ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಕತ್ರಿನಾಗೆ ಸಲ್ಮಾನ್ ಪ್ರೀತಿಯ ವಿಶ್

ಬಾಲಿವುಡ್ ನ ಸುಂದರ ನಟಿ, ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಕತ್ರಿನಾ ಕೈಫ್ ಇತ್ತೀಚಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡದಿದ್ದರೂ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರದುಬಂದಿದೆ.

ಕತ್ರಿನಾ ಕೈಫ್ ಹುಟ್ಟುಹಬ್ಬಕ್ಕೆ ನಟ ಸಲ್ಮಾನ್ ಖಾನ್ ಮಾಡಿರುವ ವಿಶ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕತ್ರಿನಾ ಮತ್ತು ಸಲ್ಮಾನ್ ಖಾನ್ ಇಬ್ಬರೂ ಉತ್ತಮ ಸ್ನೇಹಿತರು ಎನ್ನುವುದು ಗೊತ್ತಿರುವ ವಿಚಾರ. ಗೆಳತಿ ಕತ್ರಿನಾ ಹುಟ್ಟುಹಬ್ಬಕ್ಕೆ ಸಲ್ಮಾನ್ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಸುಂದರ ಫೋಟೋ ಹಂಚಿಕೊಳ್ಳುವ ಮೂಲಕ ಸಲ್ಮಾನ್ ಪ್ರೀತಿಯ ವಿಶ್ ಮಾಡಿದ್ದಾರೆ. ಅದ್ಭುತವಾದ ಹುಟ್ಟುಹಬ್ಬ ನಿಮ್ಮದಾಲಿ ಎಂದು ಸಲ್ಮಾನ್ ಹೇಳಿದ್ದಾರೆ. ಸಲ್ಮಾನ್ ಖಾನ್ ಫೋಟೋೆಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Salman Khan shares romantic photo to wish Katrina Kaif on her birthday

ಇನ್ನು ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಸ್ನೇಹ ಸಂಬಂಧದ ಬಗ್ಗೆ ಹೇಳುವುದಾದರೆ, ಇಬ್ಬರು ಡೇಟಿಂಗ್ ಮಾಡುತ್ತಿದ್ದರು, ಪರಸ್ಪರ ಪ್ರೀತಿಯಲ್ಲಿದ್ದರು ಎನ್ನುವ ಮಾತು ಕಳೆದ ಕೆಲವು ವರ್ಷಗಳ ಹಿಂದೆ ಕೇಳಿಬರುತ್ತಿತ್ತು. ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಆಂತಾನೆ ಗುರುತಿಸಿಕೊಳ್ಳುತ್ತಿದ್ದ ಕತ್ರೀನಾ ಆ ನಂತರ ಕೊಂಚ ಅಂತರ ಕಾಯ್ದುಕೊಂಡಿದ್ದರು.

ಬಳಿಕ ರಣ್ಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದ ಕತ್ರೀನಾ, ಸಲ್ಮಾನ್ ಖಾನ್ ಜೊತೆಗಿನ ಸ್ನೇಹ ಮುರಿದುಕೊಂಡಿದ್ದರು. ಆದರೆ ಯಾವಾಗ ರಣ್ಬೀರ್ ಮತ್ತು ಕತ್ರೀನಾ ಕೈಫ್ ನಡುವೆ ಬ್ರೇಕ್ ಆಯ್ತೋ ಬಳಿಕ ಮತ್ತೆ ಸಲ್ಮಾನ್ ಜೊತೆ ಸ್ನೇಹ ಬೆಳೆಸಿಕೊಳ್ಳುವ ಮೂಲಕ ಬ್ಯಾಡ್ ಜೊತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ರು.

ತೆರೆಹಿಂದೆ ಉತ್ತಮ ಸ್ನೇಹಿತರಾಗಿರುವ ಕತ್ರಿನಾ ಮತ್ತು ಸಲ್ಮಾನ್ ಆನ್ ಸ್ಕ್ರೀನ್ ನಲ್ಲೂ ಇಬ್ಬರದು ಹಿಟ್ ಜೋಡಿ. ಇಬ್ಬರು ಒಟ್ಟಿಗೆ ನಟಿಸಿರುವ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಾಣುವ ಜೊತೆಗೆ ಈ ಜೋಡಿಯೂ ಅಷ್ಟೆ ಫೇಮಸ್.

Recommended Video

ವೈರಲ್ ಆಯ್ತು ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಫೋಟೋ | Darshan Hotel Controversy | Filmibeat Kannada

ಮೈನೆ ಪ್ಯಾರ್ ಕಿಯಾ, ಏಕ್ತಾ ಟೈಗರ್, ಟೈಗರ್ ಜಿಂದಾ ಹೈ, ಭಾರತ್ ಸಿನಿಮಾಗಳಲ್ಲಿ ಸಲ್ಮಾನ್ ಮತ್ತು ಕತ್ರೀನಾ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಇದೀಗ ಮತ್ತೆ ಟೈಗರ್ 3ನೇ ಸರಣಿ ಮೂಲಕ ಇಬ್ಬರು ಮತ್ತೆ ವಾಪಸ್ ಆಗುತ್ತಿದ್ದಾರೆ.

More from Filmibeat

English summary
Bollywood Actor Salman Khan birthday wishes to Katrina Kaif. Katrina Kaif celebrated 38th birthday on July 16.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X