ನನಗೆ ಬಾಲಿವುಡ್‌ನ ಬೆಂಬಲ ಬೇಕಿದೆ, ಸಲ್ಮಾನ್ ಖಾನ್ ಭಾವುಕ..!

ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದು ಕೇವಲ ಕನ್ನಡ ಚಿತ್ರರಂಗದ ಕಥೆ ಮಾತ್ರ ಅಲ್ಲ, ಎಲ್ಲ ಭಾಷೆಯ ಕಥೆ ಕೂಡ ಒಂದೇ ತರ ಇದೆ.

ಇನ್ನು ಮೊದಲಾದರೆ ಹೊಸಬರು ಮಾತ್ರ ಗೆಲ್ಲಲು ಹೆಣಗುತ್ತಿದ್ದರು. ಹೊಸಬರ ಪ್ರಯತ್ನ-ಪ್ರಯೋಗಗಳು ಸ್ಟಾರ್‌ಗಳ ಬಿಗ್ ಬಜೆಟ್ ಕಮರ್ಷಿಯಲ್ ಚಿತ್ರಗಳ ಮುಂದೆ ಕಳೆದು ಹೋಗುತ್ತಿದ್ದವು.ಆದರೆ ಈಗ ಸೂಪರ್ ಸ್ಟಾರ್‌ ಪಟ್ಟವನ್ನು ಅಲಂಕರಿಸಿದವರು ಕೂಡ ಒದ್ದಾಡುತ್ತಿದ್ದಾರೆ.ಇದಕ್ಕೆ ಸಲ್ಮಾನ್ ಖಾನ್ ತಾಜಾ ಉದಾಹರಣೆ.

Salman Khan Speaks Out About Bollywood s Silence On Sikandar I Too Need Support

ಹೌದು, ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಬಾಕ್ಸಾಫೀಸ್‌ನಲ್ಲಿ ತೆವಳುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಕಡಿಮೆಯಾಗುತ್ತಿದೆಯೇ ಹೊರತು ಹೆಚ್ಚಾಗುತ್ತಿಲ್ಲ. ಇನ್ನು ಮೊದಲೆಲ್ಲ ಸಲ್ಮಾನ್ ಖಾನ್ ಚಿತ್ರ ಅಂದರೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಚಿತ್ರ ಎಷ್ಟೇ ಕಳಪೆಯಾಗಿದ್ದರು ಕೂಡ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ಹಣವನ್ನು ಆ ಚಿತ್ರ ಗಳಿಸಯೇ ಗಳಿಸುತ್ತಿತ್ತು.

ಆದರೆ ಈಗ ಬದಲಾದ ಕಾಲದಲ್ಲಿ ಕಳೆದ ಕೆಲ ವರ್ಷಗಳಿಂದ ಈ ಪವಾಡ ಕೂಡ ನಡೆಯುತ್ತಿಲ್ಲ. ಒಂದು ಕಡೆ ಸಿಕಂದರ್ ಚಿತ್ರದ ಸೋಲು ಮತ್ತೊಂದು ಕಡೆ ಕಡಿಮೆಯಾಗುತ್ತಿರುವ ವರ್ಚಸ್ಸು. ಸಹಜವಾಗಿ ಇದರಿಂದ ಸಲ್ಮಾನ್ ಖಾನ್ ಕುಗ್ಗಿದ್ದಾರೆ. ನೊಂದಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ತಮ್ಮ ಮನದ ನೋವನ್ನು ಹೊರ ಹಾಕಿರುವ ಸಲ್ಮಾನ್ ಖಾನ್ ಬಾಲಿವುಡ್‌ನ ಬೆಂಬಲ ನನಗೆ ಬೇಕಿದೆ ಎಂದು ಹೇಳಿದ್ದಾರೆ.

