»   » ಚಿತ್ರಗಳಲ್ಲಿ ಅರ್ಪಿತಾ ಖಾನ್ ಮದುವೆ ಮನೆ ವೈಭವ

ಚಿತ್ರಗಳಲ್ಲಿ ಅರ್ಪಿತಾ ಖಾನ್ ಮದುವೆ ಮನೆ ವೈಭವ

Posted By:
Subscribe to Filmibeat Kannada

ಸಲ್ಮಾನ್ ಖಾನ್ ಮುದ್ದಿನ ತಂಗಿ ಅರ್ಪಿತಾಳ ವಿವಾಹ ಮಹೋತ್ಸವ ಬರೀ ಬಾಲಿವುಡ್ ಗೆ ಅಷ್ಟೇ ಅಲ್ಲ, ಇಡೀ ಭಾರತದಾದ್ಯಂತ ಎಲ್ಲರ ಕಣ್ಣು ಕುಕ್ಕುತ್ತಿದೆ. ಥೇಟ್ ಮಹಾರಾಣಿ ಅಂತೆ ಹೈದರಾಬಾದ್ ನ ಫಲಕ್ನುಮಾ ಪ್ಯಾಲೇಸ್ ನಲ್ಲಿ ಅರ್ಪಿತಾ ವಿವಾಹ ಅದ್ದೂರಿಯಾಗಿ ನಡೆಯುತ್ತಿದೆ.

ಹೈದರಾಬಾದ್ ನ ಪ್ರತಿಷ್ಠಿತ ಮತ್ತು ಐತಿಹಾಸಿಕ ಹಿನ್ನಲೆಯುಳ್ಳ ಫಲಕ್ನುಮಾ ಪ್ಯಾಲೇಸ್ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ. ಹೈದರಾಬಾದ್ ನ ಪೈಗಾ ಸಂಸ್ಥಾನಕ್ಕೆ ಸೇರಿದ್ದ ಈ ಅರಮನೆ ನಂತರ ನಿಜಾಮರ ವಶವಾಯ್ತು. 32 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಬೃಹತ್ ಅರಮನೆ, ವಿಶ್ವಪ್ರಸಿದ್ಧ ಚಾರ್ಮಿನಾರ್ ನಿಂದ 5 ಕಿ.ಮಿ ಅಷ್ಟೇ ದೂರ. [ಸಲ್ಮಾನ್ ಖಾನ್ ಗೆ ಅರ್ಪಿತಾ ಒಡಹುಟ್ಟಿದ ತಂಗಿ ಅಲ್ಲ]

ಬರೋಬ್ಬರಿ 2 ಕೋಟಿ ರೂಪಾಯಿ ಕೊಟ್ಟು, ಅರಮನೆಯನ್ನ ಸಲ್ಮಾನ್ ಖಾನ್ ಬುಕ್ ಮಾಡಿದ್ದಾರೆ ಅಂದ್ರೆ, ಅರಮನೆಯಲ್ಲಿ ವೈಶಿಷ್ಠ್ಯ ಇರಲೇಬೇಕು. ಅದನ್ನೆಲ್ಲವನ್ನ ತಿಳಿದುಕೊಳ್ಳುವುದಕ್ಕೆ ಈ ಸ್ಲೈಡ್ ಗಳನ್ನ ಕ್ಲಿಕ್ ಮಾಡಿ.

'ಫಲಕ್ನುಮಾ' ಅಂದ್ರೇನು?

ಫಲಕ್ ಮತ್ತು ನುಮಾ ಅಂದ್ರೆ ಉರ್ದು ಭಾಷೆಯಲ್ಲಿ ಆಕಾಶದಂತೆ ಅನ್ನುವ ಅರ್ಥ ಇದೆ. ಅರ್ಪಿತಾ ಮದುವೆ ಸಂಭ್ರಮ ಕೂಡ ಮುಗಿಲು ಮುಟ್ಟಿದೆ.

