ಅಭಿಮಾನಿ ಜೊತೆ ಒರಟಾಗಿ ನಡೆದು ಕೊಂಡ ಸೆಕ್ಯುರಿಟಿ ಕೆನ್ನೆಗೆ ಬಾರಿಸಿದ ಸಲ್ಮಾನ್ ಖಾನ್
ಬಾಲಿವುಡ್ ಬ್ಯಾಡ್ ಬಾಯ್ ಅಂತಾನೆ ಖ್ಯಾತಿ ಗಳಿಸಿರುವ ಸಲ್ಮಾನ್ ಖಾನ್ ಸದ್ಯ 'ಭಾರತ್' ಚಿತ್ರದ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಈದ್ ಹಬ್ಬದ ದಿನವೆ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ 'ಭಾರತ್' ಸಿನಿಮಾ ರಿಲೀಸ್ ಆಗಿದೆ.
ಭಾರತಿ ಸಿನಿಮಾ ರಿಲೀಸ್ ಗೂ ಮುನ್ನ ಮುಂಬೈನಲ್ಲಿ ಪೂರ್ವಭಾವಿಯಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಆದ್ರೆ ಈ ಸಮಯದಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳು ಕೂಡ ಜಮಾಯಿಸಿದ್ದರು.
ಸಲ್ಲು ನಡೆದುಕೊಂಡುಹೊಗುತ್ತಿರುವಾಗ ಅಪಾರ ಸಂಖ್ಯೆ ಅಭಿಮಾನಿಗಳು ಒಮ್ಮೆಗೆ ಮುತ್ತಿಕೊಳ್ಳಲು ಯತ್ನಿಸಿದ್ದಾರೆ. ಆ ಸಮಯದಲ್ಲಿ ಸಲ್ಲು ಜೊತೆ ಇದ್ದ ಸೆಕ್ಯುರಿಟಿ ಗಾರ್ಡ್ ಅಭಿಮಾನಿಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು. ಈ ಸಮಯದಲ್ಲಿ ಸಲ್ಮಾನ್ ಖಾನ್ ಪುಟ್ಟ ಅಭಿಮಾನಿಯೊಬ್ಬರು ಸಲ್ಮಾನ್ ಮಾತನಾಡಿಸಲು ಸಲ್ಮಾನ್ ಬಳಿ ನುಗ್ಗಿ ಬರುತ್ತಿದ್ದರು.

ಈ ಸಮಯದಲ್ಲಿ ಪಕ್ಕದಲ್ಲೆ ಇದ್ದ ಸೆಕ್ಯುರಿಟಿ ಆ ಮಗುವಿನ ಜೊತೆ ಒರಟಾಗಿ ನಡೆದುಕೊಂಡಿದ್ದಾರೆ. ಇದನ್ನ ಗಮನಿಸಿದ ಸಲ್ಲು ಸೆಕ್ಯುರಿಟಿ ಕೆನ್ನೆಗೆ ಸರಿಯಾಗಿ ಬಾರಿಸಿದ್ದಾರೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.
ಸಲ್ಮಾನ್ ಖಾನ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಒಮ್ಮೆಗೆ ಸಲ್ಲುಮೀಯರನ್ನು ಮುತ್ತಿಕೊಂಡರೆ ಅವರನ್ನು ಕಂಟ್ರೋಲ್ ಮಾಡಲು ಹರಸಾಹಸ ಪಡಬೇಕು. ಆದ್ರೂ ಅಭಿಮಾನಿಗಳ ಜೊತೆ ಒರಟಾಗಿ ನಡೆದುಕೊಂಡರೆ ಸಲ್ಲು ಮಾತ್ರ ಸಹಿಸಿಕೊಳ್ಳುವುದಿಲ್ಲ.


Click it and Unblock the Notifications