ಹೌದು, ಅಸಲಿಗೆ ಸಲ್ಮಾನ್ ಖಾನ್ ಮೊದಲಿಂದ ತಮ್ಮ ಚಿತ್ರಕ್ಕೆ ನೀಡದಷ್ಟು ಪ್ರಾಮುಖ್ಯತೆಯನ್ನು ಬೇರೆಯವರ ಚಿತ್ರಗಳಿಗೆ ನೀಡುತ್ತಾ ಬಂದಿದ್ದಾರೆ. ಅನೇಕ ಚಿತ್ರಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹೊಸಬರ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಹಾಡು-ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗದೇ ಇದ್ದರೂ ಕೂಡ ಟ್ವಿಟ್ ಮಾಡುವ ಮೂಲಕ ಚಿತ್ರತಂಡವನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಸ್ನೇಹಕ್ಕೆ ಬೆಲೆಯನ್ನು ನೀಡಿ ಬೇರೆಯವರ ಚಿತ್ರಗಳಲ್ಲಿ ಹೀಗೆ ಬಂದು ಹಾಗೇ ಹೋಗುವ ಪಾತ್ರಗಳನ್ನು ಕೂಡ ಮಾಡಿದ್ದಾರೆ.

ಹೀಗೆ ಬಾಲಿವುಡ್ ಜೊತೆ ಸಲ್ಮಾನ್ ಖಾನ್ ನಿಂತರೂ ಕೂಡ, ಬಾಲಿವುಡ್‌ ಸಲ್ಮಾನ್ ಖಾನ್ ಜೊತೆ ನಿಂತಿಲ್ಲ. ತಮ್ಮ ಚಿತ್ರಗಳ ಪ್ರಚಾರವನ್ನು ಸಲ್ಮಾನ್ ಖುದ್ದು ಮಾಡಿಕೊಂಡು ಬಂದಿದ್ದಾರೆ ಹೊರತು ಬೇರೆಯವರು ಬಂದು ಸಲ್ಮಾನ್ ಖಾನ್ ಜೊತೆ ಕೈ ಜೋಡಿಸಿಲ್ಲ. ಸಲ್ಮಾನ್ ಖಾನ್ ಚಿತ್ರಗಳ ಕುರಿತು ನಾಲ್ಕು ಮೆಚ್ಚುಗೆಯ ಮಾತುಗಳನ್ನು ಕೂಡ ಆಡಿಲ್ಲ.

ಈ ವಿಚಾರದಲ್ಲಿ ಸಲ್ಮಾನ್ ಖಾನ್‌ಗೆ ಮೊದಲಿಂದ ಬೇಸರ ಇದ್ದೇ ಇದೆ. ಹೀಗಾಗಿಯೇ ಬಾಲಿವುಡ್‌ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್ ನನ್ನ ಚಿತ್ರಗಳಿಗೆ ಬೆಂಬಲ ಬೇಡ ಎಂದು ಅವರೆಲ್ಲ ಅಂದುಕೊಂಡಿರಬಹುದು, ಆದರೆ ನನ್ನನ್ನೂ ಸೇರಿದಂತೆ ಎಲ್ಲರಿಗೂ ಇಲ್ಲಿ ಎಲ್ಲರ ಬೆಂಬಲ ಬೇಕು ಎಂದು ಹೇಳಿದ್ದಾರೆ.

ಆ ನಂತರ ಏಪ್ರಿಲ್ ಹತ್ತರಂದು ಬಿಡುಗಡೆಯಾಗಲಿರುವ ಸನ್ನಿ ಡಿಯೋಲ್ ಅಭಿನಯದ 'ಜಾಟ್' ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವ ಸಲ್ಮಾನ್, ಸನ್ನಿ ಸದ್ಯ ಉತ್ತಮವಾದ ಫಾರ್ಮ್‌ನಲ್ಲಿದ್ದಾನೆ. ಈ ಬಾರಿ ಕೂಡ ಸಿಕ್ಸರ್ ಹೊಡೆಯುತ್ತಾನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಎಲ್ 2 ಎಂಪುರಾನ್ ಚಿತ್ರದ ಕುರಿತು ಕೂಡ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

More from Filmibeat

Read more about: salman khan filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X