ಸಲ್ಲೂ ತಂಗಿ ಮದುವೆಗೆ ಮೋದಿ, ಶಾರುಖ್ ಬರ್ತಾರಾ?

By ಜೇಮ್ಸ್ ಮಾರ್ಟಿನ್

ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಪ್ರೀತಿಯ ತಂಗಿ ಅರ್ಪಿತಾ ಖಾನ್ ಅವರ ಮದುವೆ ಸಿದ್ಧತೆಯಲ್ಲಿ ಇಡೀ ಹಿಂದಿ ಚಿತ್ರರಂಗವೇ ಮುಳುಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯಾತಿಗಣ್ಯರಿಗೆ ಮದುವೆಗೆ ಆಹ್ವಾನ ನೀಡಿರುವ ಸಲ್ಮಾನ್ ಖಾನ್ ಅವರು ಹೈದರಾಬಾದ್, ಮುಂಬೈ ನಡುವೆ ಸಂಚಾರ ನಿರತರಾಗಿದ್ದಾರೆ.

ಸಲ್ಮಾನ್ ಖಾನ್ ತಂದೆ ಸಲೀಂ ಅವರ ದತ್ತು ಪುತ್ರಿ ಅರ್ಪಿತಾ ಎಂದರೆ ಸಲ್ಮಾನ್ ಗೆ ಎಲ್ಲಿಲ್ಲಿದ ಅಕ್ಕರೆ. ತಂಗಿಗಾಗಿ ವೈಯಕ್ತಿಕ ರಾಗ, ದ್ವೇಷವನ್ನು ಮರೆತು ಆಕೆಯ ಸುಖ ಸಂತೋಷಕ್ಕಾಗಿ ಸಲ್ಲೂ ಎಂಥಾ ತ್ಯಾಗಕ್ಕೂ ಸಿದ್ಧನಾಗಿ ನಿಂತಿದ್ದಾನೆ.

ಮದುವೆ ಯಾವಾಗ?: ಹೈದರಾಬಾದಿನ ಫಲಾಕ್ನೂಮ ಪ್ಯಾಲೇಸ್ ನಲ್ಲಿ ನ.18ರಂದು ಅರ್ಪಿತಾ ಖಾನ್ ಹಾಗೂ ಆಕೆ ಗೆಳೆಯ ಆಯುಷ್ ಶರ್ಮ ಅವರ ಮದುವೆ ನೆರವೇರಲಿದೆ. ಸದ್ಯಕ್ಕೆ ಮದುವೆ ಬಜೆಟ್ 1 ಕೋಟಿ ರು ಎಂದು ನಿಗದಿಪಡಿಸಲಾಗಿದೆ. ನ.21 ರಂದು ಮುಂಬೈನ ಪಂಚತಾರಾ ಹೋಟೆಲ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

ಮದುವೆ ಸಂದರ್ಭದಲ್ಲಿ ಮೋದಿ ಅವರು ಸದ್ಯ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವುದರಿಂದ ಮದುವೆ ಹಾಗೂ ಆರತಕ್ಷತೆಗೆ ಬರುವುದು ಸಾಧ್ಯವಿಲ್ಲ. ನವೆಂಬರ್ ಮೊದಲ ವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಸಲ್ಮಾನ್ ಅವರು ತಂಗಿ ಮದುವೆಗೆ ಆಮಂತ್ರಿಸಿದ್ದರು. ಇಬ್ಬರು ಜನಪ್ರಿಯ ತಾರೆಗಳಿರುವ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಫುಲ್ ಫೇಮಸ್ ಆಗಿಬಿಟ್ಟಿದೆ. ಮೋದಿ ಅವರ ಪೇಜ್ ನಲ್ಲಿ ಈ ಚಿತ್ರ 1,340,653 ಮಂದಿ ಲೈಕ್, 23,099 ಹಂಚಿಕೆ 18,998 ಕಾಮೆಂಟ್ ಪಡೆದುಕೊಂಡಿದೆ.

ಶಾರುಖ್ ಬರ್ತಾರಾ: ಇತ್ತೀಚೆಗೆ ಬಿಗ್ ಬಾಸ್ ನಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರ ಪ್ರೊಮೋಷನ್ ಮಾಡಿದ್ದ ಸಲ್ಮಾನ್ ಅವರು ತಮ್ಮ ಪ್ರತಿಸ್ಪರ್ಧಿ ಶಾರುಖ್ ಖಾನ್ ಅವರಿಗೂ ಆಹ್ವಾನ ನೀಡಿದ್ದಾರಂತೆ. ಅರ್ಪಿತಾಳನ್ನು ನಾನು ಚಿಕ್ಕಂದಿನಲ್ಲಿ ಎತ್ತಿ ಆಡಿಸಿದ್ದೇನೆ. ಸಲ್ಲೂನಿಂದ ಆಹ್ವಾನ ಬರದಿದ್ದರೂ ನಾನು ಮದುವೆಗೆ ಹೋಗುತ್ತೇನೆ ಎಂದು ಕಿಂಗ್ ಖಾನ್ ಶಾರುಖ್ ಘೋಷಿಸಿದ್ದಾನೆ.

Arpita Khan Grand Reception In Mumbai

ಗಣ್ಯರು ಯಾರು ಬರುತ್ತಾರೆ: ಶಾರುಖ್ ಅಲ್ಲದೆ, ಅಮೀರ್ ಖಾನ್, ಅಮಿತಾ ಬ್ ಬಚ್ಚನ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಹೃತಿಕ್ ರೋಷನ್ ಸೇರಿದಂತೆ ಅನೇಕ ಬಾಲಿವುಡ್ ನಟ ನಟಿಯರು, ನಿರ್ಮಾಪಕ, ನಿರ್ದೇಶಕರು, ಸಂಗೀತಗಾರರು ಮದುವೆ ಆರತಕ್ಷತೆಗೆ ಬರಲಿದ್ದಾರೆ. ದಕ್ಷಿಣ ಭಾರತದಿಂದ ಕಮಲ್ ಹಾಸನ್, ಚಿರಂಜೀವಿ, ವೆಂಕಟೇಶ್, ಸುರೇಶ್ ಬಾಬು ಅವರಿಗೆ ಆಹ್ವಾನ ಕಳಿಸಲಾಗಿದೆ. ಒಟ್ಟಾರೆ, ತಂಗಿ ಮದುವೆ ವಿಜೃಂಭಣೆಯಿಂದ ನೇರವೇರಿಸಲು ಸಲ್ಲೂ ಸಜ್ಜಾಗಿದ್ದಾನೆ.

More from Filmibeat

English summary
Salman Khan's sister Arpita Khan is getting married to her boyfriend Ayush Sharma at the Falaknuma palace in Hyderabad on November 18. The wedding invitee list is a big surprise and reports are that Salman Khan has invited Shahrukh Khan, Aamir Khan, Kareena Kapoor, Deepika Padukone and Hrithik Roshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X