ಸಲ್ಮಾನ್ ಖಾನ್ ಅಭಿನಯದ 'ಭಾರತ್' ಟ್ರೈಲರ್ ಔಟ್
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ 'ಭಾರತ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಫಸ್ಟ್ ಲುಕ್ ಮತ್ತು ವಯಸ್ಸಾದ ಸಲ್ಮಾನ್ ಖಾನ್ ಗೆಟಪ್ ರಿಲೀಸ್ ಮಾಡುವ ಮೂಲಕ ಚಿತ್ರಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದ 'ಭಾರತ್ ಚಿತ್ರದ ಟ್ರೈಲರ್ ಈಗ ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
'ಭಾರತ್' ಚಿತ್ರದಲ್ಲಿ ಸಲ್ಮಾನ್ ಖಾನ್ ಐದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ಭಾರತ್' ನೈಜ ಘಟನೆ ಆಧಾರಿತ ಸಿನಿಮಾ. ಆರು ದಶಕಗಳ ಕಾಲ ನಡೆಯುವ ಘಟನೆಯನ್ನು ಒಂದು ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅಲಿ ಅಬ್ಬಾಸ್ ಜಫರ್. 1964 ರಿಂದ ಪ್ರಾರಂಭವಾಗುವ ಈ ಕತೆ 2010ರಲ್ಲಿ ಮುಕ್ತಾಯವಾಗುತ್ತೆ. ಈ ಎಲ್ಲಾ ಕಾಲಘಟ್ಟಕ್ಕೂ ಹೊಂದಿಕೊಳ್ಳವ ಹಾಗೆ ಸಲ್ಮಾನ್ ಗೆಟಪ್ ಬದಲಾಯಿಸಿಕೊಂಡಿದ್ದಾರೆ.
ರೋಟ್ರೋ ಲುಕ್ ನಲ್ಲಿ ಮಿಂಚಿರುವ ಸಲ್ಮಾನ್ ಗೆ ನಟಿ ಕತ್ರೀನಾ ಕೈಫ್ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಪಕ್ಕಾ ದೇಸಿ ಲುಕ್ ನಲ್ಲಿ ಕತ್ರೀನಾ ಅಭಿಮಾನಿಗಳ ಗಮನ ಸಳೆದಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ 'ಟೈಗರ್ ಜಿಂದಾ ಹೈ' ಚಿತ್ರದಲ್ಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ 'ಭಾರತ್' ಮೂಲಕ ಮತ್ತೆ ಒಟ್ಟಿಗೆ ಮಿಂಚುತ್ತಿದ್ದಾರೆ.

ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ. ನಟಿ ತಬು, ಜಾಕಿ ಶ್ರಾಫ್, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಪಾತ್ರಗಳು ಗಮನಾರ್ಹವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.


Click it and Unblock the Notifications











