ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ಸಲ್ಮಾನ್ ಖಾನ್ ವಿಡಿಯೋ ವೈರಲ್
ಬಾಲಿವುಡ್ ನಟ ಸಲ್ಮಾನ್ ಖಾನ್ ಕೊರೊನಾ ಲಾಕ್ ಡೌನ್ ನಲ್ಲಿ ಕೃಷಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ನಾಲ್ಕು ತಿಂಗಳಿಂದ ಸಲ್ಮಾನ್ ತನ್ನ ಫಾರ್ಮ್ ಹೌಸ್ ನಲ್ಲಿ ನೆಲೆಸಿದ್ದು, ಅಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿಗೆ ರೈತರ ಬಗ್ಗೆ ಪೋಸ್ಟ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಸಲ್ಲು, ಈಗ ಉಳುಮೆ ಮಾಡಿ ನಾಟಿ ಮಾಡುತ್ತಿರುವ ಫೋಟೋ ಹಂಚಿಕೊಂಡು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
Recommended Video
ಮೊನ್ನೆ ಮೊನ್ನೆಯಷ್ಟೆ ಸಲ್ಮಾನ್ ಟ್ರ್ಯಾಕ್ಟರ್ ಹತ್ತಿ ಉಳುಮೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಮಳೆಯ ನಡುವೆಯೂ ಸಲ್ಮಾನ್ ಸಲ್ಮಾನ್ ಟ್ರ್ಯಾಕ್ಟರ್ ಹಿಡಿದು ಉಳುಮೆ ಮಾಡುತ್ತಿರುವ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಭತ್ತ ನಾಟಿ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ತಾವೆ ಹದಮಾಡಿದ ಗದ್ದೆಯಲ್ಲಿ ಸ್ನೇಹಿತರ ಜೊತೆ ಭತ್ತ ನಾಟಿ ಮಾಡುತ್ತಿದ್ದಾರೆ. ಪಕ್ಕಾ ರೈತನ ಹಾಗೆ ಕೃಷಿ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ವಿಶೇಷ ಅಂದರೆ ಸಲ್ಮಾನ್ ಜೊತೆ ಪ್ರೇಯಸಿ ಲುಲಿಯಾ ವಾಂಟೂರ್ ಸಹ ಭತ್ತದ ಗದ್ದೆಗೆ ಇಳಿದು ನಾಟಿ ಮಾಡುತ್ತಿದ್ದಾರೆ. ನಾಟಿ ಮುಗಿಯಿತು ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿಗೆ ಸಲ್ಮಾನ್ ಖಾನ್ ಫಾರ್ಮ್ ನಲ್ಲಿ ಸಸಿಹಿಡಿದು ಓಡಾಡುತ್ತಿರುವುದು, ರೈತರನ್ನು ಗೌರವಿಸಿ ಎಂದು ಪೋಸ್ಟ್ ಮಾಡುವುದನ್ನು ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಮಣ್ಣು ಎಸೆದುಕೊಂಡು ಪೋಸ್ ಕೊಟ್ಟ ಮಾತ್ರಕ್ಕೆ ರೈತನಾಗುವುದಿಲ್ಲ ಎಂದು ಟ್ರೋಲ್ ಮಾಡಿದ್ದರು. ಆದರೀಗ ಸಲ್ಮಾನ್ ಸ್ವತಹ ಕೃಷಿ ಮಾಡಿ ತೋರಿಸಿದ್ದಾರೆ.


Click it and Unblock the Notifications











