಹುಚ್ಚ' ಮಾಡಿದ್ದರು ನಾನು 'ತೇರೆ ನಾಮ್' ಮಾಡಿದೆ. ಸಿಸಿಎಲ್‌ನಲ್ಲಿ ಅವರು ಆಡುತ್ತಾರೆ. ನಾನು ಸಿಸಿಎಲ್ ನ ಒಂದು ತಂಡದ ಮಾಲೀಕ'' ಎಂದರು.

  ನಮ್ಮನ್ನು ಬಹಳ ಬಾರಿ ಸೋಲಿಸಿದ್ದಾರೆ ಸುದೀಪ್: ಸಲ್ಮಾನ್

  ನಮ್ಮನ್ನು ಬಹಳ ಬಾರಿ ಸೋಲಿಸಿದ್ದಾರೆ ಸುದೀಪ್: ಸಲ್ಮಾನ್

  ಮುಂದುವರೆದು, ''ಸಿಸಿಎಲ್ ಕ್ರಿಕೆಟ್ ಪಂದ್ಯಗಳನ್ನು ಆಡಬೇಕಾದರೆ ಸುದೀಪ್ ಬಹಳ ಸ್ಪರ್ಧಾತ್ಮಕವಾಗಿ ಆಡುತ್ತಾರೆ. ನಮ್ಮ ತಂಡದವರು ಸುಮ್ಮನೆ ಕೂಲ್ ಆಗಿ ತಮಾಷೆಗೆ ಆಡುತ್ತಿರುತ್ತಾರೆ. ಪ್ರತಿ ಬಾರಿಯೂ ಸುದೀಪ್ ತಂಡ ನಮ್ಮ ತಂಡವನ್ನು ಸೋಲಿಸುತ್ತದೆ'' ಎಂದಿದ್ದಾರೆ. ಅದಕ್ಕೆ ನಿರೂಪಕ ಸಹ, ''ಸುದೀಪ್ ಅದ್ಭುತ ಕ್ರಿಕೆಟಿಗ'' ಎನ್ನುತ್ತಾರೆ. ವೇದಿಕೆ ಮೇಲೆಯೇ ಇದ್ದ ರಿತೇಶ್ ದೇಶ್‌ಮುಖ್ ಸಹ ಇದಕ್ಕೆ ಹೌದೆಂದು ಮಾತೆಂದು ಸೇರಿಸಿದ್ದಾರೆ.

  'ದಬಾಂಗ್ 3' ನಲ್ಲಿ ನನ್ನನ್ನು ಸೋಲಿಸಿದರು ಸಲ್ಮಾನ್ ಖಾನ್: ಸುದೀಪ್

  'ದಬಾಂಗ್ 3' ನಲ್ಲಿ ನನ್ನನ್ನು ಸೋಲಿಸಿದರು ಸಲ್ಮಾನ್ ಖಾನ್: ಸುದೀಪ್

  ಸಲ್ಮಾನ್ ಖಾನ್ ಮಾತಿಗೆ ಪ್ರತಿಕ್ರಿಯೆ ನೀಡಿದ ಸುದೀಪ್, ''ನಾವು ಇವರ ತಂಡವನ್ನು ಸೋಲಿಸುತ್ತೇವೆ, ಅದೇ ಕಾರಣಕ್ಕೆ ಸಲ್ಮಾನ್ ನನ್ನನ್ನು ತಮ್ಮ 'ದಬಂಗ್ 3' ಸಿನಿಮಾದಲ್ಲಿ ವಿಲನ್‌ ಆಗಿ ಹಾಕಿಕೊಂಡು ನನ್ನನ್ನು ಚೆನ್ನಾಗಿ ಹೊಡೆದು ಸೋಲಿಸಿದರು'' ಎಂದಿದ್ದಾರೆ. ಇದಕ್ಕೆ ಸಲ್ಮಾನ್ ಸಹಿತ ವೇದಿಕೆ ಮೇಲಿದ್ದವರೆಲ್ಲಾ ನಕ್ಕು ಸುದೀಪ್‌ರ ಹಾಸ್ಯಪ್ರಜ್ಞೆ ಮೆಚ್ಚಿಕೊಂಡರು. ನಂತರ ಮತ್ತೆ ಮಾತು ಮುಂದುವರೆಸಿದ ಸಲ್ಮಾನ್, ''ಹೌದು ಇವರು ದಬಂಗ್‌ನಲ್ಲಿ ಇದ್ದರು, ಇವರೊಬ್ಬ ಅದ್ಭುತ ನಟ, ನಿಜಕ್ಕೂ ಅತ್ಯದ್ಭುತ ನಟ'' ಎಂದಿದ್ದಾರೆ.

