ರಹಸ್ಯವಾಗಿ ಮದುವೆಯಾದ ಸಲ್ಮಾನ್‌ ಖಾನ್: ವೈರಲ್ ಆಯ್ತು ಈ ಫೋಟೊ!

ಸದ್ಯಕ್ಕೆ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಅಂದರೆ ಸಲ್ಮಾನ್ ಖಾನ್ ಮದುವೆ ಸುದ್ದಿ. ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅಂತಲೇ ಸಲ್ಮಾನ್‌ ಖಾನ್ ಅವರನ್ನು ಕರೆಯಲಾಗುತ್ತದೆ. ಹಾಗಾಗಿ ಸಲ್ಲು ಜೊತೆಗೆ ಯಾರ ಹೆಸರು ಕೇಳಿ ಬಂದರೂ ಕೂಡ, ಎಲ್ಲರ ಚಿತ್ತ ಸಲ್ಲು ಲವ್‌ ಕಹಾನಿಯತ್ತ ಸಾಗುತ್ತದೆ. ಈಗ ಮತ್ತೆ ಸಲ್ಮಾನ್ ಖಾನ್ ಮದುವೆ ಸುದ್ದಿ ಹರಿದಾಡುತ್ತಿದೆ.

ನಟ ಸಲ್ಮಾನ್ ಖಾನ್ ಜೊತೆಗೆ ಇಲ್ಲಿ ತನಕ ಹಲವು ನಟಿಯರ ಹೆಸರು ಕೇಳಿ ಬಂದಿದೆ. ಆದರೆ ಅದೆಲ್ಲವೂ ಕೇವಲ ಗಾಸಿಪ್ ಆಗಿ ಉಳಿದು ಬಿಟ್ಟಿವೆ. ಈಗ ಸಲ್ಮಾನ್ ಖಾನ್ ಅವರ ಲವ್ ಅಥವಾ, ಗರ್ಲ್ ಫ್ರೆಂಡ್‌ ಬಗ್ಗೆ ಅಲ್ಲ. ಬದಲಿಗೆ ಸಲ್ಮಾನ್ ಖಾನ್ ಮದುವೆ ಬಗ್ಗೆನೇ ಬಾಲಿವುಡ್‌ನಲ್ಲಿ ಗುಸು, ಗುಸು ಹಬ್ಬಿದೆ.

ಹೌದು ನಟ ಸಲ್ಮಾನ್ ಖಾನ್‌ಗೆ ಮದುವೆ ಆಗಿದೆಯಂತೆ. ಬಾಲಿವುಡ್‌ನ ಹೆಸರಾಂತ ನಟಿಯ ಜೊತೆಗೆ ಸಲ್ಲು ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ. ಇದು ಕೇವಲ ಗಾಳಿ ಸುದ್ದಿ ಅಲ್ಲ. ಬದಲಿಗೆ ಆ ನಟಿಯ ಜೊತೆಗೆ ಸಲ್ಮಾನ್ ಖಾನ್ ಫೋಟೋ ಕೂಡ ರಿವೀಲ್ ಆಗಿದೆ. ಆ ನಟಿ ಯಾರು, ಸಲ್ಮಾನ್ ಖಾನ್ ಸೀಕ್ರೆಟ್ ಆಗಿ ಮದುವೆ ಆಗಿದ್ದಾರಾ ಎನ್ನುವ ಬಗ್ಗೆ ಮುಂದೆ ಓದಿ....

ಸೋನಾಕ್ಷಿ ಸಿನ್ಹ ಜೊತೆಗೆ ಸಲ್ಮಾನ್ ಖಾನ್ ಮದುವೆ!

ಸೋನಾಕ್ಷಿ ಸಿನ್ಹ ಜೊತೆಗೆ ಸಲ್ಮಾನ್ ಖಾನ್ ಮದುವೆ!

ನಟ ಸಲ್ಮಾನ್ ಖಾನ್ ಮದುವೆ ಸುದ್ದಿ ಇದ್ದಕ್ಕಿದ್ದ ಹಾಗೆ ಸದ್ದು ಮಾಡುತ್ತಿದೆ. ಅದರಲ್ಲೂ ಸಲ್ಮಾನ್ ಖಾನ್ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹ ಜೊತೆಗೆ ಸಲ್ಲು ಮದುವೆ ಆಗಿದ್ದಾರಂತೆ. ಇದಕ್ಕೆ ಪೂರಕವಾಗಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಮದುವೆ ಕಾಸ್ಟ್ಯೂಂನಲ್ಲಿ ಇರುವ ಫೋಟೊ ಒಂದು ಹರಿದಾಡುತ್ತಿದೆ. ಈ ಫೋಟೋದಲ್ಲಿ ಸಲ್ಲು, ಸೋನಾಕ್ಷಿಗೆ ಉಂಗುರ ತೊಡಿಸುತ್ತಿದ್ದಾರೆ.

