ಅಂಬಾನಿ ಮಗನ ಮದ್ವೆಯಲ್ಲಿ ಕಿಮ್ ಕಾರ್ಡ್‌ಶಿಯಾನ್ ಮೇಲೆ ಬಿತ್ತು ಬ್ರಹ್ಮಚಾರಿ ಸಲ್ಮಾನ್ ಖಾನ್ ಕಣ್ಣು...!

ಬಾಲಿವುಡ್ ನಲ್ಲಿ ಸಾರ್ವಕಾಲಿಕ ಚರ್ಚೆ ಎನ್ನುವುದೊಂದಿದ್ದರೆ ಅದು ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಅವರ ಮದ್ವೆಯ ಕುರಿತು. ವಯಸ್ಸು 58 ಆಗಿದ್ರೂ ಮದುವೆ ಬಗ್ಗೆ ಯೋಚನೆಯೇ ಮಾಡದೇ ಇನ್ನೂ ಹಾಗೆಯೇ ಸಲ್ಲು ಉಳಿದಿರುವುದರಿಂದ ಅವರ ಅನೇಕ ಅಭಿಮಾನಿಗಳು ಸಂಕಟವನ್ನೂ ಪಡುತ್ತಾರೆ.

ಇನ್ನೂ.. ಒಂದ್ಕಾಲದಲ್ಲಿ ಸಲ್ಲು.. ಸಲ್ಲು.. ಎಂದು ಕನವರಿಸುತ್ತಿದ್ದ ಅನೇಕ ನಾಯಕಿಯರು ಈಗ ಮದುವೆಯಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಕೆಲವರು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗಕ್ಕೆ ಕರೆತರವ ಧಾವಂತದಲ್ಲಿದ್ದಾರೆ. ಆದರೂ ಅದ್ಯಾಕೋ ಸಲ್ಮಾನ್ ಖಾನ್ ಮಾತ್ರ ಮದುವೆ ಆಗುವ ಮನಸು ಮಾಡಿಲ್ಲ. ಇಂಥಾ ಸಲ್ಮಾನ್ ಖಾನ್ ಅವರ ಕಣ್ಣೀಗ ಕಿಮ್ ಕಾರ್ಡ್‌ಶಿಯಾನ್ ಮೇಲೆ ಬಿದ್ದಿದೆ. ಕಿಮ್ ಸೌಂದರ್ಯ ಸಿರಿ ಸಲ್ಮಾನ್ ಖಾನ್ ಕಣ್ಣರಳಿಸಿದೆ. ವಿಡಿಯೋ ವೈರಲ್ ಆಗಿದೆ.

salman-khan-spotted-looking-at-kim-kardashian-in-previously-unseen-ambani-wedding-footage

ಹೌದು, ನಿಮಗೆ ಗೊತ್ತು.. ಮೊನ್ನೆ..ಮೊನ್ನೆ..ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ತಮ್ಮ ಮಗನ ಅದ್ಧೂರಿ ಮದುವೆಗೆ ಮುಕೇಶ್ ಅಂಬಾನಿ ಇಡೀ ಬಾಲಿವುಡ್ಡಿಗೇ ಬಾಲಿವುಡ್ಡನ್ನ ಕರೆದು ಒಂದು ಕಡೆ ಗುಡ್ಡೆ ಹಾಕಿದ್ದರು. ಸಾಲದಕ್ಕೆ ಇಂಟರ್‌ ನ್ಯಾಷನಲ್ ಸ್ಟಾರ್ಸ್‌ ಗಳನ್ನೂ ಕರೆಸಿದ್ದರು. ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಬಂದಿದ್ದರು. ಆ ಪೈಕಿ ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಎಂದೇ ಖ್ಯಾತಿಯನ್ನೂ ಪಡೆದ ಕಿಮ್ ಕಾರ್ಡ್‌ಶಿಯಾನ್ ಕೂಡ ಒಬ್ಬರು. ಇಂಥಾ ಕಿಮ್ ಕಾರ್ಡ್‌ಶಿಯಾನ್ ಅವರ ಎದೆಯ ಮೇಲೆ ಮದುವೆ ಮನೆಯಲ್ಲಿ ಸಲ್ಮಾನ್ ಖಾನ್ ಕಣ್ಣು ಬಿದ್ದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯೂ ಆಗಿದೆ.

