ಆತ್ಮಹತ್ಯೆಗೆ ಯೋಚಿಸಿದ್ದರಂತೆ ಸಲ್ಮಾನ್ ಖಾನ್: ಯಾಕೆ ಗೊತ್ತಾ?
ಬಾಲಿವುಡ್ ನಟ ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ಸಲ್ಮಾನ್ ಖಾನ್‌ಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ದಶಕಗಳ ಕಾಲ ಸಲ್ಮಾನ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯ ಆಗಿದ್ದಾರೆ. ಇನ್ನು ಸಲ್ಲು ಭಾಯ್ ಸಾಮಾಜಿಕ ಜಾಲತಾಣದ ಮೂಲಕ ಸದಾ ಅಭಿಮಾನಿಗಳಿಗೆ ಕನೆಕ್ಟ್ ಆಗಿರುತ್ತಾರೆ. ಮೆಲ್ನೊಟಕ್ಕೆ ಸೂಪರ್ ಹೀರೋ ರೀತಿ ಕಾಣುವ ಸಲ್ಮಾನ್ ಖಾನ್‌ಗೆ ಒಂದು ಸಂಕಟ ಇತ್ತು.
ಸದಾ ಫಿಟ್ ಅಂಡ್ ಫೈನ್ ಆಗಿ ಕಾಣುವ ಸಲ್ಮಾನ್ ಖಾನ್ ಅವರು ಹಲವು ವರ್ಷ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಚಾರವನ್ನು ನಟ ಸಲ್ಮಾನ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು ಈ ಕಾಯಿಲೆಯಿಂದ ಬಹಳ ಬೇಸತ್ತು ಹೋಗಿದ್ದರಂತೆ.
ಸಲ್ಮಾನ್ ಖಾನ್ ಅವರು ತಮಗಿರುವ ಕಾಯಿಲೆಯಿಂದಾಗಿ ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ್ದರಂತೆ. ಈ ವಿಚಾರ ಕೇಳಿದ್ರೆ ಅಭಿಮಾನಿಗಳಿಗೆ ಶಾಕ್ ಆಗಬಹುದು. ಆದರೆ ಇದು ನಿಜ. ಈ ವಿಚಾರವನ್ನು ಸಲ್ಲು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್‌ಗೆ ಇದ್ದ ಖಾಯಿಲೆ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ಸಲ್ಮಾನ್‌ಗೆ ಇತ್ತು 'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ಕಾಯಿಲೆ!
ಸಲ್ಮಾನ್ ಖಾನ್ ಅವರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಾಯಿಲೆಯಿಂದ ಬಳಲುತ್ತಿದ್ದರು. ಹೌದು ಸಲ್ಮಾನ್ ಖಾನ್‌ಗೆ 'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ಎಂಬ ಕಾಯಿಲೆ ಇತ್ತಂತೆ. ಈ ಕಾಯಿಲೆ ಇಂದ ಅತಿಯಾದ ನೋವು ಉಂಟಾಗುತ್ತದೆ. ಇದು ಒಂದು ರೀತಿಯ ನರರೋಗ. ಈ ಕಾಯಿಲೆ ಬಂದರೆ ತಲೆ, ದವಡೆ ಮುಂತಾದ ಮುಖದ ಅನೇಕ ಭಾಗಗಳಲ್ಲಿ ಸಾಕಷ್ಟು ನೋವು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯಿಂದ ಸುಮಾರು 9 ರಿಂದ 10 ವರ್ಷಗಳ ಕಾಲ ಸಲ್ಮಾನ್ ಖಾನ್ ನೋವು ಅನುಭವಿಸಿದ್ದಾರಂತೆ.

