Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉತ್ತರ ದಕ್ಷಿಣ ಒಂದಾದರೆ ₹3000 ರಿಂದ 4000 ಕೋಟಿ ಗಳಿಕೆ ಖಚಿತ ಎಂದ ಸಲ್ಮಾನ್ ಖಾನ್!
ಉತ್ತರ ಸಿನಿಮಾರಂಗ ಅಂದರೆ ಬಾಲಿವುಡ್ ಅನ್ನೋ ಕಲ್ಪನೆ ಇನ್ನೂ ಇದೆ. ಹಾಗೇ ದಕ್ಷಿಣ ಚಿತ್ರರಂಗ ಅಂದರೂ ಅದು ಕೇವಲ ತೆಲುಗು, ತಮಿಳು ಸಿನಿಮಾಗಳು ಅಂತ ಭಾವಿಸಿದವರಿದ್ದರು. ಆದರೆ, 'ಬಾಹುಬಲಿ' ಹಾಗೂ 'ಕೆಜಿಎಫ್ 2' ಸಿನಿಮಾ ಬಳಿಕ ದಕ್ಷಿಣದ ಮಟ್ಟಿಗೆ ಆ ದಾಟಿ ಕಂಡಿತಾ ಬದಲಾಗಿದೆ.
ಆದರೆ, ಬಾಲಿವುಡ್ ತಾರೆಯರು ದಕ್ಷಿಣ ಸಿನಿಮಾದಲ್ಲಿ ನಟಿಸುತ್ತಿದ್ದರು. ಅಂತೆಯೇ ದಕ್ಷಿಣದ ತಾರೆಯರು ಅಪರೂಪಕ್ಕೆ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇಷ್ಟು ಬಿಟ್ಟರೆ ವ್ಯವಹಾರಿಕವಾಗಿ ಬಾಲಿವುಡ್ ಮಂದಿ ದಕ್ಷಿಣದ ಜೊತೆ ಸೇರಿಕೊಂಡ ಉದಾಹರಣೆ ತೀರಾ ವಿರಳ.
ಈಗ ಕಾಲ ಬದಲಾಗಿದೆ. ಬಾಲಿವುಡ್ ತಾರೆಯರು ದಕ್ಷಿಣ ಭಾರತದ ನಟರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ದಿಗ್ಗಜರು ಕೂಡ ಸೌತ್ ಸ್ಟಾರ್ಗಳ ಜೊತೆ ಮಿಂಗಲ್ ಆಗುತ್ತಿದ್ದಾರೆ. ಸಲ್ಮಾನ್ ಖಾನ್ ಅಂತಹ ಸೂಪರ್ಸ್ಟಾರ್ ದಕ್ಷಿಣದ ಸಿನಿಮಾದಲ್ಲಿ ನಟಿಸಿ ಹೋಗಿದ್ದಾರೆ. ಅದೇ ನಟ ಈಗ ಉತ್ತರ ಹಾಗೂ ದಕ್ಷಿಣ ಚಿತ್ರರಂಗ ಎರಡೂ ಒಂದಾಗಬೇಕು ಎಂದು ಹೇಳಿದ್ದಾರೆ.
ಉತ್ತರ ಹಾಗೂ ದಕ್ಷಿಣ ಚಿತ್ರರಂಗ ಒಂದಾಗಬೇಕು. ಎರಡೂ ಚಿತ್ರರಂಗದ ತಾರೆಯರು ಒಂದು ಸಿನಿಮಾದಲ್ಲಿ ಕಾಣಿಸಿಕೊಂಡರೆ, ಬಾಕ್ಸಾಫೀಸ್ನಲ್ಲಿ ಕೋಟಿಗಟ್ಟಲೆ ಹಣ ಗಳಿಸಬಹುದು ಎಂದು ಸಲ್ಮಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.
"ಬಾಲಿವುಡ್ ಸ್ಟಾರ್ಗಳು ಹಾಲಿವುಡ್ಗೆ ಹೋಗಲು ಇಷ್ಟ ಪಡುತ್ತಾರೆ. ಆದರೆ, ನಾನು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಬೇಕು. ಎಲ್ಲರೂ ಒಟ್ಟಾಗೆ ಸೇರಿ ಕೆಲಸ ಮಾಡಿದರೆ ಸಿನಿಮಾದ ಬ್ಯುಸಿನೆಸ್ ಎಷ್ಟಾಗಬಹುದು ಎಂದು ಊಹಿಸಿ. ಒಂದು ಸಿನಿಮಾ ಅಂದಾಜು 300-400 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ. ಆದರೆ, ಉತ್ತರ ಹಾಗೂ ದಕ್ಷಿಣ ಭಾರತದ ಚಿತ್ರರಂಗ ಒಂದಾದರೆ ಬಾಕ್ಸಾಫೀಸ್ನಲ್ಲಿ 3000-4000 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು" ಎಂದು ಸಲ್ಮಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಸಲ್ಮಾನ್ ಖಾನ್ ಸದ್ಯ ತೆಲುಗಿನ 'ಗಾಡ್ಫಾದರ್' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ 'ಲೂಸಿಫರ್' ಸಿನಿಮಾದ ರಿಮೇಕ್. ಮೆಗಾಸ್ಟಾರ್ ಚಿರಂಜೀವಿ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.