ಮತ್ತೆ ಮಾವ ಆದ ಬ್ಯಾಡ್ ಬಾಯ್ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 54ನೇ ವರ್ಷದ ಬರ್ತಡೇ ಆಚರಣೆಯಲ್ಲಿದ್ದ ಸಲ್ಲು ಭಾಯ್ ಗೆ ಸಹೋದರಿ ಅರ್ಪಿತಾ ಖಾನ್ ಸಿಹಿ ಸುದ್ದಿ ನೀಡಿದ್ದಾರೆ.

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಬರ್ತಡೇ ದಿನವೇ ಎರಡನೇ ಮಗುವಿಗೆ ಮಾವ ಎನಿಸಿಕೊಂಡಿದ್ದಾರೆ ದಬಾಂಗ್ ಸ್ಟಾರ್.

ಗಂಡುಮಗುವಿಗೆ ಜನ್ಮ ನೀಡಿರುವ ಬಗ್ಗೆ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಇಬ್ಬರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದು, ಸಂತಸ ಹಂಚಿಕೊಂಡಿದ್ದಾರೆ. ''ನಮ್ಮ ಕುಟುಂಬಕ್ಕೆ ಯುವರಾಜನ ಆಗಮನವಾಗಿದೆ'' ಎಂದು ಪೋಸ್ಟ್ ಮಾಡಿದ್ದಾರೆ.

salman-khan-sister-welcome-baby-girl

ಬಾಲಿವುಡ್ ಮೂಲಗಳು ಹೇಳುವ ಪ್ರಕಾರ, ಸಲ್ಮಾನ್ ಖಾನ್ ಹುಟ್ಟುಹಬ್ಬದ ದಿನವೇ ತನ್ನ ಮಗುವಿಗೆ ಜನ್ಮ ನೀಡಬೇಕು ಎಂಬ ಆಸೆಯನ್ನು ಅರ್ಪಿತಾ ವ್ಯಕ್ತಪಡಿಸಿದ್ದರಂತೆ. ಹಾಗಾಗಿ, ವೈದ್ಯರು ಕೂಡ ಅರ್ಪಿತಾ ಅವರಿಗೆ ಇದೇ ದಿನವನ್ನು ನಿಗದಿ ಪಡಿಸಿದ್ದರಂತೆ.

ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಅವರು 2014ರಲ್ಲಿ ವಿವಾಹವಾಗಿದ್ದರು. 2016ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು ಅರ್ಪಿತಾ. ಅಹಿಲ್ ಎಂದು ಹೆಸರಿಟ್ಟಿದ್ದು ಈಗ ಆ ಮಗುವಿಗೆ ಮೂರು ವರ್ಷ. ಈಗ ಎರಡನೇ ಮಗುವನ್ನು ಬರಮಾಡಿಕೊಂಡಿದ್ದು, ಸಲ್ಲು ಫ್ಯಾಮಿಲಿಯಲ್ಲಿ ತೀವ್ರ ಸಂತಸ ಮನೆ ಮಾಡಿದೆ.

More from Filmibeat

English summary
Salman khan sister Arpita Khan and Aayush Sharma welcome baby girl on Salman Khan’s birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X