ಈ ಕಾಯಿಲೆ ಭಯಾನಕ ಎನ್ನಲಾಗಿದೆ!
'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ರೋಗ ಮುಖದ ನರದಲ್ಲಿ ಕಂಡುಬರುತ್ತದೆ. ಮುಖದಲ್ಲಿ ಹಲವು ರೀತಿಯ ನರಗಳಿವೆ, ಟ್ರೈಜಿಮಿನಲ್ ಮುಖದ ಮುಖ್ಯ ನರಗಳಲ್ಲಿ ಒಂದಾಗಿದೆ. ಈ ನರದಲ್ಲಿ ನೋವು ಕಾಣಿಸಿಕೊಳ್ಳುತ್ತೆ. ಈ ಕಾಯಿಲೆ, ಮುಖದ ಮೇಲೆ ಭಯಾನಕ ಚುಚ್ಚುವಿಕೆಯ ಭಾವನೆ ಇರುತ್ತದೆ. ಈ ರೋಗವನ್ನು ನಿಭಾಯಿಸುವುದು ಕಷ್ಟಕರ. ಉಂಟಾಗುವ ನೋವು ಮತ್ತು ಚುಚ್ಚುವಿಕೆ ಕೆಲವು ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತದೆ. ಆ ಬಳಿಕ ಮಾಯವಾಗುತ್ತಾದೆ. ಹೀಗೆ ಪದೆ ಪದೇ ಬರುತ್ತದೆ. ಚಿಕಿತ್ಸೆ ಪಡೆಯಲು ಆಗಾಗ ವಿದೇಶಗಳಿಗೆ ಪ್ರವಾಸ ಮಾಡುತ್ತಲೇ ಇರುತ್ತಿದ್ದರು. ಈ ಕಾಯಿಲೆಯ ಚಿಕಿತ್ಸೆಗಾಗಿ ಅವರು ಅಮೇರಿಕಕ್ಕೆ ಹೋಗುತ್ತಿದ್ದರು. ಈಗ ಈ ಕಾಯಿಲೆಯಿಂದ ಸಲ್ಲು ಗುಣಮುಖ ಆಗಿದ್ದಾರೆ.

ಆತ್ಮ ಹತ್ಯೆ, ಕಾಯಿಲೆ ಬಗ್ಗೆ ಹೇಳಿಕೊಂಡಿದ್ದ ಸಲ್ಲು!
ಇನ್ನು ಸಲ್ಮಾನ್ ಖಾನ್ ಅವರು ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಮತ್ತು ಆತ್ಮ ಹತ್ಯೆ ಯೋಚನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಕಾಯಿಲೆ ಇರುವ ಬಗ್ಗೆ ಈ ಹಿಂದೆ ಹಲವು ಬಾರಿ ಮಾಹಿತಿ ನೀಡಿದ್ದರು. 2017ರಲ್ಲಿ 'ಟ್ಯೂಬ್ ಲೈಟ್' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸಲ್ಮಾನ್ 'ಟ್ರೈಜಿಮಿನಲ್ ನ್ಯೂರಾಲ್ಜಿಯಾ' ಎಂಬ ಅಪಾಯಕಾರಿ ಕಾಯಿಲೆ ಇರುವುದಾಗಿ ಹೇಳಿದರು. ಅಲ್ಲದೇ ಈ ಕಾಯಿಲೆಯ ನೋವು ತಾಳಲಾರದೇ ಆತ್ಮಹತ್ಯೆಗೆ ಯತ್ನ ಮಾಡಿದೆ ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದರು.

ಈಗ ಚರ್ಚೆ ಆಗ್ತಿದೆ ಸಲ್ಲು ಕಾಯಿಲೆ ವಿಚಾರ!
ನಟ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ಮಂದಿ ಸಲ್ಲುಗೆ ಜೈ ಎಂದಿದ್ದಾರೆ. 56ನೇ ವಯಸ್ಸಿನಲ್ಲಿ ಕೂಡ ಸಲ್ಮಾನ್ ಖಾನ್ ಅವರು ಇಷ್ಟು ಫಿಟ್ ಆಗಿ ಆರೋಗ್ಯಕರವಾಗಿ ಇದ್ದಾರೆ ಎನ್ನುವ ಕಮೆಂಟ್‌ಗಳು ಬಂದಿವೆ. ಹಾಗಾಗಿ ಅವರು ಒಂದು ಕಾಯಿಲೆಯಿಂದ ಬಳಲುತ್ತಿದ್ದರು ಎನ್ನುವ ವಿಚಾರ ಮುನ್ನಲೆಗೆ ಬಂದಿದೆ. ದುಬೈನಿಂದ ಸಲ್ಲು ಫೋಟೊ ಹಂಚಿಕೊಂಡಿದ್ದಾರೆ. 2020ರ ದುಬೈ ಎಕ್ಸ್‌ಪೋದಲ್ಲಿ ಸಲ್ಲು ಭಾಗಿ ಆಗುವ ಬಗ್ಗೆ ಫೋಟೊ ಹಂಚಿಕೊಂಡಿದ್ದಾರೆ.


Click it and Unblock the Notifications











