ರಶ್ಮಿಕಾಗೆ ಹುಷಾರಿಲ್ಲ ಎಂದು ಗೊತ್ತಾದ ನಂತರ ಸಲ್ಮಾನ್ ಖಾನ್ ಮಾಡಿದ್ದೇನು..?

ಕಿರಿಕ್ ಪಾರ್ಟಿ ಚಿತ್ರದ ನಾಯಕಿಯಾಗಿ ಅವತರಿಸಿದವರು ರಶ್ಮಿಕಾ ಮಂದಣ್ಣ. ಇದೊಂದೇ ಚಿತ್ರದ ಮೂಲಕ ಭಾರತದೆಲ್ಲೆಡೆ ಪ್ರಚಾರ ಪಡೆದ ರಶ್ಮಿಕಾ ಆ ನಂತರ ಕರುನಾಡೆಂಬ ಮನೆಗೆ ಮಗಳಾಗಲಿಲ್ಲ.ಬದಲಿಗೆ ಗೀತಾ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಮದುವೆಯಾಗುವ ಮೂಲಕ ಆಂಧ್ರದ ಸೊಸೆಯಾದರು.

ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆಯುತ್ತಲೇ ಕನ್ನಡ ಮತ್ತು ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ ರಶ್ಮಿಕಾ ಈಗ ಕೇವಲ ಸೌತ್ ಹೀರೋಯಿನ್ ಮಾತ್ರ ಅಲ್ಲ ಬಾಲಿವುಡ್ ಹೀರೋಯಿನ್ ಕೂಡ ಹೌದು. ಹಿಂದಿಯಲ್ಲಿ ಒಂದಾದ ಮೇಲೊಂದರಂತೆ ಅವಕಾಶ ಪಡೆಯುತ್ತಿರುವ ರಶ್ಮಿಕಾ ಸದ್ಯ ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡುತ್ತಿರುವ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಿಕಂದರ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ತಿದ್ದಾರೆ. ಹೈದ್ರಾಬಾದ್ ಮತ್ತು ಮುಂಬೈನಲ್ಲಿ ನಡೆದ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇಂಥಾ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನ ಬ್ಯಾಚುಲರ್ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಬಾಯ್ತುಂಬ ಹೊಗಳಿದ್ದಾರೆ.

Salman Khan sir took care of me when I was unwell says Rashmika Mandanna

ಹೌದು, ಇಂಡಿಯಾ ಟುಡೇ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಅವರ ಜೊತೆ ಕೆಲಸ ಮಾಡಬೇಕೆಂಬ ಕನಸು ಸಿಕಂದರ್ ಚಿತ್ರದ ಮೂಲಕ ನನಸಾಗಿದೆ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ತುಂಬಾ ಸರಳ-ಸಜ್ಜನವಾದ ವ್ಯಕ್ತಿಯೆಂದು ಹೇಳಿದ್ಧಾರೆ.

ಮುಂದುವರೆದು ಅದೊಂದು ದಿನ ಚಿತ್ರದ ಚಿತ್ರೀಕರಣ ನಡೆಯುವಾಗ ನನ್ನ ಆರೋಗ್ಯ ಸ್ವಲ್ಪ ಕೈ ಕೊಟ್ಟಿತ್ತು. ಅದ್ಹೇಗೋ ಈ ವಿಚಾರ ಸಲ್ಮಾನ್ ಖಾನ್ ಅವರ ಕಿವಿಯನ್ನು ಕೂಡ ತಲುಪಿತು. ಕೂಡಲೇ ನನ್ನ ಬಳಿ ಬಂದ ಸಲ್ಮಾನ್ ಖಾನ್ ನನ್ನ ಆರೋಗ್ಯವನ್ನು ವಿಚಾರಿಸಿದರು. ಇಷ್ಟೇ ಅಲ್ಲ ಅಲ್ಲಿದ್ದವರಿಗೆ ಬೆಚ್ಚನೆಯ ನೀರು ಮತ್ತು ಊಟವನ್ನು ಕೂಡ ತರಲು ಹೇಳಿದರು ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಈ ದೇಶದ ಬಹುದೊಡ್ಡ ಸೂಪರ್ ಸ್ಟಾರ್ ಅಂತಹ ವ್ಯಕ್ತಿ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ, ನಿಮ್ಮಲ್ಲಿ ವಿಶೇಷವಾದ ಭಾವನೆ ಮೂಡಿಸುತ್ತಾರೆ ಅದು ಅವರ ಹೃದಯವಂತಿಕೆಗೆ ಕೈಗನ್ನಡಿ ಎಂದಿದ್ದಾರೆ.

ಇನ್ನು ಚಿತ್ರದ ಬಿಡುಗಡೆಯ ಕುರಿತು ಕೂಡ ಮಾತನಾಡಿರುವ ರಶ್ಮಿಕಾ ಆ ವಿಶೇಷವಾದ ದಿನಕ್ಕೆ ನಾನು ಕಾಯುತ್ತಿದ್ದೇನೆ, ಈ ಚಿತ್ರ ನನ್ನ ವೃತ್ತಿ ಬದುಕಿನ ವಿಶೇಷವಾದ ಚಿತ್ರವಾಗಲಿದೆ ಎಂದಿರುವ ರಶ್ಮಿಕಾ ಅಭಿಮಾನಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೇ ಸಿಕಂದರ್ ಚಿತ್ರಕ್ಕೆ ರಶ್ಮಿಕಾ ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ಯಾಕೆಂದರೆ ಸಲ್ಮಾನ್ ಖಾನ್ ಬಾಲಿವುಡ್‌ನ ದೊಡ್ಡ ಸ್ಟಾರ್. ಇನ್ನೂ ಚಿತ್ರಕ್ಕೆ ಹಣ ಹೂಡುತ್ತಿರುವ ಸಾಜಿದ್ ನಾಡಿಯಾವಾಲ ಕೂಡ ಕೋಟಿ ಕುಳ. ಈ ಕಾರಣಕ್ಕೆ ಸಿಕ್ಕ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಂಡು ರಶ್ಮಿಕಾ ಮಂದಣ್ಣ ಹದಿಮೂರು ಕೋಟಿಯನ್ನು ಈ ಚಿತ್ರಕ್ಕೆ ಪಡೆದಿದ್ದಾರೆ ಎಂಬ ಮಾತು ಗಾಸಿಪ್ ಅಂಗಳದಲ್ಲಿ ಕೇಳಿ ಬರುತ್ತಿದೆ.

ಇನ್ನುಳಿದಂತೆ ಸದ್ಯ ಪುಷ್ಪ 2 ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಪ್ರತಿಭಾವಂತ ಹೀರೋ ಆಯುಷ್ಮಾನ್ ಖುರಾನಾ ಜೊತೆ ಕೂಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಸ್ತ್ರೀ.. ಬೇಡಿಯಾ.. ಮುಂಜ್ಯಾನಂತಹ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದು, ಹಾರರ್ ವಿಭಾಗದಲ್ಲಿ ತಮ್ಮದೇ ಯುನಿವರ್ಸ್‌ನ ಸೃಷ್ಟಿಸುತ್ತಿರುವ ದಿನೇಶ್ ವಿಜ್ಜನ್ ಆಯುಷ್ಮಾನ್ ಕುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಅಭಿನಯಿಸಿರುವ ಛಾವ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X