'ತಾಜ್' ಉಸ್ತುವಾರಿಯಲ್ಲಿರುವ ಅರಮನೆ

ಹೈದರಾಬಾದ್ ನಿಜಾಮ ಪ್ರಿನ್ಸ್ ಮುಕ್ಕರಮ್ ಝಾ ಬಹದ್ದೂರ್ 2000ನೇ ಇಸವಿಯಲ್ಲಿ ತಾಜ್ ಹೊಟೇಲ್ ಗ್ರೂಪ್ ಗೆ 30 ವರ್ಷಗಳ ಕಾಲ ಭೋಗ್ಯಕ್ಕೆ ನೀಡಿದ್ದಾರೆ.

ಕುದುರೆ ರಥವನ್ನೇರೇ ಬರಬೇಕು

ಈ ಅರಮನೆಯ ಸಂಸ್ಕೃತಿಯ ಪ್ರಕಾರ, ಅರಮನೆ ಒಳಗೆ ಯಾರೇ ಬರುವುದಕ್ಕೆ ಇಚ್ಛಿಸಿದರೂ ಕುದುರೆ ರಥವನ್ನೇರಿಯೇ ಬರಬೇಕು. ಗೇಟ್ ನಿಂದ ಅರಮನೆ ಮುಂಭಾಗದವರೆಗೆ ಕುದುರೆ ರಥವನ್ನು ಬಿಟ್ಟರೆ ಇನ್ಯಾವ ವಾಹನಗಳಿಗೂ ಪ್ರವೇಶ ನಿಶಿದ್ಧ. ಹೀಗಾಗಿ ಅರ್ಪಿತಾ ಮದುವೆಗೆ ಬರುವ ಎಲ್ಲರಿಗೂ ಕುದುರೆ ಸವಾರಿ ಕಂಪಲ್ಸರಿ.

ಅರಮನೆಯಲ್ಲಿ 220 ಕೋಣೆಗಳಿವೆ

ಫಲಕ್ನುಮಾ ಪ್ಯಾಲೇಸ್ ನಲ್ಲಿ ಒಟ್ಟು 220 ಐಶಾರಾಮಿ ಕೋಣೆಗಳು, 22 ಬೃಹತ್ ಹಾಲ್ ಗಳಿವೆ. ಪ್ರತಿ ರೂಮ್ ಮತ್ತು ಹಾಲ್ ನಲ್ಲಿ ನಿಜಾಮರ ಕಲಾಕೃತಿಗಳು ಸೇರಿದಂತೆ ಅತ್ತ್ಯತ್ತಮ ಸಂಗ್ರಹಗಳಿವೆ.

ಬೃಹತ್ ಡೈನಿಂಗ್ ಹಾಲ್

ಫಲಕ್ನುಮಾ ಪ್ಯಾಲೇಸ್ ನ ಮತ್ತೊಂದು ಆಕರ್ಷಣೆ ಅಂದ್ರೆ ಡೈನಿಂಗ್ ಹಾಲ್. ಬರೋಬ್ಬರಿ 108 ಅಡಿ ಉದ್ದ ಇರುವ ಡೈನಿಂಗ್ ಟೇಬಲ್ ನಲ್ಲಿ 100ಕ್ಕೂ ಅಧಿಕ ಮಂದಿ ಏಕಕಾಲಕ್ಕೆ ಉಪಹಾರ ಸೇವಿಸಬಹುದು. ಇಡೀ ಖಾನ್ ಖಾನ್ದಾನ್, ಅರ್ಪಿತಾಳ ವಿವಾಹ ಭೋಜನವನ್ನ ಇಲ್ಲೇ ಸೇವಿಸಲಿದೆ.

English summary
Salman Khan sister Arpita Khan wedding venue Falaknuma palace is one of the oldest heritage place in Hyderabad, which is now under the taj hotels for lease. The palace has 220 lavish rooms with the large collection of paintings, statutes belonged to nizams of hyderabad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada