ಸಲ್ಮಾನ್‌ ಖಾನ್‌ಗೆ 3 ಬಾರಿ ಕಚ್ಚಿದ ಹಾವು: ಸಂತಸ ವ್ಯಕ್ತಪಡಿಸಿದ ಸಲ್ಲು!

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿರುವ ಸುದ್ದಿ ಜಗಜ್ಜಾಹೀರಾಗಿದೆ. ಸದ್ಯ ಎಲ್ಲೆಲ್ಲೂ ಸಲ್ಮಾನ್‌ ಖಾನ್‌ ಅವರ ಆರೋಗ್ಯದ ಬಗ್ಗೆಯೇ ಚರ್ಚೆ ಆಗುತ್ತಿದೆ. ಅದರಲ್ಲೂ ಇಂದು ಸಲ್ಮಾನ್‌ ಖಾನ್‌ ಅವರ ಹುಟ್ಟುಹಬ್ಬ ಹಾಗಾಗಿ ಸಲ್ಲುಗೆ ಏನಾಗಿದೆ ಎನ್ನುವ ಬಗ್ಗೆ ಅವರ ಅಭಿಮಾನಿಗಳಿಗೆ ಚಿಂತೆ ಆಗಿತ್ತು. ಸದ್ಯ ಸಲ್ಮಾನ್‌ ಖಾನ್‌ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.

ಹಾವು ಕಚ್ಚಿದೆ ಎಂದರೆ ಅದು ಸಣ್ಣ ವಿಚಾರ ಅಲ್ಲ. ಎಷ್ಟೋ ಮಂದಿ ಹಾವು ಕಚ್ಚಿದಾಗ ಪ್ರಾಣ ಬಿಟ್ಟ ಉದಾಹರಣೆಗಳು ಇವೆ. ಆದರೆ ಸಲ್ಲುಗೆ ಯಾವುದೇ ದೊಡ್ಡ ಅಪಾಯ ಆಗಿಲ್ಲ. ಚಿಕಿತ್ಸೆ ಪಡೆದು ಸಲ್ಲು ಗುಣಮುಖರಾಗಿದ್ದಾರೆ. ಇನ್ನು ಸಲ್ಲು ಈ ಘಟನೆ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ಸಂತಸದಿಂದಲೇ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

ಅದರಲ್ಲೂ ಇಂದು (ಡಿಸೆಂಬರ್ 27) ನಟ ಸಲ್ಮಾನ್‌ ಖಾನ್‌ ಹುಟ್ಟುಹಬ್ಬ. ಹಾಗಾಗಿ ಸಲ್ಲು ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿ ಆಗುತ್ತಾರೋ ಇಲ್ಲವೋ ಎನ್ನುವ ಆತಂಕ ಮನೆ ಮಾಡಿತ್ತು. ಸದ್ಯ ಸಲ್ಮಾನ್‌ ಖಾನ್‌ ಆಸ್ಪತ್ರೆಯಿಂದ ಹೊರ ಬಂದಿದ್ದು, ಹುಟ್ಟು ಹಬ್ಬದ ಸಂಭ್ರಮಕ್ಕೆ ಅಣಿ ಆಗಿದ್ದಾರೆ.

ನನಗೆ 3 ಬಾರಿ ಕಚ್ಚಿತು ಆ ಹಾವು: ನಟ ಸಲ್ಮಾನ್‌ ಖಾನ್!

ಆಸ್ಪತ್ರೆಯಿಂದ ಬಂದ ಬಳಿಕ ಸಲ್ಮಾನ್‌ ಖಾನ್‌ ಹಾವು ಕಚ್ಚಿದ ಘಟನೆ ಬಗ್ಗೆ ಮಾತನಾಡಿದ್ದಾರೆ. "ಆ ಘಟನೆ ಏನು ದೊಡ್ಡದಾಗಿಲ್ಲ. ಪನ್ವೇಲ್‌ನಲ್ಲಿ ಇರುವ ನಮ್ಮ ತೋಟದ ಮನೆ ಕಾಡಿನಲ್ಲಿ ಇರುವ ಹಾಗೆ ಇದೆ. ಅಲ್ಲಿನ ಒಂದು ರೂಮಿನ ಒಳಗೆ ಹಾವು ಬಂದಿದೆ. ಆಗ ಮಕ್ಕಳೆಲ್ಲ ಕಿರುಚಾಡಿದರು. ಹಾಗಾಗಿ ನಾನು ಅಲ್ಲಿಗೆ ಹೋಗಿ ನೋಡಿದೆ. ಅಲ್ಲಿ ಹಾವಿತ್ತು. ನಾನು ಒಂದು ಕೋಲನ್ನು ಕೇಳಿದೆ. ಹಾವನ್ನು ಕೋಲಿನಲ್ಲಿ ಎತ್ತಿಕೊಂಡು ಪ್ರೀತಿಯಿಂದಲೇ ಹೊರಗೆ ಬಂದೆ. ಆಗ ಆ ಹಾವು ತಾನಾಗಿಯೇ ಕೋಲಿಗೆ ಸುತ್ತಿಕೊಂಡು ಮೇಲೆ ಹಾರಲು ಯತ್ನಿಸುತ್ತಿತ್ತು. ಅದು ನನ್ನ ಕೈ ಹತ್ತಿರ ಬಂದಿತ್ತು. ಹಾಗಾಗಿ ಕೋಲು ಬಿಸಾಡಿ, ಮತ್ತೊಂದು ಕೈಹಿಂದ ಹಾವನ್ನು ಹಿಡಿದು ಕೊಂಡು, ಕಾಡಿನಲ್ಲಿ ಬಿಡಲು ಮುಂದಾದೆ. ಆಗ ಆ ಹಾವು ನನಗೆ 3 ಬಾರಿ ಕಚ್ಚಿತು. ಅದು ವಿಷ ತುಂಬಿದ ಹಾವು ಆದ ಕಾರಣ 6 ಗಂಟೆಗಳ ಕಾಲ ನಾನು ಆಸ್ಪತ್ರೆಯಲ್ಲಿ ಇರಬೇಕಾಯಿತು".

