ವಿಡಿಯೋ : 'ಭಾರತ್' ಚಿತ್ರದ ಮೂರನೇ ಹಾಡು ಬಿಡುಗಡೆ
'ಭಾರತ್' ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಮತ್ತೆ ಸಲ್ಮಾನ್ ಈ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಈಗಾಗಲೇ, ಬಿಡುಗಡೆಯಾಗಿರುವ ಸ್ಲೋ ಮೋಷನ್ ಹಾಗೂ ಜಿಂದಾ ಹಾಡು ಹಿಟ್ ಆಗಿದೆ.
ಇಂದು (ಮೇ 22) ರಂದು ಚಿತ್ರದ ಮತ್ತೊಂದು ಹಾಡನ್ನು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ. ಈ ಹಾಡಿಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಾಡು ನೋಡಿದ ಪ್ರೇಕ್ಷಕರು ಪಾಸಿಟಿವ್ ಕಾಮೆಂಟ್ಸ್ ಮಾಡುತ್ತಿದ್ದಾರೆ. ಸದ್ಯ, ಈ ಹಾಡು 3 ಲಕ್ಷಕ್ಕಿಂತ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.
'ಭಾರತ್' ಚಿತ್ರದಲ್ಲಿ ದಿಶಾ ಪಟಾನಿ ಹಾಗೂ ಕತ್ರೀನಾ ಕೈಫ್ ನಾಯಕಿಯರಾಗಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಜೂನ್ 5 ರಂದು ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಸಲ್ಮಾನ್ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಸಲ್ಲು ಲುಕ್ ಗಮನ ಸೆಳೆದಿದೆ. 1964 ರಿಂದ ಪ್ರಾರಂಭವಾಗುವ ಈ ಕತೆ 2010ರಲ್ಲಿ ಮುಕ್ತಾಯವಾಗುತ್ತೆ. ಈ ಎಲ್ಲಾ ಕಾಲಘಟ್ಟಕ್ಕೂ ಹೊಂದಿಕೊಳ್ಳವ ಹಾಗೆ ಸಲ್ಮಾನ್ ಗೆಟಪ್ ಬದಲಾಯಿಸಿಕೊಂಡಿದ್ದಾರೆ.
ದೇಶ ಭಕ್ತಿ ಮೂಡಿಸುವ ಅನೇಕ ಅಂಶಗಳು ಸಿನಿಮಾದಲ್ಲಿ ಇದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.


Click it and Unblock the Notifications











