For Quick Alerts
  ALLOW NOTIFICATIONS  
  For Daily Alerts

  ಭಾರಿ ಮೊತ್ತಕ್ಕೆ ಸೇಲ್ ಆದ ಸಲ್ಮಾನ್ ಖಾನ್‌ ಹೊಸ ಸಿನಿಮಾ

  |

  ಸಲ್ಮಾನ್ ಖಾನ್ ಸಿನಿಮಾಕ್ಕೆ ನೂರು ಕೋಟಿ ಗಳಿಕೆ ಎಂಬುದು ಲೆಕ್ಕವೇ ಇಲ್ಲ. ಗಳಿಕೆಯಲ್ಲಿ ಸಲ್ಮಾನ್ ಖಾನ್ ಸಿನಿಮಾಗಳನ್ನು ಮೀರಿಸುವುದು ಬಹುಕಷ್ಟ.

  ಆದರೆ ಕೊರೊನಾ ಸಮಯದಲ್ಲಿ ಸ್ಟಾರ್ ನಟರ ಸಿನಿಮಾಗಳೇ ಒಟಿಟಿ ಮೂಲಕ ಬಿಡುಗಡೆಯಾಗಿ ಕಡಿಮೆ ಲಾಭಕ್ಕೆ ತೃಪ್ತಿ ಪಟ್ಟುಕೊಳ್ಳುತ್ತಿವೆ. ಆದರೆ ಸಲ್ಮಾನ್ ಖಾನ್‌ 'ಚಿತ್ರಮಂದಿರಗಳ ರಾಜ' ಎಂದೇ ಕರೆಸಿಕೊಳ್ಳುತ್ತಾರೆ. 'ಹಬ್ಬ ಬಂದಾಗ ಸಲ್ಮಾನ್ ಖಾನ್ ಸಿನಿಮಾ, ಸಲ್ಮಾನ್ ಸಿನಿಮಾ ಬಂದಾಗ ಹಬ್ಬ' ಎಂಬ ಮಾತು ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿದೆ, ಹಾಗಾಗಿ ಅವರು ಒಟಿಟಿ ಕಡೆಗೆ ಮುಖ ಮಾಡುವ ಮಾತೇ ಇಲ್ಲ.

  ಸಲ್ಮಾನ್ ಖಾನ್ ನಟಿಸಿರುವ 'ರಾಧೆ' ಸಿನಿಮಾ ಇದೀಗ ಬಿಡುಗಡೆಗೆ ತಯಾರಾಗಿದೆ. ಸಿನಿಮಾವು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಸಿನಿಮಾದ ವಿತರಣೆ ಹಕ್ಕು ಎಷ್ಟಕ್ಕೆ ಮಾರಾಟ ವಾಗಿದೆ ಎಂಬ ಸುದ್ದಿ ಬಾಲಿವುಡ್ಡಿಗರ ಹುಬ್ಬೇರುವಂತೆ ಮಾಡಿದೆ.

  ಝೀ ಸ್ಟುಡಿಯೋ ಜೊತೆ ಭಾರಿ ಮೊತ್ತದ ಒಪ್ಪಂದ

  ಝೀ ಸ್ಟುಡಿಯೋ ಜೊತೆ ಭಾರಿ ಮೊತ್ತದ ಒಪ್ಪಂದ

  ಝೀ ಸ್ಟುಡಿಯೋ ಜೊತೆಗೆ ಭಾರಿ ಮೊತ್ತದ ಒಪ್ಪಂದವನ್ನು ಸಲ್ಮಾನ್ ಖಾನ್ ಮಾಡಿಕೊಂಡಿದ್ದಾರೆ. 'ರಾಧೆ' ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಹಕ್ಕನ್ನು ಝೀ ಸ್ಟುಡಿಯೋಸ್‌ ಗೆ ಬರೋಬ್ಬರಿ 230 ಕೋಟಿ ರೂಪಾಯಿಗೆ ಮಾರಲಿದ್ದಾರಂತೆ ಸಲ್ಮಾನ್ ಖಾನ್!

  ಚಿತ್ರಮಂದಿದಲ್ಲಿ ಬಿಡುಗಡೆ ಆಗಲಿದೆ 'ರಾಧೆ'

  ಚಿತ್ರಮಂದಿದಲ್ಲಿ ಬಿಡುಗಡೆ ಆಗಲಿದೆ 'ರಾಧೆ'

  ಸಲ್ಮಾನ್ ಅಭಿಮಾನಿಗಳಿಗೆ ನೆಮ್ಮದಿ ಸುದ್ದಿಯೆಂದರೆ, ರಾಧೆ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ. ಝೀ ಸ್ಟುಡಿಯೋಸ್‌ ನವರು ಚಿತ್ರದ ಸ್ಯಾಟಲೈಟ್, ಡಿಜಿಟಲ್ ಹಕ್ಕು ಖರೀದಿಸುವ ಜೊತೆಗೆ ವಿತರಣೆ ಹಕ್ಕನ್ನು ಸಹ ಖರೀದಿಸಿದ್ದಾರೆ. ಹಾಗಾಗಿ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಎನ್ನಲಾಗುತ್ತಿದೆ.

  ಯಶ್‌ ರಾಜ್‌ ಫಿಲಮ್ಸ್‌ಗೆ ಮಾರಲು ಯೋಜಿಸಲಾಗಿತ್ತು

  ಯಶ್‌ ರಾಜ್‌ ಫಿಲಮ್ಸ್‌ಗೆ ಮಾರಲು ಯೋಜಿಸಲಾಗಿತ್ತು

  ಈ ಮೊದಲು ಸಿನಿಮಾದ ವಿತರಣೆ ಹಕ್ಕನ್ನು ಯಶ್ ರಾಜ್ ಫಿಲಮ್ಸ್‌ಗೆ ಮಾರಾಟ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಯಶ್‌ ರಾಜ್ ಫಿಲಮ್ಸ್‌, ಸಿನಿಮಾದ ವಿತರಣೆ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಕಾರಣ, ವಿತರಣೆ ಹಕ್ಕನ್ನು ಝೀ ಗೆ ಮಾರಾಟ ಮಾಡಲಾಗಿದೆ.

  ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ

  ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ

  ಸಲ್ಮಾನ್ ಖಾನ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಮೇಘಾ ಆಕಾಶ್ ಮತ್ತು ದಿಶಾ ಪಟಾನಿ ನಾಯಕಿಯರಾಗಿದ್ದಾರೆ. ಜೊತೆಗೆ ರಣದೀಪ್ ಹೂಡಾ, ಜಾಕಿ ಶ್ರಾಫ್ ಅವರುಗಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಪ್ರಭುದೇವಾ ನಟಿಸುತ್ತಿದ್ದಾರೆ.

  English summary
  Salman Khan selling his Radhe movie distribution rights to Zee Studios for very big amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X