ಹಾವು ನನ್ನ ಸ್ನೇಹಿತ ಎಂದ ಸಲ್ಮಾನ್‌ ಖಾನ್!

ಇನ್ನು ಹಾವಿನ ಬಗ್ಗೆ ಮಾತನಾಡಿದ ಸಲ್ಮಾನ್‌ ಖಾನ್‌ "ಈ ವಿಚಾರ ತಿಳಿದು ನನ್ನ ಸಹೋದರಿ ಕೊಂಚ ಗಾಬರಿಗೊಂಡಿದ್ದಳು. ಆದರೆ ನಾನು ಮತ್ತು ಹಾವು ಇಬ್ಬರು ಸ್ನೇಹಿತರಾಗಿದ್ದೇವು, ಬಹುಶಃ ಅದು ಹೆದರಿದ್ದ ಕಾರಣಕ್ಕೆ ನನ್ನನ್ನು ಕಚ್ಚಿದೆ. ಇನ್ನು ನನ್ನ ತಂದೆ ಕರೆ ಮಾಡಿ ಹಾವು ಬದುಕಿದೆಯಾ ಎಂದು ಕೇಳಿದರು. ಆಗ ನಾನು ಅಪ್ಪ ಸ್ನೇಕ್ ಮತ್ತು ಟೈಗರ್‌(ಸಲ್ಮಾನ್‌ ಖಾನ್) ಇಬ್ಬರು ಬದುಕಿದ್ದಾರೆ. ನಾವು ಹಾವಿಗೆ ಯಾವುದೇ ತೊಂದರೆ ಮಾಡಿಲ್ಲ. ಅತ್ಯಂತ ಪ್ರೀತಿಯಿಂದ ಕಳಿಸಿದ್ದೇವೆ" ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಸಲ್ಲುಗೆ ಮೊದಲು ವಿಶ್‌ ಮಾಡಿದ್ದು ಅಮ್ಮ!

ಸಲ್ಮಾನ್‌ ಖಾನ್‌ ಹುಟ್ಟು ಹಬ್ಬಕ್ಕೆ ಮೊದಲು ಶುಭ ಕೋರಿದ್ದು ಅವರ ತಾಯಿ. ಹಾಗಾಗಿ ಮೊದಲು ಅಮ್ಮನನ್ನು ಭೇಟಿ ಮಾಡೋದಾಗಿ ಸಲ್ಲು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಲ್ಮಾನ್‌ ಖಾನ್‌ಗೆ ಈ ಬಾರಿ ಹುಟ್ಟು ಹಬ್ಬ ತುಂಬಾನೇ ಸ್ಪೆಷಲ್. ಆಸ್ಪತ್ರೆಯಿಂದ ಮನೆಗೆ ಬಂದ ಸಲ್ಲು ಅವರನ್ನು ಸ್ವಾಗತಿಸಲು ಇಡೀ ಕುಟುಂಬ ಸೇರಿದೆ. ಕುಟುಂಬಸ್ಥರ ಜೊತೆಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಬಗ್ಗೆಯೂ ಸಲ್ಮಾನ್‌ ಖಾನ್‌ ಸಂತಸ ವ್ಯಕ್ತ ಪಡಿಸಿದ್ದಾರೆ.

ರಾಜಮೌಳಿ ಜೊತೆಗೆ ಸಿನಿಮಾ ಮಾಡುತ್ತಿಲ್ಲ ಸಲ್ಮಾನ್‌ ಖಾನ್!

ರಾಜಮೌಳಿ ಜೊತೆಗೆ ಸಿನಿಮಾ ಮಾಡುತ್ತಿಲ್ಲ ಸಲ್ಮಾನ್‌ ಖಾನ್!

ಇನ್ನು ಇತ್ತೀಚೆಗೆ ನಟ ಸಲ್ಮಾನ್ ಅವರಿಗೆ ನಿರ್ದೇಶಕ ರಾಜಮೌಳಿ ಆ್ಯಕ್ಷನ್‌ ಕಟ್‌ ಹೇಳುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆಯೂ ನಟ ಸಲ್ಮಾನ್‌ ಖಾನ್‌ ಮಾತನಾಡಿದ್ದಾರೆ. ರಾಜಮೌಳಿ ಉತ್ತಮ ನಿರ್ದೇಶಕ. ಆದರೆ ನಾನು ಸದ್ಯಕ್ಕೆ ಅವರ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಮುಂದೆ ಅದು ಸಾಧ್ಯ ಆದರೆ ಸಂತೋಷ ಎಂದಿದ್ದಾರೆ.

More from Filmibeat

English summary
Salman Khan Says Snake Bite Him Thrice, But They Parted As Friends : I Clicked A Photo With It
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X