ವಿಡಿಯೋ : 'ಭಾರತ್' ಸ್ಲೋ ಮೋಷನ್ ಹಾಡಿಗೆ ಸಲ್ಮಾನ್, ದಿಶಾ ಡ್ಯಾನ್ಸ್
'ಭಾರತ್' ಸಿನಿಮಾದ ಟ್ರೇಲರ್ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಈಗ ಸಿನಿಮಾದ ಮೊದಲ ವಿಡಿಯೋ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೂ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗುತ್ತಿದೆ.
'ಸ್ಲೋ ಮೋಷನ್..' ಎಂಬ ಹಾಡಿನಲ್ಲಿ ಎಲ್ಲವೂ ಫಾಸ್ಟ್ ಆಗಿದೆ. ಸಲ್ಮಾನ್ ಖಾನ್ ಹಾಗೂ ದಿಶಾ ಪಟಾನಿ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದಾರೆ. ಇಬ್ಬರ ಡ್ಯಾನ್ಸ್ ಹಾಡಿನ ಹೈಲೈಟ್ ಆಗಿದೆ. ಸರ್ಕಸ್ ಕಂಪನಿಯ ಅದ್ದೂರಿ ಸೆಟ್ ನಲ್ಲಿ ಎಂದಿನ ಬಾಲಿವುಡ್ ಶ್ರೀಮಂತಿಕೆಗೆ ತಕ್ಕ ಹಾಗೆ ಹಾಡು ಮೂಡಿಬಂದಿದೆ.
'ಭಾರತ್' ಸಿನಿಮಾದಲ್ಲಿ ಸಲ್ಮಾನ್ ಪಾತ್ರದ ಹೆಸರು ಭಾರತ್ ಆಗಿದೆ. ಭಾರತ್ ಯುವಕನಾಗಿದ್ದ ಸಮಯದಲ್ಲಿ ಈ ಹಾಡು ಬರುತ್ತದೆ. ಶ್ರೇಯಾ ಘೋಷಲ್ ಹಾಗೂ ನಕಶ್ ಅಝೀಜ್ ಈ ಹಾಡನ್ನು ಹಾಡಿದ್ದಾರೆ. ಸದ್ಯ ಈ ಹಾಡು ಐದು ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.

ಚಿತ್ರದಲ್ಲಿ ಸಲ್ಮಾನ್ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಸಲ್ಲು ಲುಕ್ ಗಮನ ಸೆಳೆದಿದೆ. 1964 ರಿಂದ ಪ್ರಾರಂಭವಾಗುವ ಈ ಕತೆ 2010ರಲ್ಲಿ ಮುಕ್ತಾಯವಾಗುತ್ತೆ. ಈ ಎಲ್ಲಾ ಕಾಲಘಟ್ಟಕ್ಕೂ ಹೊಂದಿಕೊಳ್ಳವ ಹಾಗೆ ಸಲ್ಮಾನ್ ಗೆಟಪ್ ಬದಲಾಯಿಸಿಕೊಂಡಿದ್ದಾರೆ.
ಕತ್ರೀನಾ ಕೈಫ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಈದ್ ಹಬ್ಬದ ವಿಶೇಷವಾಗಿ ಜೂನ್ 5 ರಂದು 'ಭಾರತ್' ಸಿನಿಮಾ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











