ವಿಡಿಯೋ: ರೆಸ್ಟೊರೆಂಟ್‌ನಲ್ಲಿ ತಟ್ಟೆಗಳನ್ನು ಒಡೆದ ಸಲ್ಮಾನ್ ಖಾನ್ ಸಹೋದರಿ
ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಅರ್ಪಿತಾ ತಮ್ಮ ಗೆಳತಿಯರೊಂದಿಗೆ ಸೇರಿಕೊಂಡು ರೆಸ್ಟೊರೆಂಟ್ ಒಂದರಲ್ಲಿ ತಟ್ಟೆಗಳನ್ನು ಒಡೆದು ಹಾಕಿದ್ದಾರೆ. ಇದರ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
ಅರ್ಪಿತಾ, ರೆಸ್ಟೊರೆಂಟ್‌ನಲ್ಲಿ ತಟ್ಟೆಗಳನ್ನು ಒಡೆದುಹಾಕಿರುವುದು ನಿಜ ಆದರೆ ಅಲ್ಲಿ ಜಗಳ ಮಾಡಿ ತಟ್ಟೆಗಳನ್ನು ಒಡೆದು ಹಾಕಿಲ್ಲ, ಬದಲಿಗೆ ತಟ್ಟೆಗಳನ್ನು ಒಡೆಯುವುದು ಆ ರೆಸ್ಟೊರೆಂಟ್‌ನ ಸಂಪ್ರದಾಯವಂತೆ!

ಹೌದು, ಅರ್ಪಿತಾ ಮತ್ತು ಅವರ ಕೆಲವು ಗೆಳತಿಯರು ದುಬೈನ ಗ್ರೀಕ್ ಹೊಟೆಲ್ ಒಂದಕ್ಕೆ ಹೋಗಿದ್ದಾರೆ. ಗ್ರೀಕ್ ಹೋಟೆಲ್‌ಗಳಲ್ಲಿ ಅತಿಥಿಗಳಿಗೆ ತಟ್ಟೆ ಒಡೆಯಲು ಅವಕಾಶ ಕೊಡಲಾಗುತ್ತದೆಯಂತೆ. ಹಾಗಾಗಿ ಅರ್ಪಿತಾ ಹಾಗೂ ಗೆಳತಿಯರು ತಟ್ಟೆಗಳನ್ನು ಒಡೆದಿದ್ದಾರೆ.
ತಟ್ಟೆಗಳನ್ನು ಒಡೆದು ಹಾಕಿದ್ದರ ಜೊತೆಗೆ ನೃತ್ಯ ಮಾಡಿ, ಗೆಳತಿಯರ ಜೊತೆಗೆ ಸಖತ್ ಎಂಜಾಯ್ ಮಾಡಿದ್ದಾರೆ ಅರ್ಪಿತಾ. ಸಲ್ಮಾನ್ ಖಾನ್ ರ ಸಾಕು ಸಹೋದರಿ ಅರ್ಪಿತಾ, ಸಲ್ಮಾನ್ ತಂದೆ-ತಾಯಿ ಅರ್ಪಿತಾರನ್ನು ದತ್ತು ಪಡೆದಿದ್ದರು.
More from Filmibeat
English summary
Salman Khan's sister Arpita breaks multiple plates in a restaurant in Dubai. Breaking plates is a kind of culture in Greek hotels.


Click it and Unblock the Notifications