ಮದುವೆ ಮಂಟಪದಲ್ಲಿ ಸೋನಾಕ್ಷಿ, ಸಲ್ಮಾನ್!

ಮದುವೆ ಮಂಟಪದಲ್ಲಿ ಸೋನಾಕ್ಷಿ, ಸಲ್ಮಾನ್!

ಈ ಫೋಟೋ ನೋಡಿದಾಕ್ಷಣ ಇದು ಮದವೆ ಫೋಟೋ ರೀತಿಯಲ್ಲಿಯೇ ಇದೆ. ಇಬ್ಬರೂ ಮದುವೆ ಮಂಟಪದಲ್ಲಿ ನಿಂತು ಮದುಮಕ್ಕಳಂತೆ ಕಂಗೊಳಿಸಿದ್ದಾರೆ. ಸೋನಾಕ್ಷಿ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದರೆ, ಸಲ್ಮಾನ್ ಖಾನ್ ಸೂಟ್ ಧರಿಸಿ, ಸೋನಾಕ್ಷಿಗೆ ಉಂಗುರ ಹಾಕುತ್ತಿದ್ದಾರೆ. ನಟಿ ನಾಚುತ್ತಾ, ನಗುತ್ತಾ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆದ ಬಳಿಕ ಬಾಲಿವುಡ್‌ ಮಂದಿಗೆ ಅಚ್ಚರಿ ಆಗಿದೆ. ಅದ್ಯಾವಾಗ ಸಲ್ಲು, ಸೋನಾಕ್ಷಿ ಮದುವೆ ಆಯ್ತು ಅಂತ ಶಾಕ್ ಆಗಿದ್ದಾರೆ. ಆದರೆ ಈ ಫೊಟೋದ ಅಸಲಿ ಕಥೆಯೇ ಬೇರೆ ಇದೆ.

ಸಲ್ಮಾನ್ ಖಾನ್ ನಕಲಿ ಮದುವೆ ಫೋಟೊ!

ಸಲ್ಮಾನ್ ಖಾನ್ ನಕಲಿ ಮದುವೆ ಫೋಟೊ!

ಸಲ್ಮಾನ್ ಖಾನ್, ಸೋನಾಕ್ಷಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ನಿಜವಲ್ಲ. ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅವರ ಮದುವೆ ಫೋಟೋ ಫೇಕ್. ಬೇರೆ ಯಾರದ್ದೋ ಮದುವೆ ಫೋಟೊಗೆ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹ ಅವರ ಫೊಟೋವನ್ನು ಜೋಡಿಸಲಾಗಿದೆ. ಫೋಟೋ ಶಾಪ್ ಮೂಲಕ ಫೊಟೋವನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ. ಆದರೆ ಈ ಪೋಟೋ ನೋಡಿದರೆ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ನಿಜವಾಗಲೂ ಮದುವೆ ಆಗಿದ್ದಾರೆ ಅಂತ ಅನ್ನಿಸದೇ ಇರದು.

ಮತ್ತೇ ಸುಳ್ಳಾಯ್ತು ಸಲ್ಲು ಮದುವೆ ಸುದ್ದಿ!

ಮತ್ತೇ ಸುಳ್ಳಾಯ್ತು ಸಲ್ಲು ಮದುವೆ ಸುದ್ದಿ!

ನಟ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹ ಇಬ್ಬರು ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಬ್ಬರು ಕೂಡ ಸ್ನೇಹಿತರು. ಸೋನಾಕ್ಷಿ ಸಲ್ಮಾನ್ ಖಾನ್ ಚಿತ್ರದ ಮೂಲಕವೇ ಲಾಂಚ್ ಆಗಿದ್ದಾರೆ. ದಬಾಂಗ್ ಸಿನಿಮಾದ ಮೂಲಕ ಸೋನಾಕ್ಷಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ದಬಾಂಗ್ ಸರಣಿ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಜೋಡಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ. ಈ ಬಾರಿಯೂ ಸಲ್ಮಾನ್ ಖಾನ್ ಮದುವೆ ಸುದ್ದಿ ಸುಳ್ಳಾಗಿದೆ. ಆದರೆ ಅದ್ಯಾವಾಗ ಸಲ್ಮಾನ್ ಖಾನ್‌ಗೆ ಮದುವೆ ಭಾಗ್ಯ ಬರುತ್ತದೆಯೋ ಅಂತ ನೋಡ್ಬೇಕು.

More from Filmibeat

English summary
Salman Khan Secretly Got Married To Sonakshi Sinha, Wedding Picture Went Viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X