ಹೌದು, ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬೋಲ್ಡ್ ಆದ ಡ್ರೆಸ್‌ನಲ್ಲಿ ಮಿಂಚ್ತಿದ್ದ ಕಿಮ್ ಕಾರ್ಡ್‌ಶಿಯಾನ್, ಅತ್ತಿಂದಿತ್ತ ಇತ್ತಿಂದ ಅತ್ತ ಓಡಾಡುತ್ತಿದ್ದರು. ಹೀಗೆ ಕಿಮ್ ಕಾರ್ಡ್‌ಶಿಯಾನ್ ಓಡಾಡುವಾಗ ಅವರ ಸಮೀಪದಲ್ಲಿಯೇ ಸಲ್ಮಾನ್ ಖಾನ್ ಬಂದಿದ್ದಾರೆ. ಈ ಸಮಯದಲ್ಲಿ ಕ್ಯಾಮರಾ ಕಣ್ಣು ತಮ್ಮನ್ನು ನೋಡುತ್ತಿದೆ ಎಂದು ಗೊತ್ತಿದ್ದೋ , ಗೊತ್ತಿಲ್ಲದೆಯೋ ಸಲ್ಮಾನ್​ ಖಾನ್​ ಅಚ್ಚರಿ ತುಂಬಿದ ಕಂಗಳಿಂದ ಕಿಮ್​ ಕಾರ್ಡ್‌ಶಿಯಾನ್ ​ ಅವರನ್ನು ಕಣ್ತುಂಬಿಕೊಂಡಿದ್ದಾರೆ.

Salman Bhai caught in 4k .
byu/DressWonderful5396 inBollyBlindsNGossip

ಸದ್ಯಕ್ಕೆ ಈ ವಿಡಿಯೋ ನೋಡಿದ ಅನೇಕರು ಈಗ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಬಹುತೇಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಕೆಲವರು ಸಲ್ಮಾನ್ ಖಾನ್ ಲುಕ್ ನಲ್ಲಿಯೇ ಕಿಕ್ ಇದೆ ಎಂದರೆ, ಇನ್ನೂ ಕೆಲವರು ಸರಿಯಾದ ಸಮಯಕ್ಕೆ ಮದುವೆಯಗಿದ್ದರೆ, ಸಲ್ಮಾನ್ ಖಾನ್ ಇವತ್ತು ಈ ತರಹ ಟ್ರೋಲ್ ಆಗುತ್ತಿರಲಿಲ್ಲ ಎನ್ನುತ್ತಿದ್ದಾರೆ. ಅನೇಕರು ಸಲ್ಮಾನ್ ಖಾನ್ ಅವರ ಕಾಲೆಳೆಯುತ್ತಿದ್ದಾರೆ.

ಇನ್ನೊಂದು ಕಡೆ ಸಲ್ಮಾನ್ ಖಾನ್ ಅವರನ್ನು ಅಪಹಾಸ್ಯಕ್ಕೀಡು ಮಾಡಲೆಂದೇ, ಸ್ಲೋ ಮೋಷನ್‌ನಲ್ಲಿ ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಲ್ಲು ಪರವಾಗಿ ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ಕಿಮ್​ ಮತ್ತು ಸಲ್ಲು ಜೋಡಿ ಚೆನ್ನಾಗಿರುತ್ತದೆ ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ.ಅಂದ್ಹಾಗೇ ಸಲ್ಮಾನ್ ಖಾನ್ ಸದ್ಯಕ್ಕೆ 'ಸಿಕಂದರ್​' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X