  ಬಹಳ ಸ್ಪರ್ಧಾತ್ಮಕವಾಗಿ ಆಡುತ್ತಾರೆ ಸುದೀಪ್

  ಬಹಳ ಸ್ಪರ್ಧಾತ್ಮಕವಾಗಿ ಆಡುತ್ತಾರೆ ಸುದೀಪ್

  ಸುದೀಪ್, ಸಿಸಿಎಲ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಾರೆ. ಉತ್ತಮ ಕ್ರಿಕೆಟಿಗರಾಗಿರುವ ಸುದೀಪ್, ಆಟವನ್ನು ಬಹಳ ಗಂಭೀರತೆಯಿಂದ ಸ್ಪರ್ಧಾತ್ಮಕವಾಗಿ ಆಡುತ್ತಾರೆ. ಬಾಲಿವುಡ್‌ ತಂಡದಲ್ಲಿ ಸಲ್ಮಾನ್ ಖಾನ್‌ರ ಸಹೋದರ ಸೋಹೆಲ್ ಖಾನ್, ನಟ ರಿತೇಶ್ ದೇಶ್‌ಮುಖ್ ಸೇರಿದಂತೆ ಇನ್ನೂ ಹಲವು ನಟರು ಆಡುತ್ತಾರೆ. ಆದರೆ ಹಲವು ಬಾರಿ ಕರ್ನಾಟಕ ತಂಡವು ಬಾಲಿವುಡ್ ತಂಡವನ್ನು ಸೋಲಿಸಿದೆ. ಕೆಲವು ಬಾರಿಯಂತೂ ಹೀನಾಯವಾಗಿ ಸೋಲಿಸಿದೆ. ಬಾಲಿವುಡ್‌ನ ತಂಡದ ಮಾಲೀಕ ಸಲ್ಮಾನ್ ಖಾನ್ ಅವರೇ ಆಗಿದ್ದಾರೆ.

  ಸಲ್ಮಾನ್ ಖಾನ್ ಜೊತೆ ನಟಿಸಿರುವ ಸುದೀಪ್

  ಸಲ್ಮಾನ್ ಖಾನ್ ಜೊತೆ ನಟಿಸಿರುವ ಸುದೀಪ್

  ಇನ್ನು ಸುದೀಪ್, ಸಲ್ಮಾನ್ ಬಹಳ ಹಳೆಯ ಗೆಳೆಯರು. ಈ ಹಿಂದೆಯೂ ಹಲವು ಬಾರಿ ಈ ವಿಷಯವಾಗಿ ಸಲ್ಮಾನ್ ಖಾನ್ ಮಾತನಾಡಿದ್ದಾರೆ. 2019ರಲ್ಲಿ ಬಿಡುಗಡೆ ಆದ 'ದಬಂಗ್ 3' ಸಿನಿಮಾದಲ್ಲಿ ಸುದೀಪ್ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾವನ್ನು ಪ್ರಭುದೇವಾ ನಿರ್ದೇಶನ ಮಾಡಿದ್ದರು. ಮುಂಬೈಗೆ ಹೋದಾಗ ಹಲವು ಬಾರಿ ಸಲ್ಮಾನ್ ಅನ್ನು ಸುದೀಪ್ ಭೇಟಿ ಮಾಡಿದ್ದಿದೆ. ಸಲ್ಮಾನ್ ಖಾನ್, ಬಿಎಂಡಬ್ಲು ಕಾರೊಂದನ್ನು ಸುದೀಪ್‌ಗೆ ಉಡುಗೊರೆಯಾಗಿ ನೀಡಿದ್ದರು. ಸಲ್ಮಾನ್ ಖಾನ್‌ಗಾಗಿ ಸಿನಿಮಾ ಒಂದನ್ನು ನಿರ್ದೇಶಿಸುವ ಆಸೆಯನ್ನು ಸಹ ಸುದೀಪ್ ಹೊಂದಿದ್ದಾರೆ. ಸಲ್ಮಾನ್‌ರ ತಂದೆ ಸಲೀಂ ಅವರಿಗೆ ಕತೆ ಹೇಳಲಿದ್ದಾರಂತೆ ಸುದೀಪ್.

  Recommended Video

  Neetha Ashok | ಸಲ್ಮಾನ್ ಖಾನ್‌ನ ಕಂಡು ನೀತಾ ಅಶೋಕ್‌ ನರ್ವಸ್ | Vikrant Rona | Kiccha Sudeep *Press Meet
  English summary
  Salman Khan said Sudeep team always beat our team in Cricket. He said Sudeep plays cricket very competitively.
  Tuesday, July 26, 2022, 12:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X